ನೂರರ ಸರದಾರರ ಪಟ್ಟಿಗೆ ಸೇರ್ಪಡೆಯಾದ ಮಿಚೆಲ್ ಸ್ಟಾರ್ಕ್
Australia vs Pakistan: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಪಂದ್ಯವು ಮೆಲ್ಬೋರ್ನ್ನಲ್ಲಿ ನಡೆಯುತ್ತಿದ್ದು, ಈ ಪಂದ್ಯದ ಮೂಲಕ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ವಿಶೇಷ ದಾಖಲೆ ಬರೆದಿದ್ದಾರೆ.
1 / 5
ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ತವರಿನಲ್ಲಿ 100 ಏಕದಿನ ವಿಕೆಟ್ಗಳನ್ನು ಕಬಳಿಸಿದ ವಿಶೇಷ ಸಾಧನೆ ಮಾಡಿದ್ದಾರೆ. ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೈಮ್ ಅಯ್ಯೂಬ್ ವಿಕೆಟ್ ಕಬಳಿಸುವುದರೊಂದಿಗೆ ಸ್ಟಾರ್ಕ್ ಈ ದಾಖಲೆ ಬರೆದಿದ್ದಾರೆ.
2 / 5
ಈ ಮೂಲಕ ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ 6ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಬ್ರೆಟ್ ಲೀ (169 ವಿಕೆಟ್), ಮೆಕ್‌ಗ್ರಾತ್ (161 ವಿಕೆಟ್), ಶೇನ್ ವಾರ್ನ್ (136 ವಿಕೆಟ್), ಕ್ರೇಗ್ ಮೆಕ್‌ಡರ್ಮಾಟ್ (125 ವಿಕೆಟ್) ಮತ್ತು ಸ್ಟೀವ್ ವಾ (101 ವಿಕೆಟ್) ಮಾತ್ರ ಈ ಸಾಧನೆ ಮಾಡಿದ್ದರು.
3 / 5
ಇದೀಗ 100 ವಿಕೆಟ್ಗಳನ್ನು ಪೂರೈಸುವ ಮೂಲಕ ಮಿಚೆಲ್ ಸ್ಟಾರ್ಕ್ ಈ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಎಡಗೈ ವೇಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
4 / 5
ಆಸ್ಟ್ರೇಲಿಯಾ ಪರ 126 ಏಕದಿನ ಪಂದ್ಯಗಳನ್ನಾಡಿರುವ ಮಿಚೆಲ್ ಸ್ಟಾರ್ಕ್ 6464 ಎಸೆತಗಳನ್ನು ಎಸೆದಿದ್ದು, ಈ ವೇಳೆ 5670 ರನ್ ನೀಡಿ ಒಟ್ಟು 244 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೀಗ ಪಾಕಿಸ್ತಾನ್ ವಿರುದ್ಧ ಸರಣಿ ಆಡುತ್ತಿರುವ ಸ್ಟಾರ್ಕ್ 6 ವಿಕೆಟ್ ಪಡೆದರೆ, 250 ವಿಕೆಟ್ ಕಬಳಿಸಿದ ಸಾಧಕರ ಪಟ್ಟಿಗೂ ಸೇರ್ಪಡೆಯಾಗಲಿದ್ದಾರೆ.
5 / 5
ಇನ್ನು ಪಾಕಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ ಮಾರಕ ದಾಳಿ ಸಂಘಟಿಸಿದ್ದು, ಮೊದಲ 6 ಓವರ್ಗಳಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ಪರಿಣಾಮ ಪಾಕಿಸ್ತಾನ್ ತಂಡವು 21 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು ಕೇವಲ 72 ರನ್ ಕಲೆಹಾಕಿದೆ.