ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪ: ಟೀಮ್ ಇಂಡಿಯಾದಿಂದ ಬ್ಯಾನ್ ಭೀತಿ
Mohammed Shami: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತೆ ಮೈದಾನಕ್ಕಿಳಿದಿದ್ದಾರೆ, 2023ರ ಏಕದಿನ ವಿಶ್ವಕಪ್ ಬಳಿಕ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ ಇದೀಗ ರಣಜಿ ಟೂರ್ನಿಯ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಈ ಕಂಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.
1 / 5
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಭಾರತೀಯ ಆಟಗಾರ ತಮ್ಮ ವಯಸ್ಸನ್ನು ಮರೆಮಾಚಿದ್ದಾರೆ ಎಂದು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಶಮಿ ಅವರ ಡ್ರೈವಿಂಗ್ ಲೈಸನ್ಸ್ ಫೋಟೋವನ್ನು ಹಂಚಿಕೊಂಡಿದ್ದಾರೆ.
2 / 5
ಈ ಡ್ರೈವಿಂಗ್ ಲೈಸನ್ಸ್ ಪ್ರಕಾರ ಮೊಹಮ್ಮದ್ ಶಮಿ ಅವರ ವಯಸ್ಸು 42. ಆದರೆ ಅಧಿಕೃತವಾಗಿ ಅವರು ಪ್ರಸ್ತಾಪಿಸಿರುವ ವಯಸ್ಸು 34 ವರ್ಷಗಳು. ಅಂದರೆ ಇಲ್ಲಿ 8 ವರ್ಷಗಳನ್ನು ಮೊಹಮ್ಮದ್ ಶಮಿ ಮರೆ ಮಾಚಿದ್ದಾರೆ ಎಂದು ಮೋಹನ್ ಕೃಷ್ಣ ಎಂಬವರು ಆರೋಪಿಸಿದ್ದಾರೆ.
3 / 5
ಬಿಸಿಸಿಐ ನಿಯಮಗಳ ಪ್ರಕಾರ, ವಯಸ್ಸನ್ನು ಮರೆಮಾಚುವುದು ಗಂಭೀರ ಅಪರಾಧ. ಸಾಮಾನ್ಯವಾಗಿ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ತಮ್ಮ ವಯಸ್ಸನ್ನು ಒಂದು ಅಥವಾ ಎರಡು ವರ್ಷ ಕಡಿಮೆ ಎಂದು ಘೋಷಿಸುತ್ತಾರೆ. ಹೀಗೆ ವಯಸ್ಸು ಬದಲಿಸಿ ಹಲವು ಆಟಗಾರರು ಈ ಹಿಂದೆ ಸಿಕ್ಕಿ ಬಿದ್ದಿದ್ದರು. ಅಲ್ಲದೆ ಅಂತಹ ಆಟಗಾರರ ವಿರುದ್ಧ ಬಿಸಿಸಿಐ ಅಮಾನತಿನೊಂದಿಗೆ ಕಠಿಣ ಕ್ರಮ ಕೈಗೊಂಡಿತು.
4 / 5
ಇದೀಗ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೂಡ ವಯಸ್ಸು ಬದಲಾವಣೆಯ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ಮಾಡುವಂತೆ ಕೃಷ್ಣ ಮೋಹನ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದರೆ, ಶಮಿ ಅವರು ತನಿಖೆಗೆ ಒಳಪಡಲಿದ್ದಾರೆ. ಅಲ್ಲದೆ ಇದು ನಿಜವಾದರೆ ಅವರು ಬ್ಯಾನ್ ಆಗುವ ಸಾಧ್ಯತೆ ಕೂಡ ಇದೆ.
5 / 5
ಇತ್ತ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ ಇದೀಗ ಗಾಯದಿಂದ ಚೇತರಿಸಿಕೊಂಡು ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ಬಂಗಾಳ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ವಿರುದ್ಧ ವಯಸ್ಸು ಬದಲಾವಣೆಯ ಗಂಭೀರ ಆರೋಪ ಕೇಳಿ ಬಂದಿದೆ.
Published On - 12:30 pm, Sun, 17 November 24