IND vs WI: ವಿಂಡೀಸ್ ವಿರುದ್ಧ 7 ವರ್ಷಗಳ ನಂತರ ಇತಿಹಾಸ ಪುನರಾವರ್ತಿಸಿದ ಕುಲ್ದೀಪ್

Updated on: Oct 12, 2025 | 5:05 PM

Kuldeep Yadav 5-wicket haul: ಭಾರತ-ವೆಸ್ಟ್ ಇಂಡೀಸ್ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್​ನಲ್ಲಿ ಕುಲ್ದೀಪ್ ಯಾದವ್ ಐದು ವಿಕೆಟ್ ಪಡೆದರು. ಭಾರತದ 518 ರನ್‌ಗಳಿಗೆ ಪ್ರತಿಯಾಗಿ ವೆಸ್ಟ್ ಇಂಡೀಸ್ 248 ರನ್‌ಗಳಿಗೆ ಆಲೌಟ್ ಆಗಿ ಫಾಲೋ-ಆನ್ ಅನುಭವಿಸಿತು. ಕುಲ್ದೀಪ್​ಗೆ ಅವರ ವೃತ್ತಿಜೀವನದ ಐದನೇ ಐದು ವಿಕೆಟ್ ಸಾಧನೆಯಾಗಿದ್ದು, ಎಡಗೈ ಮಣಿಕಟ್ಟಿನ ಸ್ಪಿನ್ನರ್ ಆಗಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ವಿಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರತಿರೋಧ ತೋರುತ್ತಿದೆ.

1 / 6
ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಫಾಲೋ-ಆನ್ ತಪ್ಪಿಸಿಕೊಳ್ಳುವಲ್ಲಿ ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 518 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಆದಾಗ್ಯೂ, ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್ 248 ರನ್‌ಗಳಿಗೆ ಅಂತ್ಯವಾಯಿತು.

2 / 6
ಇದರಿಂದಾಗಿ 270 ರನ್‌ಗಳ ಹಿನ್ನಡೆ ಅನುಭವಿಸಿದ್ದ ವೆಸ್ಟ್ ಇಂಡೀಸ್ ಮೇಲೆ ಭಾರತ ಫಾಲೋ ಆನ್ ಹೇರಿತು. ಹೀಗಾಗಿ ವಿಂಡೀಸ್ ಮತ್ತೆ ಬ್ಯಾಟಿಂಗ್ ನಡೆಸುತ್ತಿದ್ದು, ಎರಡನೇ ಇನ್ನಿಂಗ್ಸ್​​ನಲ್ಲಿ ಕೊಂಚ ಪ್ರತಿರೋಧ ನೀಡುತ್ತಿದೆ. ಕ್ಯಾಂಬೆಲ್ ಹಾಗೂ ಹೋಪ್ ತಲಾ ಅರ್ಧಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.

3 / 6
ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ವೆಸ್ಟ್ ಇಂಡೀಸ್‌ ತಂಡ ಬಹುಬೇಗನೇ ಆಲೌಟ್ ಆಗಲು ಕಾರಣವೆಂದರೆ ಕುಲ್ದೀಪ್ ಯಾದವ್ ಅವರ ಮಾಂತ್ರಿಕ ಬೌಲಿಂಗ್. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಕುಲ್ದೀಪ್, ಈ ಇನ್ನಿಂಗ್ಸ್‌ನಲ್ಲಿ 26.5 ಓವರ್‌ಗಳನ್ನು ಬೌಲಿಂಗ್ ಮಾಡಿ ಐದು ವಿಕೆಟ್‌ಗಳನ್ನು ಪಡೆದರು.

4 / 6
ಇದು ಅವರ ಟೆಸ್ಟ್ ವೃತ್ತಿಜೀವನದಲ್ಲಿ ಐದನೇ ಬಾರಿಗೆ ಐದು ವಿಕೆಟ್‌ಗಳನ್ನು ಪಡೆದ ಸಾಧನೆಯಾಗಿದೆ. ಗಮನಾರ್ಹವಾಗಿ, ಅವರ ಟೆಸ್ಟ್ ವೃತ್ತಿಜೀವನದ ಮೊದಲ ಐದು ವಿಕೆಟ್‌ಗಳನ್ನು 2018 ರಲ್ಲಿ ಇದೇ ವೆಸ್ಟ್ ಇಂಡೀಸ್ ವಿರುದ್ಧವೇ ಪಡೆದಿದ್ದರು. ಅಂದರೆ ಏಳು ವರ್ಷಗಳ ನಂತರ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಕುಲ್ದೀಪ್ ಪುನರಾವರ್ತಿಸಿದ್ದಾರೆ.

5 / 6
ಈ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್ ಯಾದವ್, ಅಲೆಕ್ ಅಥಾನಾಸೆ ಅವರನ್ನು 41 ರನ್‌ಗಳಿಗೆ ಔಟ್ ಮಾಡಿದರೆ, 36 ರನ್‌ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಶೈ ಹೋಪ್ ಅವರನ್ನು ಸಹ ಔಟ್ ಮಾಡಿದರು. ಇಬ್ಬರು ಆಟಗಾರರು ಉತ್ತಮ ಜೊತೆಯಾಟವನ್ನು ರಚಿಸಿದ್ದರು, ಆದರೆ ಕುಲ್ದೀಪ್ ಅದನ್ನು ಮುರಿಯುವಲ್ಲಿ ಯಶಸ್ವಿಯಾದರು. ನಂತರ ಅವರು ಟೆವಿನ್ ಇಮ್ಲಾಚ್, ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ ಅವರನ್ನು ಔಟ್ ಮಾಡಿದರು.

6 / 6
ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ಬಾರಿ ಐದು ವಿಕೆಟ್ ಗೊಂಚಲು ಪಡೆದ ವಿಶ್ವದ ಎರಡನೇ ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲ್ದೀಪ್ ಯಾದವ್. ಈ ಸಾಧನೆ ಮಾಡಿದ ಮತ್ತೊಬ್ಬ ಎಡಗೈ ಸ್ಪಿನ್ನರ್ ಎಂದರೆ ದಂತಕಥೆ ಜಾನಿ ವಾರ್ಡ್ಲೆ. ಆದಾಗ್ಯೂ, ಜಾನಿ ವಾರ್ಡ್ಲೆ 28 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಕುಲ್ದೀಪ್ ಕೇವಲ 15 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.