AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದ ಹೀನಾಯ ದಾಖಲೆ… ಒಂದೇ ದಿನ 5 ಕ್ಯಾಚ್ ಕೈಚೆಲ್ಲಿದ ಇಂಗ್ಲೆಂಡ್

Australia vs England, 2nd Test: ಆ್ಯಶಸ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 334 ರನ್ ಪೇರಿಸಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ಆಸ್ಟ್ರೇಲಿಯಾ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 378 ರನ್​ ಕಲೆಹಾಕಿದೆ.

ಝಾಹಿರ್ ಯೂಸುಫ್
|

Updated on: Dec 06, 2025 | 8:30 AM

Share
Ashes 2025: ಟೆಸ್ಟ್​ ಪಂದ್ಯವೊಂದರ ದಿನದಾಟವೊಂದರಲ್ಲಿ ಎಷ್ಟು ಕ್ಯಾಚ್ ಕೈಚೆಲ್ಲಬಹುದು? ಅದು ಸಹ ಆಸ್ಟ್ರೇಯಾದಂತಹ ಬಲಿಷ್ಠ ತಂಡಗಳ ವಿರುದ್ಧ..? ಒಂದು... ಎರಡು... ಮೂರು... ನಾಲ್ಕು..? ಇಂಗ್ಲೆಂಡ್ ತಂಡವು ಬರೋಬ್ಬರಿ 5 ಕ್ಯಾಚ್​ಗಳನ್ನು ಕೈಚೆಲ್ಲಿಕೊಂಡಿದೆ.

1 / 5
ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 334 ರನ್​ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯನ್ನರಿಗೆ ಇಂಗ್ಲೆಂಡ್ 5 ಜೀವದಾನಗಳನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.

2 / 5
ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್ ಆರಂಭದಲ್ಲೇ ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮಿ ಸ್ಮಿತ್, ಟ್ರಾವಿಸ್ ಹೆಡ್ ಅವರ ಕ್ಯಾಚ್ ಕೈಚೆಲ್ಲಿದ್ದರು. ಇದಾದ ಬಳಿಕ ಅಲೆಕ್ಸ್ ಕ್ಯಾರಿ ನೀಡಿದ ಸುಲಭ ಕ್ಯಾಚ್ ಹಿಡಿಯುವಲ್ಲಿ ಬೆನ್ ಡಕೆಟ್ ವಿಫಲರಾದರು. ಆ ನಂತರ ಜೋಶ್ ಇಂಗ್ಲಿಸ್ ಅವರ ಕ್ಯಾಚ್ ಸಹ ಡಕೆಟ್ ಕೈ ಬಿಟ್ಟರು.

3 / 5
ಮೊದಲ ಜೀವದಾನದ ಬಳಿಕ ಅಲೆಕ್ಸ್ ಕ್ಯಾರಿ ಜೋ ರೂಟ್​ಗೆ ಕ್ಯಾಚ್ ನೀಡಿದ್ದರು. ಆದರೆ ಚೆಂಡನ್ನು ಹಿಡಿಯುವಲ್ಲಿ ರೂಟ್ ಕೂಡ ವಿಫಲರಾದರು.ಇನ್ನು ಮೈಕೆಲ್ ನೇಸರ್ ನೀಡಿದ ಸುಲಭ ಕ್ಯಾಚ್ ಅನ್ನು ಬ್ರೈಡನ್ ಕಾರ್ಸ್ ಕೈಚೆಲ್ಲಿದರು.  ಈ ಮೂಲಕ ಇಂಗ್ಲೆಂಡ್ ತಂಡವು ಒಂದೇ ದಿನದಲ್ಲಿ ಕ್ಯಾಚ್​ಗಳನ್ನು ಕೈಚೆಲ್ಲಿ ಆಸ್ಟ್ರೇಲಿಯಾದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

4 / 5
ಅಂದಹಾಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ದಿನ ಅತ್ಯಧಿಕ ಕ್ಯಾಚ್ ಕೈ ಚೆಲ್ಲಿದ ಅತ್ಯಂತ ಹೀನಾಯ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿದೆ. 1985 ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತೀಯ ಫೀಲ್ಡರ್​ಗಳು ಬರೋಬ್ಬರಿ 7 ಕ್ಯಾಚ್​ಗಳನ್ನು ಕೈಚೆಲ್ಲಿದ್ದರು. ಇದೀಗ 5 ಕ್ಯಾಚ್​ಗಳನ್ನು ಕೈ ಬಿಡುವ ಮೂಲಕ ಇಂಗ್ಲೆಂಡ್ ತಂಡವು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ.

5 / 5