LLC 2023: 28 ಬೌಂಡರಿ, 183 ರನ್! ವಯಸ್ಸು 40 ದಾಟಿದ್ರು ಕಡಿಮೆಯಾಗಿಲ್ಲ ಕ್ರಿಕೆಟ್ ಹಸಿವು
Gautam Gambhir: ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಸದ್ಯ 3 ಪಂದ್ಯಗಳನ್ನಾಡಿರುವ ಗೌತಮ್ ಗಂಭೀರ್ 156.41 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು, 91.50ರ ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ.
1 / 5
ಸಿಂಹಕ್ಕೆ ಎಷ್ಟೇ ವಯಸ್ಸಾದರೂ ಅದು ಬೇಟೆಯಾಡುವ ಕಲೆಯನ್ನು ಮರೆಯುವುದಿಲ್ಲಂತೆ. ಈ ಮಾತು ಯಾರಿಗೆ ಸರಿ ಹೊಂದುತ್ತದೋ, ಇಲ್ಲವೋ. ಆದರೆ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್‌ಗೆ ಹೇಳಿ ಮಾಡಿಸಿದಂತ್ತಿದೆ. ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಇಂಡಿಯಾ ಮಹಾರಾಜಸ್ ತಂಡದ ನಾಯಕತ್ವವಹಿಸಿಕೊಂಡಿರುವ ಗಂಭೀರ್, ಇಡೀ ಟೂರ್ನಿಯಲ್ಲಿ ರನ್ಗಳ ಮಳೆ ಸುರಿಸುತ್ತಿದ್ದಾರೆ. ಹಾಗೆಯೇ ಹ್ಯಾಟ್ರಿಕ್ ಅರ್ಧಶತಕ ಕೂಡ ಬಾರಿಸಿದ್ದಾರೆ.
2 / 5
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಸದ್ಯ 3 ಪಂದ್ಯಗಳನ್ನಾಡಿರುವ ಗೌತಮ್ ಗಂಭೀರ್ 156.41 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು, 91.50ರ ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ.
3 / 5
41 ವರ್ಷದ ಗಂಭೀರ್, ಟೂರ್ನಿಯ ಮೊದಲ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ 54 ರನ್, ಬಳಿಕ ಎರಡನೇ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ವಿರುದ್ಧ 68 ರನ್ ಮತ್ತು ಇದೀಗ ಮೂರನೇ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ 61 ರನ್ ಬಾರಿಸಿದ್ದಾರೆ.
4 / 5
ಇದರೊಂದಿಗೆ ಈ ಲೀಗ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಗೌತಮ್ ಗಂಭೀರ್ ಬರೆದಿದ್ದಾರೆ. ಟೂರ್ನಿಯಲ್ಲಿ ಗಂಭೀರ್ 28 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ.
5 / 5
ಪ್ರಸ್ತುತ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ನ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ರಾಜಕೀಯದಲ್ಲೂ ತೊಡಗಿಕೊಂಡಿರುವ ಗಂಭಿರ್, ಬಿಜೆಪಿ ಪಕ್ಷದ ಸಂಸದರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.