ಶ್ರೀಲಂಕಾ ತಂಡಕ್ಕೆ ಆಘಾತ; ಸ್ಟಾರ್ ಸ್ನಿನ್ನರ್ ಮೊದಲ ವಿಶ್ವಕಪ್ ಪಂದ್ಯಕ್ಕೆ ಅಲಭ್ಯ..!
ODI World Cup 2023: ಅಕ್ಟೋಬರ್ 7 ರಂದು ದೆಹಲಿಯಲ್ಲಿ ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧದಆರಂಭಿಕ ಏಕದಿನ ವಿಶ್ವಕಪ್ ಪಂದ್ಯದಿಂದ ಶ್ರೀಲಂಕಾ ಸ್ಟಾರ್ ಸ್ನಿನ್ನರ್ ಮಹೇಶ್ ತೀಕ್ಷಣ ಹೊರಗುಳಿದಿದ್ದಾರೆ. 23 ವರ್ಷದ ಸ್ಪಿನ್ನರ್ ಏಷ್ಯಾಕಪ್ ಸಮಯದಲ್ಲಿ ಬಲ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು.
1 / 8
ಅಕ್ಟೋಬರ್ 7 ರಂದು ದೆಹಲಿಯಲ್ಲಿ ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧದಆರಂಭಿಕ ಏಕದಿನ ವಿಶ್ವಕಪ್ ಪಂದ್ಯದಿಂದ ಶ್ರೀಲಂಕಾ ಸ್ಟಾರ್ ಸ್ನಿನ್ನರ್ ಮಹೇಶ್ ತೀಕ್ಷಣ ಹೊರಗುಳಿದಿದ್ದಾರೆ.
2 / 8
23 ವರ್ಷದ ಸ್ಪಿನ್ನರ್ ಏಷ್ಯಾಕಪ್ ಸಮಯದಲ್ಲಿ ಬಲ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಇದುವರೆಗೂ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಗಾಯದಿಂದಾಗಿ ಅವರು ಭಾರತದ ವಿರುದ್ಧ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿಯೂ ಆಡಿರಲಿಲ್ಲ.
3 / 8
ಕೇವಲ 27 ಏಕದಿನ ಪಂದ್ಯಗಳನ್ನಾಡಿರುವ ಮಹೇಶ್ ತೀಕ್ಷಣ 44 ವಿಕೆಟ್‌ಗಳನ್ನು ಪಡೆದಿದ್ದು ಶ್ರೀಲಂಕಾದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆದರೆ ಇದೀಗ ವಿಶ್ವಕಪ್ನ ಆರಂಭಿಕ ಪಂದ್ಯಕ್ಕೆ ಅವರ ಗೈರು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
4 / 8
5 / 8
6 / 8
ಅವರ ಅನುಪಸ್ಥಿತಿಯು ಶ್ರೀಲಂಕಾದ ಸ್ಪಿನ್ ವಿಭಾಗವನ್ನು ದುರ್ಬಲಗೊಳಿಸಿದೆ. ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ಹಸರಂಗಾ ಅವರನ್ನು ಆಯ್ಕೆ ಮಾಡಲಾಗಿಲ್ಲ. ಈವೆಂಟ್ ಮುಗಿಯುವ ಮೊದಲು ಅವರು ಸಂಪೂರ್ಣ ಫಿಟ್ ಆದರೆ ಮಾತ್ರ ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆಯಾಗುತ್ತಾರೆ.
7 / 8
ಹಸರಂಗ ಅಲ್ಲದೆ ವೇಗಿ ದುಷ್ಮಂತ ಚಮೀರಾ ಕೂಡ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ಏಕೆಂದರೆ ಅವರು ಕೂಡ ಇಂಜುರಿಯಿಂದ ಚೇತರಿಸಿಕೊಂಡಿಲ್ಲ. ಏತನ್ಮಧ್ಯೆ, ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದ ಲಹಿರು ಕುಮಾರ ಮತ್ತು ದಿಲ್ಶಾನ್ ಮಧುಶಂಕ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
8 / 8
ಇನ್ನು ಅಕ್ಟೋಬರ್ 7 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿರುವ ಶ್ರೀಲಂಕಾ, ಅಕ್ಟೋಬರ್ 10 ರಂದು ಹೈದರಾಬಾದ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.