IPL Auction 2025: ಐಪಿಎಲ್ ಮೆಗಾ ಹರಾಜಿನ ಹರಾಜುದಾರರು ಯಾರು ಗೊತ್ತಾ?
IPL Auction 2025: ಮಿನಿ ಹರಾಜಿನಲ್ಲಿ ಹರಾಜುದಾರರಾಗಿ ಕಾಣಿಸಿಕೊಂಡಿದ್ದ ಖ್ಯಾತ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಅವರಿಗೆ ಈ ಮೆಗಾ ಹರಾಜಿನ ಹರಾಜುದಾರರ ಜವಬ್ದಾರಿಯನ್ನು ನೀಡಿದೆ. ಈ ಮೆಗಾ ಈವೆಂಟ್ ಬರೋಬ್ಬರಿ 2 ದಿನಗಳ ಕಾಲ ನಡೆಯಲ್ಲಿದ್ದು, 574 ಆಟಗಾರರ ಹೆಸರನ್ನು ಹರಾಜಿನಲ್ಲಿ ಕರೆಯುವ ಕೆಲಸ ಮಲ್ಲಿಕಾ ಸಾಗರ್ ಅವರದ್ದಾಗಿದೆ.
1 / 5
ಐಪಿಎಲ್ ಮೆಗಾ ಹರಾಜಿಗೆ ಇನ್ನು ಹೆಚ್ಚು ದಿವಸ ಉಳಿದಿಲ್ಲ. ಈ ಮೆಗಾ ಈವೆಂಟ್ಗೆ ಇನ್ನು 8 ದಿನಗಳು ಮಾತ್ರ ಬಾಕಿ ಉಳಿದಿದ್ದು, ನವೆಂಬರ್ 24 ಮತ್ತು ನವೆಂಬರ್ 25 ರಂದು ನಡೆಯಲಿದೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ ಎಲ್ಲಾ ತಂಡಗಳಲ್ಲಿ ಖಾಲಿ ಉಳಿದಿರುವ 204 ಸ್ಲಾಟ್ಗಳನ್ನು ಭರ್ತಿ ಮಾಡಲು 574 ಆಟಗಾರರು ಹರಾಜಿಗೆ ಬರಲಿದ್ದಾರೆ.
2 / 5
ವಿದೇಶದಲ್ಲಿ ಸತತ ಎರಡನೇ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುವ ಈ ಹರಾಜಿನಲ್ಲಿ 48 ಕ್ಯಾಪ್ಡ್ ಭಾರತೀಯರು, 318 ಅನ್‌ಕ್ಯಾಪ್ಡ್ ಭಾರತೀಯರು ಮತ್ತು 208 ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ಇದೀಗ ಈ ಹರಾಜಿನಲ್ಲಿ ಹರಾಜುದಾರರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕೂಡ ಖಚಿತವಾಗಿದೆ.
3 / 5
ಕಳೆದ ಬಾರಿ ಅಂದರೆ ಮಿನಿ ಹರಾಜಿನಲ್ಲಿ ಹರಾಜುದಾರರಾಗಿ ಕಾಣಿಸಿಕೊಂಡಿದ್ದ ಖ್ಯಾತ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಅವರಿಗೆ ಈ ಮೆಗಾ ಹರಾಜಿನ ಹರಾಜುದಾರರ ಜವಬ್ದಾರಿಯನ್ನು ನೀಡಿದೆ. ಈ ಮೆಗಾ ಈವೆಂಟ್ ಬರೋಬ್ಬರಿ 2 ದಿನಗಳ ಕಾಲ ನಡೆಯಲ್ಲಿದ್ದು, 574 ಆಟಗಾರರ ಹೆಸರನ್ನು ಹರಾಜಿನಲ್ಲಿ ಕರೆಯುವ ಕೆಲಸ ಮಲ್ಲಿಕಾ ಸಾಗರ್ ಅವರದ್ದಾಗಿದೆ.
4 / 5
ಕಳೆದ ಬಾರಿ ನಡೆದ ಮಿನಿ ಹರಾಜಿನಲ್ಲಿ ಮಲ್ಲಿಕಾ ಸಾಗರ್ ಮೊದಲ ಬಾರಿಗೆ ಹರಾಜಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಬಿಸಿಸಿಐ ಮತ್ತೊಮ್ಮೆ ಅವರನ್ನು ಮೆಗಾ ಹರಾಜಿಗೆ ಆಯ್ಕೆ ಮಾಡಿದೆ. 48ರ ಹರೆಯದ ಮಲ್ಲಿಕಾ ಲೀಗ್‌ನ ಇತಿಹಾಸದಲ್ಲಿ ಹರಾಜುದಾರರಾಗಿ ಆಯ್ಕೆಯಾದ ಮೊದಲ ಮಹಿಳಾ ಹರಾಜುಗಾರ್ತಿಯಾಗಿದ್ದಾರೆ. ಈ ಹಿಂದೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಹರಾಜುದಾರರಾಗಿ ಕಾಣಿಸಿಕೊಂಡಿದ್ದರು. ಮಲ್ಲಿಕಾ ಸಾಗರ್ ಮೊದಲು, ರಿಚರ್ಡ್ ಮೆಡ್ಲಿ, ಹಗ್ ಆಡಮ್ಸ್ ಮತ್ತು ಚಾರು ಶರ್ಮಾ ಹರಾಜುಗಾರರಾಗಿದ್ದರು.
5 / 5
ಈ ಬಾರಿ 1500ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಅಂತಿಮವಾಗಿ 574 ಆಟಗಾರರ ಶಾರ್ಟ್ ಲಿಸ್ಟ್ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ 574 ಆಟಗಾರರಲ್ಲಿ ಗರಿಷ್ಠ 204 ಆಟಗಾರರು ಮಾತ್ರ ಖರೀದಿದಾರರನ್ನು ಪಡೆಯಲ್ಲಿದ್ದಾರೆ.