LPL 2023 Auction: ಎಲ್​ಪಿಎಲ್​ನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ 6 ಆಟಗಾರರ ಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Jun 15, 2023 | 9:09 PM

LPL 2023 Auction: ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಆರು ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

1 / 9
LPL 2023 Auction: ಲಂಕಾ ಪ್ರೀಮಿಯರ್ ಲೀಗ್​ ಸೀಸನ್-4 ಹರಾಜು ಪ್ರಕ್ರಿಯೆ ಮುಗಿದಿದೆ. ಒಟ್ಟು 360 ಆಟಗಾರರು ಕಾಣಿಸಿಕೊಂಡಿದ್ದ ಬಿಡ್ಡಿಂಗ್​ನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಹರಾಜಾಗದೇ ಉಳಿದರು.

2 / 9
ಹಾಗೆಯೇ ಐವರು ಆಟಗಾರರು 70 ಸಾವಿರ ಡಾಲರ್​ಗೂ ಅಧಿಕ ಮೊತ್ತಕ್ಕೆ ಬಿಕರಿಯಾದರು. ಹೀಗೆ ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

3 / 9
1- ದಿಲ್ಶಾನ್ ಮಧುಶಂಕ: ಈ ಬಾರಿಯ ಹರಾಜಿನಲ್ಲಿ ಲಂಕಾ ವೇಗಿ ದಿಲ್ಶಾನ್ ಮಧುಶಂಕ ಅವರನ್ನು ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 92 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 75 ಲಕ್ಷ ರೂ.

4 / 9
2- ಚರಿತ್ ಅಸಲಂಕಾ: ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯು ಶ್ರೀಲಂಕಾ ಆಲ್​ರೌಂಡರ್ ಚರಿತ್ ಅಸಲಂಕಾ ಅವರನ್ನು 80 ಸಾವಿರ ಡಾಲರ್​ ನೀಡಿ ತನ್ನದಾಗಿಸಿಕೊಂಡಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 65 ಲಕ್ಷ ರೂ.

5 / 9
3- ಧನಂಜಯ ಡಿಸಿಲ್ವಾ: ಶ್ರೀಲಂಕಾ ತಂಡದ ಆಫ್ ಸ್ಪಿನ್ ಆಲ್​ರೌಂಡರ್ ಧನಂಜಯ ಡಿಸಿಲ್ವಾ ಅವರನ್ನು ದಂಬುಲ್ಲಾ ಔರ ಫ್ರಾಂಚೈಸಿಯು 76 ಸಾವಿರ ಡಾಲರ್​ಗೆ ಖರೀದಿಸಿದೆ. ಭಾರತೀಯ ರೂಪಾಯಿ ಮೌಲ್ಯ ಸುಮಾರು 62 ಲಕ್ಷ ರೂ.

6 / 9
4- ಬಿನುರ ಫರ್ನಾಂಡೊ: ದಂಬುಲ್ಲಾ ಔರ ಫ್ರಾಂಚೈಸಿ ಬಿನುರ ಫರ್ನಾಂಡೊ ಅವರನ್ನು 76 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಸುಮಾರು 62 ಲಕ್ಷ ರೂ.ಗೆ ಬಿಕರಿಯಾಗಿದ್ದಾರೆ.

7 / 9
5- ದಿನೇಶ್ ಚಂಡಿಮಲ್: ಶ್ರೀಲಂಕಾ ತಂಡದ ಅನುಭವಿ ಆಟಗಾರ ದಿನೇಶ್ ಚಂಡಿಮಲ್ ಅವರನ್ನು 72 ಸಾವಿರ ಡಾಲರ್​ಗೆ ಬಿ-ಲವ್ ಕ್ಯಾಂಡಿ ಫ್ರಾಂಚೈಸಿ ಖರೀದಿಸಿದೆ. ಭಾರತೀಯ ರೂಪಾಯಿ ಮೌಲ್ಯ ಸುಮಾರು 59 ಲಕ್ಷ ರೂ.

8 / 9
6- ದುಷ್ಮಂತ ಚಮೀರಾ: ಶ್ರೀಲಂಕಾ ತಂಡದ ವೇಗಿ ದುಷ್ಮಂತ ಚಮೀರಾ ಅವರನ್ನು ಬಿ-ಲವ್ ಕ್ಯಾಂಡಿ ಫ್ರಾಂಚೈಸಿ 70 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ 57 ಲಕ್ಷ ರೂ.

9 / 9
ಲಂಕಾ ಪ್ರೀಮಿಯರ್ ಲೀಗ್​ ಸೀಸನ್-4 ಜುಲೈ 31 ರಿಂದ ಶ್ರೀಲಂಕಾದಲ್ಲಿ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಕೊಲೊಂಬೊ ಸ್ಟ್ರೈಕರ್ಸ್, ದಂಬುಲ್ಲಾ ಔರ, ಜಾಫ್ನ ಕಿಂಗ್ಸ್, ಬಿ-ಲವ್ ಕ್ಯಾಂಡಿ, ಗಾಲ್ಲೆ ಟೈಟಾನ್ಸ್ ತಂಡಗಳು ಕಣಕ್ಕಿಳಿಯಲಿವೆ.