KL Rahul: ಕೆಎಲ್ ರಾಹುಲ್ ಹೊಸ ತಂಡದ ನಾಯಕನಾಗುವುದು ಬಹುತೇಕ ಖಚಿತ
TV9 Web | Updated By: ಝಾಹಿರ್ ಯೂಸುಫ್
Updated on:
Nov 25, 2021 | 8:13 PM
IPL 2022 KL Rahul: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಮುಂದಿನ ಸೀಸನ್ಗಾಗಿ ನಡೆಯಲಿರುವ ಮೆಗಾ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದೆ. ಅದರಂತೆ ಮುಂದಿನ ಸೀಸನ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು.
1 / 5
ಐಪಿಎಲ್ ಸೀಸನ್ 15 ಮೆಗಾ ಹರಾಜಿಗಾಗಿ ಬಿಸಿಸಿಐ (BCCI) ಈಗಾಗಲೇ ರೂಪುರೇಷೆಗಳನ್ನು ಸಿದ್ದಪಡಿಸಿದೆ. ಅದರಂತೆ ಮುಂದಿನ ಸೀಸನ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು. ಇನ್ನು ಹೊಸ 2 ಫ್ರಾಂಚೈಸಿಗೆ 3 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.
2 / 5
ಇದೇ ನಿಯಮ ಇದೀಗ ಹೊಸ ಫ್ರಾಂಚೈಸಿಗಳಿಗೆ ವರದಾನವಾಗಿದೆ. ಏಕೆಂದರೆ ಪಂಜಾಬ್ ಕಿಂಗ್ಸ್ ತಂಡದಿಂದ ಕೆಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಶ್ರೇಯಸ್ ಅಯ್ಯರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಡೇವಿಡ್ ವಾರ್ನರ್ ಹೊರಬರುವುದು ಖಚಿತವಾಗಿದೆ. ಹೀಗಾಗಿ ಈ ಮೂವರನ್ನು ಹೊಸ ಫ್ರಾಂಚೈಸಿ ಟಾರ್ಗೆಟ್ ಮಾಡಲಿದೆ.
3 / 5
ಅದರಂತೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೆಎಲ್ ರಾಹುಲ್ ರಿಟೈನ್ ಆಗುವುದಿಲ್ಲ. ಈ ಸುದ್ದಿ ಬೆನ್ನಲ್ಲೇ ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ ಈಗಾಗಲೇ ರಾಹುಲ್ ಜೊತೆ ಮಾತುಕತೆ ಮುಗಿದಿದ್ದು, ಅದರಂತೆ ಮುಂದಿನ ಸೀಸನ್ನಲ್ಲಿ ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿ ಪರ ಆಡುವುದು ಬಹುತೇಕ ಖಚಿತ.
4 / 5
ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ 11 ಕೋಟಿಗೆ ಆಡಿದ್ದ ಕೆಎಲ್ ರಾಹುಲ್ ಅವರಿಗೆ ಲಕ್ನೋ ಫ್ರಾಂಚೈಸಿ 15 ಕೋಟಿ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಹೊಸ ತಂಡದ ನಾಯಕತ್ವವನ್ನೂ ಕೂಡ ನೀಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಕೆಎಲ್ ರಾಹುಲ್ ಮುಂದಿನ ಸೀಸನ್ನಲ್ಲಿ ಹೊಸ ತಂಡವನ್ನು ಮುನ್ನಡೆಸಲಿರುವುದು ಬಹುತೇಕ ಖಚಿತವಾಗಿದೆ.
5 / 5
ಈ ಹಿಂದೆ ಕೆಎಲ್ ರಾಹುಲ್ ಆರ್ಸಿಬಿ ಪರ ಆಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೀಗ ಹೊಸ ಫ್ರಾಂಚೈಸಿಗಳಿಗೆ ನೀಡಲಾಗುವ ವಿಶೇಷ ಆಯ್ಕೆಯ ಮೂಲಕ ಮೆಗಾ ಹರಾಜಿಗೂ ಮುನ್ನ ಲಕ್ನೋ ಫ್ರಾಂಚೈಸಿ ರಾಹುಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಹೀಗಾಗಿ ಐಪಿಎಲ್ ಸೀಸನ್ 15 ನಲ್ಲಿ ಕೆಎಲ್ ರಾಹುಲ್ ಹೊಸ ಜೆರ್ಸಿ-ಹೊಸ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.