
ಕೆಲ ದಿನಗಳ ಹಿಂದೆಯಷ್ಟೇ 700 ಟಿ20 ಪಂದ್ಯಗಳನ್ನಾಡುವ ಮೂಲಕ ವಿಶ್ವ ದಾಖಲೆ ಬರೆದಿದ್ದ ಕೀರನ್ ಪೊಲಾರ್ಡ್ (Kieron Pollard) ಇದೀಗ ಮತ್ತೊಂದು ದಾಖಲೆಗೆ ಕೊರೊಳೊಡ್ಡಿದ್ದಾರೆ. ಅದು ಕೂಡ ಟಿ20 ರನ್ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರುವ ಮೂಲಕ ಎಂಬುದು ವಿಶೇಷ.

ಇದೀಗ ಈ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಪೊಲಾರ್ಡ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 633 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 9273 ಎಸೆತಗಳನ್ನು ಎದುರಿಸಿರುವ ಅವರು ಬರೋಬ್ಬರಿ 14000 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಕ್ರಿಸ್ ಗೇಲ್. ಟಿ20 ಕ್ರಿಕೆಟ್ನಲ್ಲಿ 455 ಇನಿಂಗ್ಸ್ ಆಡಿರುವ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದ ರನ್ ಸರದಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಇನ್ನು ಕೀರನ್ ಪೊಲಾರ್ಡ್ 563 ರನ್ಗಳಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಸಿದ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆ ಮುರಿಯಲು ಕೀರನ್ ಪೊಲಾರ್ಡ್ಗೆ ಬೇಕಿರುವುದು 563 ರನ್ಗಳು ಮಾತ್ರ. ಅತ್ತ ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಟರ್ನ್ಯಾಷನಲ್ ಟಿ20 ಲೀಗ್, ಮೇಜರ್ ಲೀಗ್ ಟಿ20 ಟೂರ್ನಿಗಳಲ್ಲಿ ಕಣಕ್ಕಿಳಿಯುತ್ತಿರುವ ಪೊಲಾರ್ಡ್ ಗೇಲ್ ಅವರ ವಿಶ್ವ ದಾಖಲೆ ಮುರಿದರೂ ಅಚ್ಚರಿಪಡಬೇಕಿಲ್ಲ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್. ಟಿ20 ಕ್ರಿಕೆಟ್ನಲ್ಲಿ 455 ಇನಿಂಗ್ಸ್ ಆಡಿರುವ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದ ರನ್ ಸರದಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.