4ನೇ ಇನಿಂಗ್ಸ್​ನಲ್ಲಿ ದ್ವಿಶತಕ… ಜಸ್ಟಿನ್ ಗ್ರೀವ್ಸ್ ವಿಶ್ವ ದಾಖಲೆ

Updated on: Dec 06, 2025 | 12:10 PM

New Zealand vs West Indies, 1st Test: ಈ ಪಂದ್ಯದಲ್ಲಿ ಮೊದಲು ಬ್ಯಾಡ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 231 ರನ್​ಗಳಿಸಿದರೆ, ವೆಸ್ಟ್ ಇಂಡೀಸ್ 167 ರನ್​ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ 466 ರನ್​ ಬಾರಿಸಿ ಡಿಕ್ಲೇರ್ ಘೋಷಿಸಿತು. ಅದರಂತೆ 531 ರನ್​ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 457 ರನ್​ಗಳಿಸಿ ಪಂದ್ಯವನ್ನು ಡ್ರಾಗೊಳಿಸಿದೆ.

1 / 5
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಇನಿಂಗ್ಸ್​ನಲ್ಲಿ ಡಬಲ್ ಸೆಂಚುರಿ ಸಿಡಿಸಿರುವುದು ಕೇವಲ 7 ಬ್ಯಾಟರ್​ಗಳು ಮಾತ್ರ. ಈ ಸಾಧನೆ ಮಾಡಿದ ಏಳನೇ ಬ್ಯಾಟರ್ ಜಸ್ಟಿನ್ ಗ್ರೀವ್ಸ್. ಅದು ಕೂಡ ವೆಸ್ಟ್ ಇಂಡೀಸ್ ಪರ ಸ್ಮರಣೀಯ ಇನಿಂಗ್ಸ್ ಆಡುವ ಮೂಲಕ ಎಂಬುದು ವಿಶೇಷ. 

2 / 5
ಕ್ರೈಸ್ಟ್​​ಚರ್ಚ್​ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್​ನಲ್ಲಿ ವಿಂಡೀಸ್ ಪಡೆ 531 ರನ್​ಗಳ ಗುರಿ ಪಡೆದಿತ್ತು. ಈ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 277 ರನ್​ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಜಸ್ಟಿನ್ ಗ್ರೀವ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶೀಸಿದರು.

3 / 5
ಜವಾಬ್ದಾರಿಯುತ ಇನಿಂಗ್ಸ್ ಆಡಿದ ಗ್ರೀವ್ಸ್ ಬರೋಬ್ಬರಿ 388 ಎಸೆತಗಳನ್ನು ಎದುರಿಸಿದರು. ಈ ವೇಳೆ 19 ಫೋರ್​ಗಳನ್ನು ಬಾರಿಸುವ ಮೂಲಕ ಒಟ್ಟು 202 ರನ್ ಕಲೆಹಾಕಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ನಾಲ್ಕನೇ ಇನಿಂಗ್ಸ್​​ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ 7ನೇ ಬ್ಯಾಟರ್ ಎನಿಸಿಕೊಂಡರು.

4 / 5
ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ವೆಸ್ಟ್ ಇಂಡೀಸ್​​ನ ಜಾರ್ಜ್ ಹೆಡ್ಲಿ (1930),  ಇಂಗ್ಲೆಂಡ್​ನ ಬಿಲ್ ಹೆಡ್ರಿಚ್ (1939), ಭಾರತದ ಸುನಿಲ್ ಗವಾಸ್ಕರ್ (1984), ನ್ಯೂಝಿಲೆಂಡ್​ನ ನಾಥನ್ ಅಸ್ಟ್ಲೆ (2002) ಹಾಗೂ ವೆಸ್ಟ್ ಇಂಡೀಸ್​ನ ಕೈಲ್ ಮೇಯರ್ಸ್ (2021) ಮಾತ್ರ.

5 / 5
ಇದೀಗ ನ್ಯೂಝಿಲೆಂಡ್ ವಿರುದ್ಧ ಕೊನೆಯ ಇನಿಂಗ್ಸ್​ನಲ್ಲಿ ಅಜೇಯ 202 ರನ್​ ಬಾರಿಸಿ ಜಸ್ಟಿನ್ ಗ್ರೀವ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 4ನೇ ಇನಿಂಗ್ಸ್​ನಲ್ಲಿ ಡಬಲ್ ಸೆಂಚುರಿ ಸಿಡಿಸಿದ ವಿಶ್ವದ 7ನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.