ಧೋನಿ, ಕೊಹ್ಲಿ, ರೋಹಿತ್​ಗೆ ನೀಡಿದ ಗೌರವ ಮನೀಶ್ ಪಾಂಡೆಗೆ ಯಾಕಿಲ್ಲ? ಬಿಸಿಸಿಐ ತಾರತಮ್ಯ ಧೋರಣೆ

Updated on: Apr 18, 2025 | 6:23 PM

18 Years of IPL: 2008ರಿಂದ ಐಪಿಎಲ್​ನಲ್ಲಿ ಆಡುತ್ತಿರುವ ಕೆಲವೇ ಕೆಲವು ಆಟಗಾರರಿಗೆ ಬಿಸಿಸಿಐ ವಿಶೇಷ ಸ್ಮರಣಿಕೆ ನೀಡಿ ಗೌರವಿಸುತ್ತಿದೆ. ಆ ಪ್ರಕಾರ ಧೋನಿ, ಕೊಹ್ಲಿ, ರೋಹಿತ್ ಅವರಿಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿಸಿದೆ. ಆದರೆ ಈ ಮೂವರಂತೆ 18 ಸೀಸನ್ ಆಡಿರುವ ಕನ್ನಡಿಗ ಮನೀಶ್ ಪಾಂಡೆ ಅವರಿಗೆ ಬಿಸಿಸಿಐನಿಂದ ಈ ವಿಶೇಷ ಗೌರವ ಸಿಕ್ಕಿಲ್ಲ. ಮನೀಶ್ ಅವರನ್ನು ಕಡೆಗಣಿಸಿರುವುದು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

1 / 6
2008 ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 18ನೇ ಆವೃತ್ತಿಯನ್ನು ಕಂಡಿದೆ. ಈ ಲೀಗ್​ನಲ್ಲಿ ಆಡಿದ ಅನೇಕ ಆಟಗಾರರು ನಿವೃತ್ತರಾದರೂ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಮೊದಲ ಸೀಸನ್‌ನಿಂದ ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಆದ್ದರಿಂದ, ಐಪಿಎಲ್‌ನ 18 ನೇ ವಾರ್ಷಿಕೋತ್ಸವದಂದು, ಬಿಸಿಸಿಐ ಮೊದಲ ಸೀಸನ್‌ನಿಂದ ಆಡುತ್ತಿರುವ ಈ ಅನುಭವಿಗಳನ್ನು ಗೌರವಿಸಿತು.

2008 ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 18ನೇ ಆವೃತ್ತಿಯನ್ನು ಕಂಡಿದೆ. ಈ ಲೀಗ್​ನಲ್ಲಿ ಆಡಿದ ಅನೇಕ ಆಟಗಾರರು ನಿವೃತ್ತರಾದರೂ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಮೊದಲ ಸೀಸನ್‌ನಿಂದ ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಆದ್ದರಿಂದ, ಐಪಿಎಲ್‌ನ 18 ನೇ ವಾರ್ಷಿಕೋತ್ಸವದಂದು, ಬಿಸಿಸಿಐ ಮೊದಲ ಸೀಸನ್‌ನಿಂದ ಆಡುತ್ತಿರುವ ಈ ಅನುಭವಿಗಳನ್ನು ಗೌರವಿಸಿತು.

2 / 6

ಏಪ್ರಿಲ್ 17 ರಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ರೋಹಿತ್ ಅವರನ್ನು ಸನ್ಮಾನಿಸಿದರು. ರೋಹಿತ್​ಗೂ ಮೊದಲು ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಸಹ ಬಿಸಿಸಿಐ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿತ್ತು. ಆದರೆ ಕನ್ನಡಿಗ ಮನೀಶ್ ಪಾಂಡೆಗೆ ಮಾತ್ರ ಬಿಸಿಸಿಐನಿಂದ ಈ ಗೌರವ ಸಿಕ್ಕಿಲ್ಲ. ಹೀಗಾಗಿ ಈ ಬಗ್ಗೆ ಪ್ರಶ್ನೆಗಳು ಎದ್ದಿವೆ.

3 / 6

ಮೇಲೆ ಹೇಳಿದಂತೆ ರೋಹಿತ್, ವಿರಾಟ್ ಮತ್ತು ಧೋನಿ ಜೊತೆಗೆ, ಮನೀಶ್ ಪಾಂಡೆ ಕೂಡ 2008 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2008 ರ ಅಂಡರ್ 19 ವಿಶ್ವಕಪ್‌ನಲ್ಲಿ ಸಂಚಲನ ಮೂಡಿಸಿದ್ದ ಮನೀಶ್ ಪಾಂಡೆ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆ ಮಾಡಲಾಯಿತು. ನಂತರ 2009 ರಲ್ಲಿ, ಮನೀಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು.

4 / 6

ಆರ್​ಸಿಬಿ ಸೇರಿದ ಕೂಡಲೇ ಐಪಿಎಲ್‌ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದ ಮನೀಶ್, ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್​ನ ಚೊಚ್ಚಲ ಶತಕ ಸಿಡಿಸಿದ್ದರು. ತಮ್ಮ ಇನ್ನಿಂಗ್ಸ್​ನಲ್ಲಿ 73 ಎಸೆತಗಳನ್ನು ಎದುರಿಸಿದ್ದ ಮನೀಶ್ 10 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 114 ರನ್ ಗಳಿಸಿ ಅಜೇಯರಾಗುಳಿದಿದ್ದರು.

5 / 6

ಈ ಮೂಲಕ, ಮನೀಷ್ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಹಾಗೂ ಈ ಲೀಗ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆ ಸಮಯದಲ್ಲಿ ಮನೀಶ್​ಗೆ ಕೇವಲ 19 ವರ್ಷ 253 ದಿನ ವಯಸ್ಸಾಗಿತ್ತು. ಹೀಗಾಗಿ ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಇನ್ನೂ ಮನೀಶ್ ಹೆಸರಿನಲ್ಲಿದೆ.

6 / 6

ಮನೀಶ್ ಪಾಂಡೆ ಈ ಸೀಸನ್‌ನಲ್ಲಿ ಕೆಕೆಆರ್ ಪರ ಆಡುತ್ತಿದ್ದಾರೆ. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿರುವ ಮನೀಶ್ 19 ರನ್ ಗಳಿಸಿದ್ದಾರೆ. ಮನೀಶ್ 18 ವರ್ಷಗಳ ಕಾಲ ಐಪಿಎಲ್ ಆಡಿದ್ದರೂ ಬಿಸಿಸಿಐನಿಂದ ವಿಶೇಷ ಗೌರವ ಸಿಕ್ಕಿಲ್ಲ. ಆದಾಗ್ಯೂ, ಈ ಸೀಸನ್ ಇನ್ನೂ ಬಾಕಿ ಇರುವುದರಿಂದ ಮುಂಬರುವ ಪಂದ್ಯಗಳಲ್ಲಿ ಮನೀಶ್ ಅವರನ್ನು ಸನ್ಮಾನಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

Published On - 6:23 pm, Fri, 18 April 25

Loading...
Unable to load recommendations.
Follow Us