Updated on: Apr 13, 2023 | 11:29 PM
IPL 2023: ಮೊಹಾಲಿಯಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದದ ಮೂಲಕ ಪಂಜಾಬ್ ಕಿಂಗ್ಸ್ ವೇಗಿ ಕಗಿಸೊ ರಬಾಡ ಹೊಸ ದಾಖಲೆ ಬರೆದಿದ್ದಾರೆ. ಅದು ಅಂತಿಂಥ ದಾಖಲೆಯಲ್ಲ ಎಂಬುದೇ ಇಲ್ಲಿ ವಿಶೇಷ.
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ವೃದ್ಧಿಮಾನ್ ಸಾಹ ವಿಕೆಟ್ ಪಡೆಯುವ ಮೂಲಕ ಕಗಿಸೊ ರಬಾಡ ಐಪಿಎಲ್ನಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದರು. ಆದರೆ ಇದು ಇತರೆ ಎಲ್ಲಾ ಬೌಲರ್ಗಿಂತ ವೇಗವಾಗಿ ಎಂಬುದು ಇಲ್ಲಿ ಗಮನಾರ್ಹ.
ಅಂದರೆ ಐಪಿಎಲ್ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 100 ವಿಕೆಟ್ ಕಬಳಿಸಿದ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು. ಮಲಿಂಗಾ 1622 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
ಆದರೆ ಕಗಿಸೊ ರಬಾಡ ಕೇವಲ 1438 ಎಸೆತಗಳಲ್ಲಿ 100 ವಿಕೆಟ್ ಕಬಳಿಸುವ ಮೂಲಕ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಕಡಿಮೆ ಎಸೆತಗಳಲ್ಲಿ ವೇಗವಾಗಿ ನೂರು ವಿಕೆಟ್ ಬೌಲರ್ ಎನಿಸಿಕೊಂಡಿದ್ದಾರೆ.
ಹಾಗೆಯೇ ಅತೀ ಕಡಿಮೆ ಪಂದ್ಯಗಳ ಮೂಲಕ 100 ವಿಕೆಟ್ ಕಬಳಿಸಿದ ದಾಖಲೆಯನ್ನೂ ಕೂಡ ರಬಾಡ ತಮ್ಮದಾಗಿಸಿಕೊಂಡಿದ್ದಾರೆ. 64 ಪಂದ್ಯಗಳಲ್ಲಿ ನೂರು ವಿಕೆಟ್ ಉರುಳಿಸಿ, ಈ ಹಿಂದೆ 70 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದ ಮಲಿಂಗಾ ಅವರ ದಾಖಲೆಯನ್ನು ಮುರಿದಿದ್ದಾರೆ. ಇನ್ನು ಐಪಿಎಲ್ನಲ್ಲಿ ಕಡಿಮೆ ಎಸೆತಗಳಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದ ಟಾಪ್-4 ಬೌಲರ್ಗಳ ಪಟ್ಟಿ ಈ ಕೆಳಗಿನಂತಿದೆ.
1- ಕಗಿಸೊ ರಬಾಡ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಬೌಲಿಂಗ್ ಮಾಡಿರುವ ಕಗಿಸೊ ರಬಾಡ 1438 ಎಸೆತಗಳಲ್ಲಿ 100 ವಿಕೆಟ್ಗಳನ್ನು ಪಡೆದಿದ್ದಾರೆ.
2- ಲಸಿತ್ ಮಾಲಿಂಗ: ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ 100 ವಿಕೆಟ್ ಕಬಳಿಸಲು ಒಟ್ಟು 1622 ಎಸೆತಗಳನ್ನು ಎಸೆದಿದ್ದರು.
3- ಡ್ವೇನ್ ಬ್ರಾವೊ: ಮುಂಬೈ ಇಂಡಿಯನ್ಸ್, ಸಿಎಸ್ಕೆ ಹಾಗೂ ಗುಜರಾತ್ ಲಯನ್ಸ್ ಪರ ಆಡಿರುವ ಡ್ವೇನ್ ಬ್ರಾವೊ 1619 ಎಸೆತಗಳಲ್ಲಿ 100 ವಿಕೆಟ್ ಕಬಳಿಸಿದ್ದರು.
4- ಹರ್ಷಲ್ ಪಟೇಲ್: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ಪರ ಬೌಲಿಂಗ್ ಮಾಡಿರುವ ಹರ್ಷಲ್ ಪಟೇಲ್ 1647 ಎಸೆತಗಳ ಮೂಲಕ 100 ವಿಕೆಟ್ಗಳನ್ನು ಕಬಳಿಸಿದ್ದಾರೆ.