ನಿವೃತ್ತಿ ಘೋಷಿಸಿದ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಟಗಾರ
Mohammad Nabi: ಮೊಹಮ್ಮದ್ ನಬಿ ಅಫ್ಘಾನಿಸ್ತಾನ್ ಪರ 167 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2 ಶತಕ ಹಾಗೂ 17 ಅರ್ಧಶತಕಗಳೊಂದಿಗೆ ಒಟ್ಟು 3588 ರನ್ ಕಲೆಹಾಕಿದ್ದಾರೆ. ಹಾಗೆಯೇ 161 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 172 ವಿಕೆಟ್ ಕಬಳಿಸಿದ್ದಾರೆ.
1 / 5
ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಲ್ರೌಂಡರ್ ಮೊಹಮ್ಮದ್ ನಬಿ (Mohammad Nabi) ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದು, ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ನಬಿ ತಿಳಿಸಿದ್ದಾರೆ.
2 / 5
2023 ರಲ್ಲಿ ನಡೆದ ಏಕದಿನ ವಿಶ್ವಕಪ್ನೊಂದಿಗೆ ವಿದಾಯ ಹೇಳಲು ಬಯಸಿದ್ದೆ. ಆದರೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಫ್ಘಾನಿಸ್ತಾನ್ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದುಕೊಂಡಿದೆ. ಹೀಗಾಗಿ ಈ ಟೂರ್ನಿಯಲ್ಲಿ ಕೊನೆಯ ಬಾರಿ ಕಣಕ್ಕಿಳಿದು ವಿದಾಯ ಹೇಳಲು ಬಯಸಿರುವುದಾಗಿ ಮೊಹಮ್ಮದ್ ನಬಿ ತಿಳಿಸಿದ್ದಾರೆ.
3 / 5
ವಿಶೇಷ ಎಂದರೆ ಅಫ್ಘಾನಿಸ್ತಾನ್ ಪರ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿದ ದಾಖಲೆ ಮೊಹಮ್ಮದ್ ನಬಿ ಹೆಸರಿನಲ್ಲಿದೆ. ಒಟ್ಟು 167 ಪಂದ್ಯಗಳೊಂದಿಗೆ ಹಿರಿಯ ಆಟಗಾರ ಈ ದಾಖಲೆ ಬರೆದಿದ್ದಾರೆ. ಹಾಗೆಯೇ ಐಸಿಸಿ ಏಕದಿನ ಆಲ್ರೌಂಡರ್ ಶ್ರೇಯಾಂಕದಲ್ಲೂ ನಬಿ ಅಗ್ರಸ್ಥಾನ ಅಲಂಕರಿಸಿದ ಸಾಧನೆ ಮಾಡಿದ್ದಾರೆ.
4 / 5
ಇವೆಲ್ಲದರ ನಡುವೆ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ದೇಶಗಳ ವಿರುದ್ಧ ಗೆಲುವು ಕಂಡ ವಿಶೇಷ ದಾಖಲೆಯೊಂದು ಮೊಹಮ್ಮದ್ ನಬಿ ಹೆಸರಿನಲ್ಲಿದೆ. 2009 ರಿಂದ ಅಫ್ಘಾನಿಸ್ತಾನ್ ಪರ ಕಣಕ್ಕಿಳಿಯುತ್ತಿರುವ ನಬಿ ಈವರೆಗೆ 46 ದೇಶಗಳ ವಿರುದ್ಧ ಗೆಲುವಿನ ನಗೆ ಬೀರಿದಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ದೇಶಗಳ ವಿರುದ್ಧ ಜಯ ಸಾಧಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
5 / 5
ಇದೀಗ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿರುವ 39 ವರ್ಷದ ಮೊಹಮ್ಮದ್ ನಬಿ ಮುಂಬರುವ ದಿನಗಳಲ್ಲಿ ಟಿ20 ಕ್ರಿಕೆಟ್ನಲ್ಲಿ ಮುಂದುವರೆಯುವ ಇರಾದೆಯಲ್ಲಿದ್ದಾರೆ. ಹಾಗೆಯೇ ಫ್ರಾಂಚೈಸಿ ಲೀಗ್ನಲ್ಲೂ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ನಬಿಯ ಯುಗಾಂತ್ಯವಾಗಲಿದೆ.