
ನ್ಯೂ ಚಂಡೀಗಢದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 564 ರನ್ ಕಲೆಹಾಕಿರುವ ಭಾರತ ತಂಡ ಎರಡನೇ ದಿನದಾಟದಂತ್ಯಕ್ಕೆ ಅಫ್ಘಾನಿಸ್ತಾನ ತಂಡದ ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸಿದೆ. ಈ 5 ವಿಕೆಟ್‌ಗಳಲ್ಲಿ ಪ್ರಮುಖ 3 ವಿಕೆಟ್‌ಗಳನ್ನು ಮಾನವ್ ಸುತಾರ ಪಡೆದಿದ್ದಾರೆ (PC- BCCI).

ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಸ್ಪಿನ್ನರ್ ಮಾನವ್ ಸುತಾರ್ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ಎರಡನೇ ದಿನದಾಟದಂತ್ಯಕ್ಕೆ 15.5 ಓವರ್ ಬೌಲ್ ಮಾಡಿದ ಮಾನವ್ ಕೇವಲ 21 ರನ್‌ಗಳನ್ನು ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಪಡೆದರು. ಮೊದಲ ವಿಕೆಟ್ ರೂಪದಲ್ಲಿ ಅಬ್ದುಲ್ ಮಲಿಕ್ ಅವರ ವಿಕೆಟ್ ಪಡೆದ ಮಾನವ್ ಸುತಾರ್, ಆ ನಂತರ ರಹಮಾನಲ್ಲಾ ಗುರ್ಬಾಜ್ ಮತ್ತು ಅಫ್ಸರ್ ಜಜೈ ಅವರನ್ನು ಸಹ ಔಟ್ ಮಾಡಿದರು (PC- BCCI).

ಅದರಲ್ಲೂ ಮಾನವ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಓವರ್‌ನಲ್ಲಿಯೇ ವಿಕೆಟ್ ಪಡೆದರು. ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಅಬ್ದುಲ್ ಮಲಿಕ್ ಅವರನ್ನು ತಮ್ಮ ಮೊದಲ ಓವರ್ನ 4ನೇ ಎಸೆತದಲ್ಲಿ ಔಟ್ ಮಾಡುವ ಮೂಲಕ, ಮಾನವ್ ಸುತಾರ್ 25 ವರ್ಷಗಳ ವಿಕೆಟ್ ಬರವನ್ನು ಕೊನೆಗೊಳಿಸಿದರು (PC- BCCI).

ಸುತಾರ್‌ಗಿಂತ ಮೊದಲು, ಟಿನು ಯೋಹನ್ನನ್ 2001 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಅದಕ್ಕೂ ಮುನ್ನ 1948 ರಲ್ಲಿ ಮಾಂಟು ಬ್ಯಾನರ್ಜಿ ತಮ್ಮ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿ ಮೊದಲ ಭಾರತೀಯ ಎನಿಸಿಕೊಂಡಿದ್ದರಯ. ಮನೋಹರ್ ಹಾರ್ಡಿಕರ್ ಮತ್ತು ಡಬ್ಲ್ಯೂ.ವಿ. ರಾಮನ್ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದಿದ್ದರು (PC- Google).

ಇದೀಗ ಮಾನವ್ ಸುತಾರ್ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ 25 ವರ್ಷಗಳ ನಂತರ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದ ಮಾನವ್ 28 ರನ್‌ಗಳ ಇನ್ನಿಂಗ್ಸ್ ಆಡುವುದರ ಜೊತೆಗೆ ವಾಷಿಂಗ್ಟನ್ ಸುಂದರ್ ಅವರೊಂದಿಗೆ 54 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು 500 ರನ್‌ಗಳ ಗಡಿ ದಾಟಿಸಿದರು (PC- PTI).