Josh Hazlewood: ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಆರ್ಸಿಬಿಗೆ ದೊಡ್ಡ ಶಾಕ್: ಜೋಶ್ ಹ್ಯಾಜ್ಲೆವುಡ್ ಐಪಿಎಲ್ನಿಂದ ಔಟ್
RCB vs GT, IPL 2023: ಆರ್ಸಿಬಿ ಹಾಗೂ ಗುಜರಾತ್ ಕದನ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಬೆಂಗಳೂರು ತಂಡಕ್ಕೆ ಹಿನ್ನಡೆ ಆಗಿದೆ. ತಂಡದ ಸ್ಟಾರ್ ಬೌಲರ್ ಜೋಶ್ ಹ್ಯಾಜ್ಲೆವುಡ್ ಇಂದಿನ ಪಂದ್ಯ ಸೇರಿದಂತೆ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿಂದು ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡ ಸೆಣೆಸಾಟ ನಡೆಸಲಿದೆ. ಪ್ಲೇ ಆಫ್ಗೆ ಲಗ್ಗೆಯಿಡಲು ಆರ್ಸಿಬಿ ಈ ಪಂದ್ಯ ಗೆಲ್ಲಲೇ ಬೇಕು. ಆದರೆ, ಇದರ ನಡುವೆ ಫಾಫ್ ಪಡೆಗೆ ದೊಡ್ಡ ಆಘಾತ ಉಂಟಾಗಿದೆ.
2 / 7
ಆರ್ಸಿಬಿ ಹಾಗೂ ಜಿಟಿ ಕದನ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಬೆಂಗಳೂರು ತಂಡಕ್ಕೆ ಹಿನ್ನಡೆ ಆಗಿದೆ. ತಂಡದ ಸ್ಟಾರ್ ಬೌಲರ್ ಜೋಶ್ ಹ್ಯಾಜ್ಲೆವುಡ್ ಇಂದಿನ ಪಂದ್ಯ ಸೇರಿದಂತೆ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
3 / 7
ಪಾದದ ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಹ್ಯಾಜ್ಲೆವುಡ್ ಸಂಪೂರ್ಣ ಟೂರ್ನಿಯಿಂದ ಔಟ್ ಆಗಿದ್ದು, ಇಂದು ಅಥವಾ ನಾಳೆ ತವರಿಗೆ ಮರಳಲಿದ್ದಾರೆ ಎಂದು ವರದಿ ಆಗಿದೆ. ಆರ್ಸಿಬಿಯ ಪ್ರಮುಖ ಬೌಲರ್ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ನಷ್ಟ ಎಂದೇ ಹೇಳಬಹುದು.
4 / 7
ಐಪಿಎಲ್ 2023 ಟೂರ್ನಿ ಆರಂಭಕ್ಕೂ ಮುನ್ನವೇ ಜೋಶ್ ಇಂಜುರಿಗೆ ತುತ್ತಾಗಿದ್ದರು. ಇವರು ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಕೂಡ ಹೊರಬಿದ್ದಿದ್ದರು. ಬಳಿಕ ಆರ್ಸಿಬಿ ಆರಂಭದ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.
5 / 7
ಹ್ಯಾಜ್ಲೆವುಡ್ ಇಂಜುರಿಯಿಂದ ಸಂಪೂರ್ಣ ಗುಣಮುಖರಾಗಿ ಆರ್ಸಿಬಿಯ ಎಂಟು ಪಂದ್ಯ ಮುಗಿದ ಬಳಿಕ ಕಣಕ್ಕಿಳಿದರು. ಆದರೆ, ಪುನಃ ಇವರಿಗೆ ಕಾಲಿನ ಹಿಂಭಾಗ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಇವರು ಆಡಿರಲಿಲ್ಲ. ಇದೀಗ ಸಂಪೂರ್ಣ ಟೂರ್ನಿಯಿಂದ ಹೊರಗುಳಿದಿದ್ದಾರೆ.
6 / 7
ಐಪಿಎಲ್ 2023 ಟೂರ್ನಿಯುದ್ದಕ್ಕೂ ರಾಯಲ್ ಚಾಲೆಂಜರ್ಸ್ ಇಂಜುರಿಯನ್ನು ಅನುಭವಿಸುತ್ತಲೇ ಬಂದಿದೆ. ಟೂರ್ನಿ ಆರಂಭವಾಗಿ ಕೆಲ ಪಂದ್ಯದ ಬಳಿಕ ಗಾಯದಿಂದ ಡೇವಿಡ್ ವಿಲ್ಲೆ ಹಾಗೂ ರೀಸೆ ಟೋಪ್ಲಿ ನಿರ್ಗಮಿಸಿದರೆ ಈಗ ಜೋಶ್ ಹ್ಯಾಜ್ಲೆವುಡ್ ತವರಿಗೆ ಮರಳಲು ಸಜ್ಜಾಗಿದ್ದಾರೆ.
7 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಇಂದು ಸಂಜೆ 7.30 ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಟಾಸ್ 7 ಗಂಟೆಗೆ ನಡೆಯಲಿದ್ದು, ಆರ್ಸಿಬಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.