Virat Kohli: ಐಸಿಸಿ ಟಿ20 ತಂಡದಲ್ಲಿ ಕೊಹ್ಲಿ: ಆದರೆ ಟೀಮ್ ಇಂಡಿಯಾದಲ್ಲಿಲ್ಲ ಸ್ಥಾನ

ICC T20I Team of the Year 2022: ಜೋಸ್ ಬಟ್ಲರ್ (ನಾಯಕ- ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ), ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಸಿಕಂದರ್ ರಾಝ (ಜಿಂಬಾಬ್ವೆ), ಹಾರ್ದಿಕ್ ಪಾಂಡ್ಯ (ಭಾರತ).

ಝಾಹಿರ್ ಯೂಸುಫ್
|

Updated on: Jan 23, 2023 | 11:02 PM

ಐಸಿಸಿ 2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಿಸಿದೆ. 11 ಸದಸ್ಯರ ಈ ತಂಡದಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಐಸಿಸಿಯ ಬೆಸ್ಟ್ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕಿಂಗ್ ಕೊಹ್ಲಿಗೆ ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ ಎಂಬುದೇ ಅಚ್ಚರಿ.

1 / 6
ಅಂದರೆ ಟಿ20 ವಿಶ್ವಕಪ್​ ಬಳಿಕ ಟೀಮ್ ಇಂಡಿಯಾ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಜನವರಿ 27 ರಿಂದ ಶುರುವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿಲ್ಲ.

2 / 6
2024ರ ಟಿ20 ವಿಶ್ವಕಪ್​ ಅನ್ನು ಗಮನದಲ್ಲಿರಿಸಿ ಬಿಸಿಸಿಐ ಹಿರಿಯ ಆಟಗಾರರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸುತ್ತಿಲ್ಲ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಟಿ20 ವಿಶ್ವಕಪ್​ ಬಳಿಕ ಯಾವುದೇ ಚುಟುಕು ಸರಣಿಗೆ ಆಯ್ಕೆ ಮಾಡಿಲ್ಲ.

3 / 6
ಆದರೆ 34 ವರ್ಷದ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಆಡುವ ಫಿಟ್​ನೆಸ್ ಹೊಂದಿದ್ದಾರೆ. ಅಲ್ಲದೆ ಕಳೆದ ಏಷ್ಯಾಕಪ್​ ಬಳಿಕ ಅದ್ಭುತ ಫಾರ್ಮ್​ ಅನ್ನು ಕೂಡ ಮುಂದುವರೆಸಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿಯನ್ನು ಟಿ20 ತಂಡಕ್ಕೆ ಪರಿಗಣಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

4 / 6
ಇದೀಗ ಐಸಿಸಿ ಪ್ರಕಟಿಸಿರುವ 2022ರ ಅತ್ಯುತ್ತಮ ಟಿ20 ತಂಡದಲ್ಲೂ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಟಿ20 ತಂಡಕ್ಕೆ ಕೊಹ್ಲಿಯನ್ನು ಆಯ್ಕೆ ಮಾಡದಿರುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಒಟ್ಟಿನಲ್ಲಿ ಹಿರಿಯ ಆಟಗಾರರನ್ನು ಕೈಬಿಟ್ಟು ಮುಂಬರುವ ಟಿ20 ವಿಶ್ವಕಪ್​​ಗೆ ಯುವ ಬಳಗವನ್ನು ರೂಪಿಸಲು ಹೊರಟಿರುವ ಬಿಸಿಸಿಐ ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರವನ್ನು ಬದಲಿಸಲಿದೆಯಾ ಕಾದು ನೋಡಬೇಕಿದೆ.

5 / 6
2022ರ ಐಸಿಸಿ ಪುರುಷರ ಟಿ20 ತಂಡ ಹೀಗಿದೆ: ಜೋಸ್ ಬಟ್ಲರ್ (ನಾಯಕ- ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ), ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಸಿಕಂದರ್ ರಾಝ (ಜಿಂಬಾಬ್ವೆ), ಹಾರ್ದಿಕ್ ಪಾಂಡ್ಯ (ಭಾರತ), ಸ್ಯಾಮ್ ಕರನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ಹ್ಯಾರಿಸ್ ರೌಫ್ (ಪಾಕಿಸ್ತಾನ್), ಜೋಶ್ ಲಿಟಲ್ (ಐರ್ಲೆಂಡ್).

6 / 6
Follow us