CSA T20: ಜೋಹಾನ್ಸ್ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಐವರು ಆಟಗಾರರು ಆಯ್ಕೆ
TV9 Web | Updated By: ಝಾಹಿರ್ ಯೂಸುಫ್
Updated on:
Aug 16, 2022 | 6:24 PM
Johannesburg Super Kings squad: ಸಿಎಸ್ಕೆ ತಂಡದ ಮಾಜಿ ಆಟಗಾರ ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಕೂಡ ಸ್ಥಾನ ಪಡೆದಿದ್ದಾರೆ. ಅದರಂತೆ ಜೋಹಾನ್ಸ್ಬರ್ಗ್ ತಂಡಕ್ಕೆ ಆಯ್ಕೆಯಾಗಿರುವ 5 ಆಟಗಾರರ ಪರಿಚಯ ಇಲ್ಲಿದೆ.
1 / 8
ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಜೋಹಾನ್ಸ್ಬರ್ಗ್ ತಂಡವನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಇದೀಗ ತಂಡಕ್ಕೆ 5 ಆಟಗಾರರನ್ನು ಆಯ್ಕೆ ಮಾಡಿದೆ. ಈ ಹೊಸ ಲೀಗ್ನ ಹರಾಜಿಗೂ ಮುನ್ನ ಒಟ್ಟು 5 ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದ್ದು, ಅದರಂತೆ ಜೋಹಾನ್ಸ್ಬರ್ಗ್ ಸೂಪರ್ ಕಿಂಗ್ಸ್ ಐವರನ್ನು ಫೈನಲ್ ಮಾಡಿದೆ.
2 / 8
ವಿಶೇಷ ಎಂದರೆ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಮೊಯೀನ್ ಅಲಿ ಹಾಗೂ ಮಹೇಶ್ ತೀಕ್ಷಣ ಇಲ್ಲೂ ಕೂಡ ಆಯ್ಕೆಯಾಗಿದ್ದಾರೆ. ಹಾಗೆಯೇ ಸಿಎಸ್ಕೆ ತಂಡದ ಮಾಜಿ ಆಟಗಾರ ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಕೂಡ ಸ್ಥಾನ ಪಡೆದಿದ್ದಾರೆ. ಅದರಂತೆ ಜೋಹಾನ್ಸ್ಬರ್ಗ್ ತಂಡಕ್ಕೆ ಆಯ್ಕೆಯಾಗಿರುವ 5 ಆಟಗಾರರ ಪರಿಚಯ ಇಲ್ಲಿದೆ...
3 / 8
ಫಾಫ್ ಡುಪ್ಲೆಸಿಸ್ (ಸೌತ್ ಆಫ್ರಿಕಾ)
4 / 8
ಗೆರಾಲ್ಡ್ ಕೊಯೆಟ್ಜಿ (ಸೌತ್ ಆಫ್ರಿಕಾ)
5 / 8
ಮಹೇಶ್ ತೀಕ್ಷಣ (ಶ್ರೀಲಂಕಾ)
6 / 8
ಮೊಯೀನ್ ಅಲಿ (ಇಂಗ್ಲೆಂಡ್)
7 / 8
ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್)
8 / 8
ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಹರಾಜಿಗೂ ಮುನ್ನ ಪ್ರತಿ ತಂಡವು ಗರಿಷ್ಠ 5 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಬೇಕಾಗುತ್ತದೆ. ಇಲ್ಲಿ ಪ್ರತಿ ತಂಡವು 10 ದಕ್ಷಿಣ ಆಫ್ರಿಕಾ ಮತ್ತು 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಪ್ಲೇಯಿಂಗ್ ಇಲೆವೆನ್ನಲ್ಲಿ 7 ಸೌತ್ ಆಫ್ರಿಕಾದ ಆಟಗಾರರಿಗೆ ಮತ್ತು 4 ವಿದೇಶಿ ಆಟಗಾರರಿಗೆ ಅವಕಾಶ ಇರಲಿದೆ.