Joe Root: ರನ್ ಸರದಾರರ ಪಟ್ಟಿಯಲ್ಲಿ ಮತ್ತೊಂದು ಸ್ಥಾನ ಮೇಲೇರಿದ ಜೋ ರೂಟ್
Joe Root Records: ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ದಾಖಲೆ ಜೋ ರೂಟ್ ಹೆಸರಿನಲ್ಲಿದೆ. ಒಟ್ಟು 34 ಸೆಂಚುರಿ ಸಿಡಿಸುವ ಮೂಲಕ ರೂಟ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಇಂಗ್ಲೆಂಡ್ ಪರ ಅತ್ಯಧಿಕ ಟೆಸ್ಟ್ ರನ್ ಕಲೆಹಾಕಿದ ದಾಖಲೆ ಬರೆಯಲು ಜೋ ರೂಟ್ಗೆ ಬೇಕಿರುವುದು ಕೇವಲ 71 ರನ್ಗಳು ಮಾತ್ರ. ಹೀಗಾಗಿ ಮುಂಬರುವ ಟೆಸ್ಟ್ ಸರಣಿಗಳಲ್ಲಿ ಈ ದಾಖಲೆಯನ್ನು ನಿರೀಕ್ಷಿಸಬಹುದು.
1 / 7
ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 25 ರನ್ಗಳಿಸುವ ಮೂಲಕ ಜೋ ರೂಟ್ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ ಮತ್ತೊಂದು ಸ್ಥಾನ ಮೇಲೇರಿದ್ದಾರೆ. ಅದು ಸಹ ಲೆಜೆಂಡ್ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 13 ರನ್ ಬಾರಿಸಿದ್ದ ಜೋ, ದ್ವಿತೀಯ ಇನಿಂಗ್ಸ್ನಲ್ಲಿ 12 ರನ್ಗಳಿಸಿ ಔಟಾದರು.
2 / 7
ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜೋ ರೂಟ್ 6ನೇ ಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಈ ಸ್ಥಾನದಲ್ಲಿ ಶ್ರೀಲಂಕಾದ ಕುಮಾರ ಸಂಗಾಕ್ಕರ ಇದ್ದರು. 134 ಟೆಸ್ಟ್ ಪಂದ್ಯಗಳಲ್ಲಿ 233 ಇನಿಂಗ್ಸ್ ಆಡಿರುವ ಸಂಗಾಕ್ಕರ 38 ಶತಕ ಹಾಗೂ 52 ಅರ್ಧಶತಕಗಳೊಂದಿಗೆ ಒಟ್ಟು 12400 ರನ್ ಕಲೆಹಾಕಿದ್ದಾರೆ.
3 / 7
ಇದೀಗ 146 ಟೆಸ್ಟ್ ಪಂದ್ಯಗಳಲ್ಲಿ 237 ಇನಿಂಗ್ಸ್ ಆಡಿರುವ ಜೋ ರೂಟ್ 34 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 12402 ರನ್ ಕಲೆಹಾಕಿದ್ದಾರೆ. ಈ ಮೂಲಕ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕಿ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.
4 / 7
ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಮಾಜಿ ನಾಯಕ ಅಲಿಸ್ಟರ್ ಕುಕ್ ಹೆಸರಿನಲ್ಲಿದೆ. 161 ಟೆಸ್ಟ್ ಪಂದ್ಯಗಳಲ್ಲಿ 291 ಇನಿಂಗ್ಸ್ ಆಡಿರುವ ಕುಕ್ 26562 ಎಸೆತಗಳನ್ನು ಎದುರಿಸಿ 12472 ರನ್ ಬಾರಿಸಿದ್ದಾರೆ. ಈ ವೇಳೆ 33 ಶತಕ ಹಾಗೂ 57 ಅರ್ಧಶತಕಗಳನ್ನು ಸಿಡಿಸಿದ್ದಾರೆ.
5 / 7
ಸದ್ಯ 12402 ರನ್ ಕಲೆಹಾಕಿರುವ ಜೋ ರೂಟ್ ಮುಂಬರುವ ಪಂದ್ಯಗಳಲ್ಲಿ 71 ರನ್ಗಳಿಸಿದರೆ ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹಾಗೆಯೇ ಮುಂದಿನ ಟೆಸ್ಟ್ ಸರಣಿಗಳ ಮೂಲಕ 887 ರನ್ ಕಲೆಹಾಕಿದರೆ ಟೆಸ್ಟ್ನಲ್ಲಿ 13288 ರನ್ಗಳಿಸಿ 4ನೇ ಸ್ಥಾನ ಅಲಂಕರಿಸಿರುವ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಬಹುದು.
6 / 7
ಹಾಗೆಯೇ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲೀಕ ಟೆಸ್ಟ್ ದಾಖಲೆಯನ್ನು ಮುರಿಯಲು ಜೋ ರೂಟ್ ಇನ್ನೂ 3520 ರನ್ಸ್ ಕಲೆಹಾಕಬೇಕು. ಸದ್ಯ 33 ವಯಸ್ಸಿನ ಜೋ ರೂಟ್ ಮುಂದಿನ ಮೂರು ನಾಲ್ಕು ವರ್ಷಗಳ ಕಾಲ ಉತ್ತಮ ಫಾರ್ಮ್ನಲ್ಲಿ ಬ್ಯಾಟ್ ಬೀಸಿದರೆ ಸಚಿನ್ ಹೆಸರಿನಲ್ಲಿರುವ ರನ್ ಸರದಾರನ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.
7 / 7
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ 200 ಟೆಸ್ಟ್ ಪಂದ್ಯಗಳಲ್ಲಿ 329 ಇನಿಂಗ್ಸ್ ಆಡಿರುವ ಸಚಿನ್ 51 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 15921 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಜೋ ರೂಟ್ ಮುರಿಯಲಿದ್ದಾರಾ ಕಾದು ನೋಡಬೇಕಿದೆ.