Mohammed Shami: ಮೊಹಮ್ಮದ್ ಶಮಿಗೆ ಬಿಗ್ ಶಾಕ್: ಪತ್ನಿಗೆ ತಿಂಗಳು 50 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶ

| Updated By: ಝಾಹಿರ್ ಯೂಸುಫ್

Updated on: Jan 23, 2023 | 8:33 PM

Mohammed Shami - Hasin Jahan: 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್​ಗೆ ಒಬ್ಬಳು ಮಗಳಿದ್ದಾಳೆ. ವಿಶೇಷ ಎಂದರೆ ಅದಾಗಲೇ ಮದುವೆಯಾಗಿ ಡೈವೋರ್ಸ್ ಪಡೆದಿದ್ದ ಹಸಿನ್ ಜಹಾನ್ ಅವರನ್ನು ಶಮಿ ವಿವಾಹವಾಗಿದ್ದರು.

1 / 7
ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಣ 5 ವರ್ಷಗಳ ಕಾನೂನು ಹೋರಾಟ ಒಂದು ಹಂತಕ್ಕೆ ಬಂದು ನಿಂತಿದೆ. ಐದು ವರ್ಷಗಳ ಹಿಂದೆ ಆರಂಭವಾಗಿದ್ದ ಕಾನೂನು ಸಮರದಲ್ಲಿ ಇದೀಗ ಅಲಿಪುರ ಜಿಲ್ಲಾ ನ್ಯಾಯಾಲಯವು ಪತ್ನಿ ಹಸಿನ್ ಜಹಾನ್ ಪರವಾಗಿ ತೀರ್ಪು ನೀಡಿದೆ.

2 / 7
16 ಆಗಸ್ಟ್ 2018 ರಂದು, ಹಸಿನ್ ಜಹಾನ್ ಪತ್ನಿ ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

3 / 7
ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ ಹಸಿನ್ ಜಹಾನ್ ಮಾಸಿಕ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಇದೀಗ ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಾಲಯವು, ಮೊಹಮ್ಮದ್ ಶಮಿ ಅವರಿಗೆ ಪ್ರತಿ ತಿಂಗಳು 50 ಸಾವಿರ ರೂ. ನೀಡಬೇಕೆಂದು ಸೂಚಿಸಿದೆ.

4 / 7
ಮೊಹಮ್ಮದ್ ಶಮಿ ಅವರ ವಾರ್ಷಿಕ ಆದಾಯ ಆದಾಯ ತೆರಿಗೆ 7.19 ಕೋಟಿ ರೂ. ಇದನ್ನು ಪರಿಗಣಿಸಿ ಪ್ರತಿ ತಿಂಗಳು 10ನೇ ತಾರೀಖಿನಂದು 50 ಸಾವಿರ ರೂ. ಪಾವತಿಗೆ ಕೋರ್ಟ್​ ಆದೇಶಿಸಿದೆ. ಅಷ್ಟೇ ಅಲ್ಲದೆ ಹಸಿನ್ ಜಹಾನ್ ಅವರ ಮಾಸಿಕ 10 ಲಕ್ಷ ರೂ. ಬೇಡಿಕೆಯನ್ನು ತಿರಸ್ಕರಿಸಿದೆ.

5 / 7
2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್​ಗೆ ಒಬ್ಬಳು ಮಗಳಿದ್ದಾಳೆ. ವಿಶೇಷ ಎಂದರೆ ಅದಾಗಲೇ ಮದುವೆಯಾಗಿ ಡೈವೋರ್ಸ್ ಪಡೆದಿದ್ದ ಹಸಿನ್ ಜಹಾನ್ ಅವರನ್ನು ಶಮಿ ವಿವಾಹವಾಗಿದ್ದರು. ಆದರೆ ಹೊಸ ಜೀವನ ಆರಂಭಿಸಿದ್ದ ಈ ಜೋಡಿ ನಡುವೆ ಬಿರುಕುಂಟಾಗಿತ್ತು.

6 / 7
ಅದರಲ್ಲೂ 2018 ರಲ್ಲಿ ಕೌಟುಂಬಿಕ ಹಿಂಸೆ, ಹಲ್ಲೆ, ವರದಕ್ಷಿಣೆ ಕಿರುಕುಳ ಮತ್ತು ಕ್ರಿಕೆಟ್ ಫಿಕ್ಸಿಂಗ್‌ನಂತಹ ಹಲವು ಗಂಭೀರ ಆರೋಪಗಳನ್ನು ಹಸಿನ್ ಜಹಾನ್ ಮಾಡಿದ್ದರು. ಆದಾಗ್ಯೂ, ಫಿಕ್ಸಿಂಗ್ ಬಗ್ಗೆ ಬಿಸಿಸಿಐ ತನಿಖೆಯಲ್ಲಿ ಅವರು ನಿರಪರಾಧಿ ಎಂದು ಸಾಬೀತಾಗಿತ್ತು.

7 / 7
ಇನ್ನು ಪತ್ನಿ ಮಾಡಿರುವ ಎಲ್ಲಾ ಆರೋಪಗಳನ್ನು ಮೊಹಮ್ಮದ್ ಶಮಿ  ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಸದ್ಯ ಪತ್ಯೇಕವಾಗಿ ವಾಸಿಸುತ್ತಿರುವ ಈ ಜೋಡಿಯು ಇನ್ನೂ ಕೂಡ ವಿಚ್ಛೇದನ ಪಡೆದಿಲ್ಲ.