ಯಾವ ತಂಡಕ್ಕೂ ಸಾಧ್ಯವಾಗದ ವಿಶಿಷ್ಟ ದಾಖಲೆ ಬರೆದ ಟೀಂ ಇಂಡಿಯಾ ವೇಗಿಗಳು..!

Updated on: Jan 03, 2024 | 5:51 PM

Team India: ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು ಕೇವಲ 55 ರನ್​ಗಳಿಗೆ ಆಲೌಟ್ ಮಾಡಿದೆ. ಈ ಮೂಲಕ 1 ವರ್ಷದೊಳಗೆ ಕ್ರಿಕೆಟ್​ನ ಮೂರು ಮಾದರಿಯಲ್ಲೂ ಯಾವ ತಂಡಕ್ಕೂ ಸಾಧ್ಯವಾಗದ ವಿಶಿಷ್ಟ ದಾಖಲೆ ನಿರ್ಮಿಸಿದೆ.

1 / 7
ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು ಕೇವಲ 55 ರನ್​ಗಳಿಗೆ ಆಲೌಟ್ ಮಾಡಿದೆ. ಈ ಮೂಲಕ 1 ವರ್ಷದೊಳಗೆ ಕ್ರಿಕೆಟ್​ನ ಮೂರು ಮಾದರಿಯಲ್ಲೂ ಯಾವ ತಂಡಕ್ಕೂ ಸಾಧ್ಯವಾಗದ ವಿಶಿಷ್ಟ ದಾಖಲೆ ನಿರ್ಮಿಸಿದೆ.

ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು ಕೇವಲ 55 ರನ್​ಗಳಿಗೆ ಆಲೌಟ್ ಮಾಡಿದೆ. ಈ ಮೂಲಕ 1 ವರ್ಷದೊಳಗೆ ಕ್ರಿಕೆಟ್​ನ ಮೂರು ಮಾದರಿಯಲ್ಲೂ ಯಾವ ತಂಡಕ್ಕೂ ಸಾಧ್ಯವಾಗದ ವಿಶಿಷ್ಟ ದಾಖಲೆ ನಿರ್ಮಿಸಿದೆ.

2 / 7

ವಾಸ್ತವವಾಗಿ 2023ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಬೌಲಿಂಗ್ ಪರಾಕ್ರಮ ತೋರಿದ್ದ ಭಾರತೀಯ ಬೌಲರ್‌ಗಳು ಪಂದ್ಯಾವಳಿಯಲ್ಲಿ ಬಹುತೇಕ ಎಲ್ಲಾ ತಂಡಗಳನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಭಾರತೀಯ ಬೌಲರ್‌ಗಳ ಈ ಅತ್ಯುತ್ತಮ ಫಾರ್ಮ್ ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆದಿದೆ.

3 / 7

ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 55 ರನ್‌ಗಳಿಗೆ ಆಲೌಟ್ ಮಾಡಿದೆ. ಇಡೀ ದಕ್ಷಿಣ ಆಫ್ರಿಕಾ ತಂಡವು ಕೇವಲ 23.2 ಓವರ್‌ ಬ್ಯಾಟಿಂಗ್ ಮಾಡಲಷ್ಟೇ ಶಕ್ತವಾಯಿತು. ಈ ಮೂಲಕ ಒಂದು ವರ್ಷದಲ್ಲಿ ಟೀಂ ಇಂಡಿಯಾ ವೇಗಿಗಳು ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ.

4 / 7

ಪ್ರಸ್ತುತ ಟೆಸ್ಟ್ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 55 ರನ್​ಗಳಿಗೆ ಆಲೌಟ್ ಮಾಡಿರುವ ಭಾರತ, ಏಕದಿನ ಮಾದರಿಯಲ್ಲಿ 50 ರನ್​ಗಳಿಗೆ ಲಂಕಾ ತಂಡವನ್ನು ಆಲೌಟ್ ಮಾಡಿತ್ತು. ಹಾಗೆಯೇ ಟಿ20 ಯಲ್ಲಿ ನ್ಯೂಜಿಲೆಂಡ್ ತಂಡವನ್ನು ಕೇವಲ 66 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿಯಾಗಿದ್ದರು.

5 / 7

ಈ ಮೂಲಕ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಇತರ ತಂಡಗಳನ್ನು 1 ವರ್ಷದೊಳಗೆ ಅತ್ಯಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಸಾಧನೆಯನ್ನು ಭಾರತೀಯ ವೇಗಿಗಳು ಮಾಡಿದ್ದಾರೆ.

6 / 7

2023ರ ಆರಂಭದಲ್ಲಿ ನ್ಯೂಜಿಲೆಂಡ್, ಭಾರತ ಪ್ರವಾಸ ಕೈಗೊಂಡಿತ್ತು. ಅಹಮದಾಬಾದ್‌ನಲ್ಲಿ ಉಭಯ ತಂಡಗಳ ನಡುವೆ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನ್ಯೂಜಿಲೆಂಡ್ ವಿರುದ್ಧ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 234 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 66 ರನ್ ಗಳಿಗೆ ಆಲೌಟ್ ಆಯಿತು.

7 / 7

ಏಷ್ಯಾಕಪ್ 2023ರ ಫೈನಲ್‌ನಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ ಕೇವಲ 50 ರನ್‌ಗಳಿಗೆ ಕುಸಿದಿತ್ತು. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 15.2 ಓವರ್‌ಗಳಲ್ಲಿ 50 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲೂ ಮೊಹಮ್ಮದ್ ಸಿರಾಜ್ 6 ವಿಕೆಟ್ ಉರುಳಿಸಿದ್ದರು. 7 ಓವರ್ ಗಳಲ್ಲಿ 21 ರನ್ ನೀಡಿ 6 ವಿಕೆಟ್ ಪಡೆದು ಮೇಡನ್ ಓವರ್​ ಕೂಡ ಮಾಡಿದ್ದರು.

Loading...
Unable to load recommendations.
Follow Us