IND vs AUS 1st ODI: ಗೆದ್ದ ಬಳಿಕ ಪ್ರೆಸೆಂಟೇಷನ್ ವೇಳೆ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
KL Rahul in post match presentation, IND vs AUS 1st ODI: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಭಾರತದ ಅಮೋಘ ಗೆಲುವಿನ ಬಳಿಕ ಮಾತನಾಡಿದ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ದಾರೆ ನೋಡಿ.
1 / 7
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕ್ರಿಕೆಟ್ ತಂಡ ಭರ್ಜರಿ ಆಗಿ ಆರಂಭಿಸಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
2 / 7
ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅರ್ಧತಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದರೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಜೊತೆಗೆ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ನಂಬರ್ 1 ಒನ್ ತಂಡವಾಗಿದೆ.
3 / 7
ಭಾರತದ ಅಮೋಘ ಗೆಲುವಿನ ಬಳಿಕ ಮಾತನಾಡಿದ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ದಾರೆ ನೋಡಿ. ''ನಾನು ನಾಯಕತ್ವ ವಹಿನಿಸಿಕೊಳ್ಳುತ್ತಿರುವುದು ಮೊದಲ ಬಾರಿ ಅಲ್ಲ. ಅದು ಯಾವಾಗಲೂ ನನ್ನೊಂದಿಗೆ ಇರುತ್ತದೆ. ನಾನು ಅದನ್ನು ಪ್ರೀತಿಸುತ್ತೇನೆ,'' ಎಂದು ಕ್ಯಾಪ್ಟೆನ್ಸಿ ಬಗ್ಗೆ ಹೇಳಿದ್ದಾರೆ.
4 / 7
ಮಧ್ಯಾಹ್ನ ಪಂದ್ಯ ಆರಂಭವಾದ ಹೊತ್ತಿಗೆ ತುಂಬಾ ಬೀಸಿಲಿತ್ತು. ಕೊಲಂಬೊ ನಂತರ ಇದು ನಮಗೆ ಸ್ವರ್ಗದಂತೆ ಭಾಸವಾಯಿತು. ಇದು ನಮಗೆ ಕಠಿಣ ಮತ್ತು ದೈಹಿಕವಾಗಿ ಸವಾಲನ್ನು ನೀಡುತ್ತದೆ. ಆದರೆ ನಾವೆಲ್ಲರೂ ನಮ್ಮ ಫಿಟ್‌ನೆಸ್‌ನಲ್ಲಿ ಕೆಲಸ ಮಾಡಿದ್ದರಿಂದ ದೊಡ್ಡ ಹೊಡೆತ ಬೀಳುವುದಿಲ್ಲ ಎಂಬುದು ರಾಹುಲ್ ಮಾತು.
5 / 7
ನಾವು ಈ ಪಂದ್ಯದಲ್ಲಿ ಐದು ಬೌಲರ್‌ಗಳನ್ನು ಮಾತ್ರ ಆಡಿಸಿದ್ದೇವೆ. ಆದ್ದರಿಂದ ಅವರು 10 ಓವರ್‌ಗಳನ್ನು ಬೌಲ್ ಮಾಡಬೇಕಾಯಿತು. ಸೆಟ್ ಬ್ಯಾಟರ್ ಶುಭ್ಮನ್ ಔಟಾದ ನಂತರ ಸ್ವಲ್ಪ ಟ್ರಿಕಿ ಆಗಿತ್ತು. ಆದರೆ ಸೂರ್ಯಕುಮಾರ್ ಅವರೊಂದಿಗೆ ಉತ್ತಮ ಜೊತೆಯಾಟ ಆಡುವಲ್ಲಿ ಯಶಸ್ವಿಯಾಗಿದ್ದೇನೆ- ಕೆಎಲ್ ರಾಹುಲ್.
6 / 7
ಸವಾಲಿನ ಸಂದರ್ಭಗಳಲ್ಲಿ ನನ್ನನ್ನು ನನ್ನಿಂದ ಕೊಡುಗೆ ಬರಬೇಕಿದೆ. ನಾವು ಮತ್ತು ಸೂರ್ಯ ಉತ್ತಮ ಕ್ರಿಕೆಟ್ ಹೊಡೆತಗಳನ್ನು ಹೊಡೆಯುವ ಬಗ್ಗೆ ಮಾತನಾಡುತ್ತಿದ್ದೆವು. ಸ್ಟ್ರೈಕ್ ಅನ್ನು ರೊಟೇಟ್ ಮಾಡುತ್ತಿದ್ದೆವು. ಇದು ನಮ್ಮ ಎಲ್ಲಾ ಬ್ಯಾಟರ್‌ಗಳು ಕೂಡ ಮಾಡುತ್ತಿದ್ದಾರೆ. ನಾವು ಹೆಚ್ಚು ತಲೆಕೆಡಿಸಿಕೊಳ್ಳಲು ಬಯಸುವುದಿಲ್ಲ, ನಾವು ಯಾವಾಗಲೂ ಸಂಘಟಿತ ಪ್ರದರ್ಶನ ನೀಡುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.
7 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ಗಳಲ್ಲಿ 276 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಮಿಂಚಿದರು. ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 48.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 281 ರನ್ ಸಿಡಿಸಿ ಭರ್ಜರಿ ಜಯ ಕಂಡಿತು.