ಒಂದೇ ದಿನ 10 ತಂಡಗಳ ಮುಖಾಮುಖಿ: 100 ಸಿಕ್ಸ್​ಗಳ ನಿರೀಕ್ಷೆ..!

| Updated By: ಝಾಹಿರ್ ಯೂಸುಫ್

Updated on: Jul 31, 2022 | 1:04 PM

IND-W vs PAK-W, Commonwealth Games 2022: ಭಾರತ-ಪಾಕ್ ಮಹಿಳಾ ತಂಡಗಳು ಇಂದು ಆಡಲಿದೆ. ಹಾಗಿದ್ರೆ ಇಂದು ನಡೆಯುವ 5 ಪಂದ್ಯಗಳಾವುವು ಎಂದು ನೋಡೋಣ...

1 / 6
ಭಾನುವಾರ (ಜುಲೈ 31) ರಂದು ಟಿ20 ಕ್ರಿಕೆಟ್ ಅಂಗಳಗಳಲ್ಲಿ ಸಿಕ್ಸರ್​ಗಳ ಸುರಿಮಳೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಒಂದೇ ದಿನ 5 ಪಂದ್ಯಗಳು ನಡೆಯಲಿದೆ. ಅಂದರೆ 10 ತಂಡಗಳಿಂದ 100 ಸಿಕ್ಸ್​ಗಳನ್ನು ನಿರೀಕ್ಷಿಸಬಹುದು. ವಿಶೇಷ ಎಂದರೆ ಈ ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ್ ಕೂಡ ಮುಖಾಮುಖಿಯಾಗುತ್ತಿದೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿನ 2ನೇ ಪಂದ್ಯದಲ್ಲಿ ಭಾರತ-ಪಾಕ್ ಮಹಿಳಾ ತಂಡಗಳು ಇಂದು ಆಡಲಿದೆ. ಹಾಗಿದ್ರೆ ಇಂದು ನಡೆಯುವ 5 ಪಂದ್ಯಗಳಾವುವು ಎಂದು ನೋಡೋಣ...

2 / 6
ಭಾರತ vs ಪಾಕಿಸ್ತಾನ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇಂದು ಭಾರತ-ಪಾಕ್ ನಡುವಣ ಮಹಿಳಾ ಟಿ20 ಪಂದ್ಯ ನಡೆಯಲಿದೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30ರಿಂದ ಶುರುವಾಗಲಿದೆ.

3 / 6
ನ್ಯೂಜಿಲೆಂಡ್ vs ಸ್ಕಾಟ್ಲೆಂಡ್: ಮತ್ತೊಂದೆಡೆ ಪುರುಷರ ಕ್ರಿಕೆಟ್​ನಲ್ಲಿ ಇಂದು ನ್ಯೂಜಿಲೆಂಡ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಸಿಕ್ಸ್​-ಫೋರ್​ಗಳನ್ನು ಎದುರು ನೋಡಬಹುದು. ಈ ಪಂದ್ಯ ಕೂಡ ಭಾರತೀಯ ಕಾಲಮಾನ ಮಧ್ಯಾಹ್ನ 3.30ರಿಂದ ಪ್ರಾರಂಭವಾಗಲಿದೆ.

4 / 6
ಜಿಂಬಾಬ್ವೆ ವಿರುದ್ಧ ಬಾಂಗ್ಲಾದೇಶ: ಮೊದಲ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಜಿಂಬಾಬ್ವೆ ತಂಡ 3 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಬಾಂಗ್ಲಾ ವಿರುದ್ದ ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ ಜಿಂಬಾಬ್ವೆ ತಂಡ. ಹೀಗಾಗಿ ಈ ಪಂದ್ಯದಲ್ಲೂ ಸಿಕ್ಸರ್​ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದೆ.

5 / 6
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ: ಎರಡು ಬಲಿಷ್ಠ ತಂಡಗಳ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7 ಗಂಟೆಯಿಂದ ಶುರುವಾಗಲಿದೆ.  ಬಲಿಷ್ಠ ಬ್ಯಾಟ್ಸ್​ಮನ್​ಗಳನ್ನು ಹೊಂದಿರುವ ಉಭಯ ತಂಡಗಳಿಂದ ಈ ಟಿ20 ಪಂದ್ಯದಲ್ಲಿ ಸಿಕ್ಸರ್​ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು.

6 / 6
ಆಸ್ಟ್ರೇಲಿಯಾ vs ಬಾರ್ಬಡೋಸ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಬಾರ್ಬಡೋಸ್ ಮಹಿಳಾ ತಂಡಗಳ ನಡುವಿನ ಪಂದ್ಯ ಕೂಡ ಇಂದು ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 10:30ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ಬ್ಯಾಟ್​ನಿಂದ ಭರ್ಜರಿ ಸಿಕ್ಸರ್​ಗಳನ್ನು ಎದುರು ನೋಡಬಹುದು. ಅದರಂತೆ ಇಂದು ನಡೆಯಲಿರುವ ಈ 5 ಪಂದ್ಯಗಳಿಂದ 100 ಸಿಕ್ಸ್​ಗಳು ಮೂಡಿಬರಲಿದೆಯಾ ಕಾದು ನೋಡಬೇಕಿದೆ.