IPL 2026: ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಕೆಕೆಆರ್ ಸೇರಿದ ಮಾಜಿ ಆರ್​ಸಿಬಿ ವೇಗಿ

Updated on: Mar 13, 2026 | 9:46 PM

KKR Signs Blessing Muzarabani: ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್‌ಗೆ ಮುಸ್ತಾಫಿಜುರ್ ರೆಹಮಾನ್ ಬದಲು ಜಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಜರಬಾನಿ ಅವರನ್ನು ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಭಾಗವಾಗಿದ್ದ ಮುಜರಬಾನಿ, ಟಿ20 ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡುವ ಸಲುವಾಗಿ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಾರೆ. ಮಾರ್ಚ್ 28 ರಿಂದ ಐಪಿಎಲ್‌ನಲ್ಲಿ ಆಡಲಿದ್ದಾರೆ.

1 / 5
ಬಾಂಗ್ಲಾದೇಶ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಹೊರಹಾಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್​ ಫ್ರಾಂಚೈಸಿ ಅವರ ಬದಲಿಯಾಗಿ ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ತಂಡದ ಭಾಗವಾಗಿದ್ದ ಜಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಟಿ20 ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಬ್ಲೆಸಿಂಗ್ ಮುಜರಬಾನಿಗೆ ಕೆಕೆಆರ್ ಪ್ಲೇಯಿಂಗ್ 11ನಲ್ಲೂ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.

2 / 5
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಕೆಕೆಆರ್‌, ಬಾಂಗ್ಲಾದೇಶ ವೇಗಿ ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮುಜರಬಾನಿ ಮಾರ್ಚ್ 17 ರಂದು ತಂಡವನ್ನು ಸೇರಿಕೊಳ್ಳಲಿದ್ದು, ಮಾರ್ಚ್ 28 ರಿಂದ ಪ್ರಾರಂಭವಾಗಲಿರುವ ಐಪಿಎಲ್​ನಲ್ಲಿ ಕೆಕೆಆರ್ ಪರ ಆಡಲಿದ್ದಾರೆ ಎಂದಿದೆ.

3 / 5
ವಾಸ್ತವವಾಗಿ ಐಪಿಎಲ್‌ಗೆ ಸೇರುವ ಮೊದಲು, ಬ್ಲೆಸಿಂಗ್ ಮುಜರಬಾನಿ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡದ ಭಾಗವಾಗಿದ್ದರು. ಆದಾಗ್ಯೂ, ಬ್ಲೆಸಿಂಗ್ ಮುಜರಬಾನಿ ಐಪಿಎಲ್​ನಲ್ಲಿ ಕೆಕೆಆರ್‌ ಪರ ಆಡುವ ಸಲುವಾಗಿ ಪಿಎಸ್‌ಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

4 / 5
ಅಚ್ಚರಿಯ ಸಂಗತಿಯೆಂದರೆ, ಬ್ಲೆಸಿಂಗ್ ಮುಜರಬಾನಿ ಕಳೆದ ತಿಂಗಳು ನಡೆದಿದ್ದ ಪಿಎಸ್‌ಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು. ಆದರೆ ವೆಸ್ಟ್ ಇಂಡೀಸ್‌ನ ಶಮರ್ ಜೋಸೆಫ್‌ಗೆ ಬದಲಿ ಆಟಗಾರನಾಗಿ ಇಸ್ಲಾಮಾಬಾದ್ ಯುನೈಟೆಡ್‌ ಫ್ರಾಂಚೈಸಿ ಬ್ಲೆಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

5 / 5
ಮೇಲೆ ಹೇಳಿದಂತೆ ಐಪಿಎಲ್‌ನಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಅವರು 2025 ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭಾಗವಾಗಿದ್ದರು. ಆರ್‌ಸಿಬಿ ತಾತ್ಕಾಲಿಕವಾಗಿ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಅವರಿಗೆ ಪ್ಲೇಯಿಂಗ್​ 11 ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

Follow Us