Matheesha Pathirana: ಅತೀ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದ ಮಥೀಶ ಪತಿರಾಣ

| Updated By: ಝಾಹಿರ್ ಯೂಸುಫ್

Updated on: Feb 12, 2024 | 10:58 AM

Matheesha Pathirana: ಯುಎಇನಲ್ಲಿ ನಡೆಯುತ್ತಿರುವ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಶ್ರೀಲಂಕಾದ ಯುವ ವೇಗದ ಬೌಲರ್​ ಮಥೀಶ ಪತಿರಾಣ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶಾರ್ಜಾ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಅತೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಪತಿರಾಣ ಸಂಚಲನ ಸೃಷ್ಟಿಸಿದ್ದಾರೆ.

1 / 6
ಶಾರ್ಜಾದಲ್ಲಿ ನಡೆದ ಇಂಟರ್​ನ್ಯಾಷನಲ್ ಲೀಗ್​ ಟಿ20 ಟೂರ್ನಿಯ 30ನೇ ಪಂದ್ಯದಲ್ಲಿ ಮಥೀಶ ಪತಿರಾಣ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಅತೀ ವೇಗದಲ್ಲಿ ಚೆಂಡೆಸುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಮತ್ತು ಡೆಸರ್ಟ್ ವೈಪರ್ಸ್ ತಂಡಗಳು ಮುಖಾಮುಖಿಯಾಗಿತ್ತು.

2 / 6
ಟಾಸ್ ಗೆದ್ದ ಡೆಸರ್ಟ್ ವೈಪರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಶಾರ್ಜಾ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಡೆಸರ್ಟ್ ವೈಪರ್ಸ್ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ರನ್​ಗಳಿಸಲು ಪರದಾಡಿದರು. ಅದರಲ್ಲೂ ಪತಿರಾಣರ ವೇಗದ ಎಸೆತಗಳನ್ನು ಎದುರಿಸಲು ತಿಣುಕಾಡಿದರು.

3 / 6
145 ರಿಂದ 150 ರ ಅಸುಪಾಸಿನ ವೇಗದ ಚೆಂಡೆಸೆಯುವ ಮೂಲಕ ಮಥೀಶ ಪತಿರಾಣ ಶಾರ್ಜಾ ವಾರಿಯರ್ಸ್ ಬ್ಯಾಟರ್​ಗಳನ್ನು ಕಾಡಿದರು. ಅದರಲ್ಲೂ ತಮ್ಮ ಮೊದಲ ಓವರ್​ನಲ್ಲಿ 3ನೇ ಎಸೆತವನ್ನು 152.1 kmph ವೇಗದಲ್ಲಿ ಎಸೆದರು. ಈ ಮೂಲಕ ಇಂಟರ್​ನ್ಯಾಷನಲ್​ ಲೀಗ್ ಟಿ20 ಯಲ್ಲಿ ಅತ್ಯಂತ ವೇಗದ ಚೆಂಡೆಸೆದ ದಾಖಲೆಯನ್ನು ಮಥೀಶ ಪತಿರಾಣ ತಮ್ಮದಾಗಿಸಿಕೊಂಡರು.

4 / 6
ಇನ್ನು ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಮಥೀಶ ಪತಿರಾಣ 28 ರನ್​ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ಈ ಭರ್ಜರಿ ಬೌಲಿಂಗ್ ಪರಿಣಾಮ ಶಾರ್ಜಾ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 121 ರನ್​ಗಳಿಸಲಷ್ಟೇ ಶಕ್ತರಾದರು. ಈ ಸುಲಭ ಗುರಿಯನ್ನು 12.5 ಓವರ್​ಗಳಲ್ಲಿ ಚೇಸ್ ಮಾಡಿ ಡೆಸರ್ಟ್​ ವೈಪರ್ಸ್ ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

5 / 6
ಅಂದಹಾಗೆ ಐಪಿಎಲ್​ನಲ್ಲಿ ಅತೀ ವೇಗದ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಟೈಟ್ ಡೆಲ್ಲಿ ಡೇರ್ ಡೆವಿಲ್ಸ್​ (ಈಗಿನ ಡೆಲ್ಲಿ ಕ್ಯಾಪಿಟಲ್ಸ್​) ವಿರುದ್ಧ 157.7 kmph ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ.

6 / 6
ಇದೀಗ 21 ವರ್ಷದ ಮಥೀಶ ಪತಿರಾಣ 152.1 kmph ವೇಗದಲ್ಲಿ ಚೆಂಡೆಸೆದು ಸಂಚಲನ ಸೃಷ್ಟಿಸಿದ್ದಾರೆ. ಈ ಮೂಲಕ ಐಪಿಎಲ್​ಗಾಗಿ ಭರ್ಜರಿ ತಯಾರಿದ್ದಾರೆ. ಅದರಂತೆ ಸಿಎಸ್​ಕೆ ಪರ ಕಣಕ್ಕಿಳಿಯಲಿರುವ ಪತಿರಾಣ ಕಡೆಯಿಂದ ಈ ಬಾರಿ ಬೆಂಕಿ ಬೌಲಿಂಗ್ ಅನ್ನು ನಿರೀಕ್ಷಿಸಬಹುದು.