Moeen Ali: ಯುವರಾಜ್ ಸಿಂಗ್​ರ ಅಪರೂಪದ ದಾಖಲೆ ಸರಿಗಟ್ಟಿದ ಮೊಯೀನ್ ಅಲಿ

| Updated By: ಝಾಹಿರ್ ಯೂಸುಫ್

Updated on: Feb 14, 2024 | 3:08 PM

BPL 2024: ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ಆಲ್​ರೌಂಡರ್ ಮೊಯೀನ್ ಅಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ 2009 ರಲ್ಲಿ ಯುವರಾಜ್ ಸಿಂಗ್ ಬರೆದಿದ್ದ ಅಪರೂಪದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

1 / 7
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಮೊಯೀನ್ ಅಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಯುವರಾಜ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬರೆದಿದ್ದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

2 / 7
ಚಟ್ಟೋಗ್ರಾಮ್ ಚಾಲೆಂಜರ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ಪರ ಕಣಕ್ಕಿಳಿದಿದ್ದ ಮೊಯೀನ್ ಅಲಿ ಆಲ್​ರೌಂಡರ್ ಆಟದೊಂದಿಗೆ ಮಿಂಚಿದರು. ಮೊದಲು ಬ್ಯಾಟ್ ಮಾಡಿದ ಕೊಮಿಲ್ಲಾ ಪರ ವಿಲ್ ಜಾಕ್ಸ್ (108) ಶತಕ ಬಾರಿಸಿದರೆ, ಮೊಯೀನ್ ಅಲಿ (53) ಅರ್ಧಶತಕ ಸಿಡಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೊಮಿಲ್ಲಾ ವಿಕ್ಟೋರಿಯನ್ಸ್ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 239 ರನ್ ಕಲೆಹಾಕಿತು.

3 / 7
240 ರನ್​ಗಳ ಕಠಿಣ ಗುರಿ ಪಡೆದ ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡವು ಮೊದಲ ವಿಕೆಟ್​ಗೆ 80 ರನ್ ಕಲೆಹಾಕಿದರೂ ಆ ಬಳಿಕ ಮೊಯೀನ್ ಅಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 17ನೇ ಓವರ್​ನ ಮೊದಲ ಎಸೆತದಲ್ಲಿ ಶೊಹಿದುಲ್ ಇಸ್ಲಾಂ (2) ವಿಕೆಟ್ ಪಡೆದ ಮೊಯೀನ್ ಅಲಿ, 2ನೇ ಎಸೆತದಲ್ಲಿ ಅಲ್ ಅಮೀನ್ ಅವರನ್ನು ಔಟ್ ಮಾಡಿದರು. ಇನ್ನು ಮೂರನೇ ಎಸೆತದಲ್ಲಿ ಬಿಲಾಲ್ ಖಾನ್ ಅವರ ವಿಕೆಟ್ ಕಬಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

4 / 7
ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿ, ಹ್ಯಾಟ್ರಿಕ್ ವಿಕೆಟ್ ಪಡೆದ ವಿಶೇಷ ದಾಖಲೆಯನ್ನು ಮೊಯೀನ್ ಅಲಿ ಬರೆದರು. ಇದಕ್ಕೂ ಮುನ್ನ ಯುವರಾಜ್ ಸಿಂಗ್ ಇಂತಹದೊಂದು ಅಪರೂಪದ ದಾಖಲೆ ಬರೆದಿದ್ದರು.

5 / 7
2009 ರಲ್ಲಿ ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ಕಿಂಗ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದ ಯುವರಾಜ್ ಸಿಂಗ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. ಅಲ್ಲದೆ ಇದೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಅವರು 34 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲಿ ಅರ್ಧಶತಕದ ಜೊತೆಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಅಪರೂಪದ ದಾಖಲೆಯೊಂದನ್ನು ಯುವರಾಜ್ ಸಿಂಗ್ ಬರೆದಿದ್ದರು.

6 / 7
ಇದೀಗ ಚಟ್ಟೋಗ್ರಾಮ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಮೊಯೀನ್ ಅಲಿ 53 ರನ್​ಗಳನ್ನು ಬಾರಿಸಿ ಆ ಬಳಿಕ ಬೌಲಿಂಗ್​ನಲ್ಲಿ ಹ್ಯಾಟ್ರಿಕ್ ವಿಕೆಟ್​ ಸಾಧನೆ ಮಾಡಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಮೊಯೀನ್ ಅಲಿ ಸರಿಗಟ್ಟಿದ್ದಾರೆ.

7 / 7
ಇನ್ನು ಈ ಪಂದ್ಯದಲ್ಲಿ 3.3 ಓವರ್​ಗಳನ್ನು ಎಸೆದ ಮೊಯೀನ್ ಅಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇದರೊಂದಿಗೆ ಚಟ್ಟೋಗ್ರಾಮ್ ಚಾಲೆಂಜರ್ಸ್ 16.3 ಓವರ್​ಗಳಲ್ಲಿ 166 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡ 73 ರನ್​ಗಳ ಭರ್ಜರಿ ಜಯ ಸಾಧಿಸಿದೆ.