Mohammed Siraj: ಮಿಯಾನ್ ಮ್ಯಾಜಿಕ್: ದಾಖಲೆಗಳ ಮೇಲೆ ದಾಖಲೆ ಬರೆದ ಸಿರಾಜ್

| Updated By: ಝಾಹಿರ್ ಯೂಸುಫ್

Updated on: Jan 04, 2024 | 6:59 AM

Mohammed Siraj Records: ಪ್ರಥಮ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡದ ಲೆಕ್ಕಾಚಾರಗಳನ್ನು ಮೊಹಮ್ಮದ್ ಸಿರಾಜ್ ತಲೆಕೆಳಗಾಗಿಸಿದ್ದರು. ನಾಲ್ಕನೇ ಓವರ್​ನಲ್ಲಿ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಆ ಬಳಿಕ ಹಿಂತಿರುಗಿ ನೋಡಿಲ್ಲ.

1 / 8
ಕೇಪ್​ಟೌನ್​ನ ನ್ಯೂಲ್ಯಾಂಡ್ಸ್​ ಮೈದಾನದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಮಿಯಾನ್ ಮ್ಯಾಜಿಕ್ ತೋರಿಸಿದ್ದಾರೆ. ಅದು ಕೂಡ ಮೊದಲ ದಿನದಾಟದ ಮೊದಲ ಸೆಷನ್​ನಲ್ಲೇ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.

2 / 8
ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡದ ಲೆಕ್ಕಾಚಾರಗಳನ್ನು ಮೊಹಮ್ಮದ್ ಸಿರಾಜ್ ತಲೆಕೆಳಗಾಗಿಸಿದ್ದರು. ನಾಲ್ಕನೇ ಓವರ್​ನಲ್ಲಿ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಆ ಬಳಿಕ ಹಿಂತಿರುಗಿ ನೋಡಿಲ್ಲ.

3 / 8
ಕೇವಲ 9 ಓವರ್​ಗಳನ್ನು ಎಸೆದ ಸಿರಾಜ್ 15 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಸಿರಾಜ್ ಅವರ ಈ ಮಾರಕ ದಾಳಿಯ ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 55 ರನ್​ಗಳಿಗೆ ಆಲೌಟ್ ಆಯಿತು. ಇತ್ತ 6 ವಿಕೆಟ್ ಉರುಳಿಸಿ ಮೊಹಮ್ಮದ್ ಸಿರಾಜ್ ಕೂಡ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

4 / 8
ಟೆಸ್ಟ್ ಪಂದ್ಯದ ಮೊದಲ ಸೆಷನ್‌ನಲ್ಲೇ 6 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನು ಮೊಹಮ್ಮದ್ ಸಿರಾಜ್ ತಮ್ಮದಾಗಿಸಿಕೊಂಡಿದ್ದಾರೆ.

5 / 8
ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್​ನಲ್ಲಿ ಅತೀ ಕಡಿಮೆ ರನ್ ನೀಡಿ 6 ವಿಕೆಟ್ ಕಬಳಿಸಿದ ದಾಖಲೆ ಕೂಡ ಮೊಹಮ್ಮದ್ ಸಿರಾಜ್ ಪಾಲಾಗಿದೆ.

6 / 8
ಮೊದಲ ದಿನದಾಟದ ಲಂಚ್​ ಟೈಮ್​ಗೂ ಮುನ್ನ 5 ವಿಕೆಟ್ ಕಬಳಿಸಿದ ಭಾರತದ 2ನೇ ಬೌಲರ್ ಎಂಬ ಹೆಗ್ಗಳಿಕೆಗೂ ಸಿರಾಜ್ ಪಾತ್ರರಾದರು. ಇದಕ್ಕೂ ಮುನ್ನ 1987 ರಲ್ಲಿ ಮಣಿಂದರ್ ಸಿಂಗ್ ಈ ಸಾಧನೆ ಮಾಡಿದ್ದರು.

7 / 8
ಟೆಸ್ಟ್​ ಕ್ರಿಕೆಟ್​ನ ಮೊದಲ ಸೆಷನ್​ನಲ್ಲೇ 5+ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ದಾಖಲೆ ಕೂಡ ಮೊಹಮ್ಮದ್ ಸಿರಾಜ್ ಪಾಲಾಗಿದೆ. ಹಾಗೆಯೇ ಈ ಸಾಧನೆ ಮಾಡಿದ ವಿಶೇಷ ಸಾಧಕರ ಪಟ್ಟಿಗೂ ಸಿರಾಜ್ ಸೇರ್ಪಡೆಯಾಗಿದ್ದಾರೆ.

8 / 8
ಒಟ್ಟಿನಲ್ಲಿ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಮಿಯಾನ್ ಮ್ಯಾಜಿಕ್ ತೋರಿಸುವ ಮೂಲಕ ಮೊಹಮ್ಮದ್ ಸಿರಾಜ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಹೊಸ ವರ್ಷದಲ್ಲಿ ಸಿರಾಜ್ ಭರ್ಜರಿ ಶುಭಾರಂಭ ಮಾಡಿರುವುದು ವಿಶೇಷ.