ಏಕದಿನ ವಿಶ್ವಕಪ್ ಟ್ರೋಫಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
TV9 Web | Updated By: ಝಾಹಿರ್ ಯೂಸುಫ್
Updated on:
Nov 18, 2023 | 10:32 PM
ICC World Cup 2023: ಏಕದಿನ ವಿಶ್ವಕಪ್ನ ಫೈನಲ್ ಪಂದ್ಯವು ನವೆಂಬರ್ 19 ರಂದು ಭಾನುವಾರ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಫೈಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.
1 / 5
ಕ್ರಿಕೆಟ್ ಅಂಗಳದ ಮಹಾಸಮರ ಏಕದಿನ ವಿಶ್ವಕಪ್ನ ಫೈನಲ್ ಫೈಟ್ಗಾಗಿ ಕ್ಷಣಗಣನೆ ಶುರುವಾಗಿದೆ. ಭಾನುವಾರ ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅತ್ಯಾಕರ್ಷಕ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ. ಈ ಟ್ರೋಫಿ ಕುರಿತಾದ ಆಸಕ್ತಿದಾಯಕ ಸಂಗತಿಗಳು ಈ ಕೆಳಗಿನಂತಿದೆ...
2 / 5
ಏಕದಿನ ವಿಶ್ವಕಪ್ 1975 ರಲ್ಲಿ ಶುರುವಾಗಿದ್ದರೂ, ಅಧಿಕೃತ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದು 1999 ರಲ್ಲಿ. ಅಂದರೆ 1975-1996 ರ ನಡುವೆ ನಡೆದ 6 ವರ್ಲ್ಡ್ಕಪ್ನಲ್ಲಿ ವಿಭಿನ್ನ ವಿನ್ಯಾಸದ ಟ್ರೋಫಿಗಳನ್ನು ನೀಡಲಾಗಿತ್ತು. 1999 ರ ವಿಶ್ವಕಪ್ನಲ್ಲಿ ಐಸಿಸಿ ವರ್ಲ್ಡ್ಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸಿ, ಅದನ್ನು ಅಧಿಕೃತಗೊಳಿಸಿತು.
3 / 5
ಪ್ರಸ್ತುತ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದು ಲಂಡನ್‌ನ ಗೆರಾರ್ಡ್ ಮತ್ತು ಕಂಪೆನಿ. ಅದರಂತೆ ಕಳೆದ 24 ವರ್ಷಗಳಿಂದ ಏಕದಿನ ವಿಶ್ವಕಪ್ ಟ್ರೋಫಿಯಾಗಿ ಇದನ್ನೇ ಬಳಸಲಾಗಿದೆ.
4 / 5
ಏಕದಿನ ವಿಶ್ವಕಪ್ ಟ್ರೋಫಿಯ ಎತ್ತರ 65 ಸೆಂಟಿಮೀಟರ್. ಅಲ್ಲದೆ ಇದರ ಮಧ್ಯ ಭಾಗದಲ್ಲಿ ವಿಶ್ವವನ್ನು ಸಾರುವ ಹಾಗೂ ಚೆಂಡನ್ನು ಪ್ರತಿನಿಧಿಸುವ ಗೋಲಾಕಾರವನ್ನು ನೀಡಿರುವುದು ವಿಶೇಷ.
5 / 5
ಇನ್ನು ವಿಶ್ವಕಪ್ ಗೆದ್ದಾಗ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಇದಾದ ಬಳಿಕ ಗೆದ್ದ ತಂಡಕ್ಕೆ ಅದೇ ಮಾದರಿಯಲ್ಲಿ ಪ್ರತಿರೂಪದ ಟ್ರೋಫಿ ನೀಡಲಾಗುತ್ತದೆ. ಅಲ್ಲದೆ ಮೂಲ ಟ್ರೋಫಿಯನ್ನು ಯುಎಇಯಲ್ಲಿರುವ ಐಸಿಸಿಯ ಪ್ರಧಾನ ಕಛೇರಿಗೆ ಹಿಂತಿರುಗಿಸಲಾಗುತ್ತದೆ.