‘ಡಾನ್​’ ವಿಶ್ವ ದಾಖಲೆ ಶೇಕ್ ಮಾಡಿದ ‘ರೂಟ್’

Updated on: Aug 05, 2025 | 2:30 PM

India vs England 5th Test: ಭಾರತದ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲನುಭವಿಸಿದೆ. ಈ ಸೋಲಿನ ನಡುವೆ ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಕ್ರಿಕೆಟ್ ದಂತಕಥೆ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

1 / 5
ಇಂಗ್ಲೆಂಡ್​ನ ಟೆಸ್ಟ್​ ಸ್ಪೆಷಲಿಸ್ಟ್ ಜೋ ರೂಟ್ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿ ಭರ್ಜರಿ ದಾಖಲೆ ನಿರ್ಮಿಸಿರುವುದು ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್​ ಅವರ ವರ್ಲ್ಡ್​ ರೆಕಾರ್ಡ್ ಅನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಕೆನ್ನಿಂಗ್ಟನ್​ ಓವಲ್​ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಜೋ ರೂಟ್ 105 ರನ್​ ಕಲೆಹಾಕಿದ್ದರು.

2 / 5
ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಎದುರಾಳಿ ತಂಡವೊಂದರ ವಿರುದ್ಧ 2000+ ರನ್​ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಇಂಗ್ಲೆಂಡ್​ನ ಏಕೈಕ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

3 / 5
ಜೋ ರೂಟ್​ಗೂ ಮುನ್ನ ತವರಿನಲ್ಲಿ ತಂಡವೊಂದರ ವಿರುದ್ಧ ಟೆಸ್ಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ​ವಿಶ್ವ ದಾಖಲೆ ಬರೆದವರು ಡಾನ್ ಬ್ರಾಡ್ಮನ್​. ಆಸ್ಟ್ರೇಲಿಯಾದ ದಂತಕಥೆ ಇಂಗ್ಲೆಂಡ್ ವಿರುದ್ಧ ಆಸೀಸ್ ಪಿಚ್​ನಲ್ಲಿ ಬರೋಬ್ಬರಿ 2354 ರನ್​ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದೀಗ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಆಗಿ ಜೋ ರೂಟ್ ಹೊರಹೊಮ್ಮಿದ್ದಾರೆ.

4 / 5
ಜೋ ರೂಟ್ ಭಾರತದ ವಿರುದ್ಧ ಇಂಗ್ಲೆಂಡ್​ನಲ್ಲಿ ಈವರೆಗೆ 2111 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ತವರಿನಲ್ಲಿ ತಂಡವೊಂದರ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನು ರೂಟ್ ಮುಂಬರುವ ಭಾರತದ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದರೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಮುರಿಯಬಹುದು.

5 / 5
ಈ ದಾಖಲೆಯಲ್ಲದೆ, ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ರೂಟ್​ ಹೆಸರಿನಲ್ಲಿದೆ. ಭಾರತದ ವಿರುದ್ಧದ ಈವರೆಗೆ 63 ಇನಿಂಗ್ಸ್ ಆಡಿರುವ ಜೋ ರೂಟ್ ಒಟ್ಟು 13 ಶತಕಗಳನ್ನು ಬಾರಿಸಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಹಾಗೆಯೇ ಭಾರತ-ಇಂಗ್ಲೆಂಡ್ ನಡುವಣ ಸರಣಿಯಲ್ಲಿ 3000+ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಸಹ ತಮ್ಮದಾಗಿಸಿಕೊಂಡಿದ್ದಾರೆ.