ಸಿಕ್ಸರ್​ಗಳ ಸುರಿಮಳೆ… ಪವರ್​ಫುಲ್ ದಾಖಲೆ ಬರೆದ ಪೊಲಾರ್ಡ್

Updated on: Aug 26, 2025 | 7:59 AM

Kieron Pollard Records: 38 ವರ್ಷದ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ಫಾರ್ಮ್​ ಮುಂದುವರೆಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಪೊಲಾರ್ಡ್ ಇದೀಗ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಸಹ ಐಪಿಎಲ್, ಸಿಪಿಎಲ್​ ಮೂಲಕ ಎಂಬುದು ವಿಶೇಷ.

1 / 5
ಕೆರಿಬಿಯನ್‌ ದೈತ್ಯ ಕೀರನ್ ಪೊಲಾರ್ಡ್ (Kieron Pollard) ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಸಿಕ್ಸರ್​ಗಳ ಸುರಿಮಳೆಯೊಂದಿಗೆ ಎಂಬುದು ವಿಶೇಷ. ಸಿಪಿಎಲ್​ನ 10ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ವಿರುದ್ಧ ಪೊಲಾರ್ಡ್ 6 ಸರ್ಜರಿ ಸಿಕ್ಸ್ ಗಳೊಂದಿಗೆ 65 ರನ್ ಬಾರಿಸಿದ್ದರು.

2 / 5
ಈ ಆರು ಸಿಕ್ಸರ್​ಗಳೊಂದಿಗೆ ಕೆರಿಬಿಯನ್ ಪ್ರೀಮಿಯರ್‌ ಲೀಗ್‌‌ನಲ್ಲಿ 200+ ಸಿಕ್ಸ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಸಿಪಿಎಲ್​ನ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಎವಿನ್ ಲೂಯಿಸ್ ಮೊದಲ ಸ್ಥಾನದಲ್ಲಿದ್ದರು.

3 / 5
ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ಹಾಗೂ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್  ಪೆಟ್ರಿಯಾಟ್ಸ್ ಪರ ಒಟ್ಟು 106 ಇನಿಂಗ್ಸ್ ಆಡಿರುವ ಎವಿನ್ ಲೂಯಿಸ್ 198 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ಕೀರನ್ ಪೊಲಾರ್ಡ್ ಯಶಸ್ವಿಯಾಗಿದ್ದಾರೆ.

4 / 5
ಕೀರನ್ ಪೊಲಾರ್ಡ್​​  ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈವರೆಗೆ 117 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಎದುರಿಸಿದ 1955 ಎಸೆತಗಳಲ್ಲಿ ಪೊಲಾರ್ಡ್ ಬರೋಬ್ಬರಿ 203 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಸಿಪಿಎಲ್​ನ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.

5 / 5
ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 200+ ಸಿಕ್ಸ್ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ಕೀರನ್ ಪೊಲಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವದ ಪ್ರಮುಖ 2 ಲೀಗ್​ಗಳಲ್ಲಿ ಇನ್ನೂರು ಸಿಕ್ಸ್​​ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

Published On - 7:58 am, Tue, 26 August 25