IND vs WI: ರನ್​ ಗಳಿಸಬೇಡ ಅಷ್ಟೇ… ಸಿರಾಜ್ ವಾರ್ನಿಂಗ್..!

Updated on: Oct 14, 2025 | 8:30 AM

India vs West Indies, 2nd Test: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಟೀಮ್ ಇಂಡಿಯಾಗೆ ಕೇವಲ 58 ರನ್​ಗಳ ಅವಶ್ಯಕತೆಯಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು 1 ವಿಕೆಟ್ ಕಳೆದುಕೊಂಡು 63 ರನ್​ಗಳಿಸಿದ್ದು, ಐದನೇ ದಿನದಾಟದಲ್ಲಿ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

1 / 5
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 2ನೇ ಟೆಸ್ಟ್ ಪಂದ್ಯವು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ನಾಲ್ಕನೇ ದಿನದಾಟದಲ್ಲೇ ಮುಗಿಯಬೇಕಿದ್ದ ಈ ಪಂದ್ಯವನ್ನು ಐದನೇ ದಿನದಾಟಕ್ಕೆ ಕೊಂಡೊಯ್ದ ಶ್ರೇಯಸ್ಸು ವೆಸ್ಟ್ ಇಂಡೀಸ್​ನ ಜಸ್ಟಿನ್ ಗ್ರೀವ್ಸ್​ಗೆ ಸಲ್ಲಬೇಕು. ಇದೇ ಕಾರಣದಿಂದಾಗಿ ಸಿರಾಜ್ ಗ್ರೀವ್ಸ್​ ಅವರಿಗೆ ವಾರ್ನಿಂಗ್ ನೀಡಿದ ಸ್ವಾರಸ್ಯಕರ ಘಟನೆ ಕೂಡ ನಡೆದಿದೆ.

2 / 5
ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಸ್ಟಿನ್ ಗ್ರೀವ್ಸ್ ಭಾರತೀಯ ಬೌಲರ್​ಗಳ ವಿರುದ್ಧ ಸೆಟೆದು ನಿಂತಿದರು. ಪರಿಣಾಮ 311 ರನ್​ಗಳಿಗೆ ಆಲೌಟ್ ಆಗಬೇಕಿದ್ದ ವೆಸ್ಟ್ ಇಂಡೀಸ್​ ತಂಡವು ಅಂತಿಮ ವಿಕೆಟ್​ಗೆ ಬರೋಬ್ಬರಿ 89 ರನ್​ ಕಲೆಹಾಕಿತು. ಇತ್ತ ಗ್ರೀವ್ಸ್ ವಿಕೆಟ್ ಪಡೆಯಲು ಮೊಹಮ್ಮದ್ ಸಿರಾಜ್ ಕೂಡ ಹರಸಾಹಸ ಪಟ್ಟಿದ್ದರು.

3 / 5
ಅದರಲ್ಲೂ ಟೀ ಬ್ರೇಕ್ ವೇಳೆ ಮೊಹಮ್ಮದ್ ಸಿರಾಜ್ ಜಸ್ಟಿನ್ ಗ್ರೀವ್ಸ್ ಬಳಿ ಹೋಗಿ ರನ್​ ಗಳಿಸಬೇಡ, ಔಟಾಗು ಎಂದು ತಮಾಷೆಗೆ ಎಚ್ಚರಿಕೆ ನೀಡುತ್ತಿರುವುದು ಕಂಡು ಬಂತು. ಸಿರಾಜ್ ಮಾತಿಗೆ ಗ್ರೀವ್ಸ್ ನಗುವಿನ ಉತ್ತರ ನೀಡಿದರು. ಇದಾಗ್ಯೂ ಜಸ್ಟಿನ್ ಗ್ರೀವ್ಸ್ ವಿಕೆಟ್ ಪಡೆಯಲು ಟೀಮ್ ಇಂಡಿಯಾಗೆ ಸಾಧ್ಯವಾಗಲೇ ಇಲ್ಲ.

4 / 5
ಈ ಪಂದ್ಯದ ಸೆಕೆಂಡ್ ಇನಿಂಗ್ಸ್​ನ ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ ಜಸ್ಟಿನ್ ಗ್ರೀವ್ಸ್ 85 ಎಸೆತಗಳನ್ನು ಎದುರಿಸಿ 3 ಫೋರ್​ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 390 ರನ್​ಗಳಿಸಿ ಆಲೌಟ್ ಆಗಿದೆ.

5 / 5
ಮೊದಲ ಇನಿಂಗ್ಸ್​ನಲ್ಲಿನ 270 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 121 ರನ್​ಗಳ ಗುರಿ ಪಡೆದಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 63 ರನ್​ ಕಲೆಹಾಕಿದೆ. ಇನ್ನು ಕೊನೆಯ ದಿನದಾಟದಲ್ಲಿ 58 ರನ್​ಗಳಿಸಿದರೆ ಟೀಮ್ ಇಂಡಿಯಾ ಜಯಿಸಲಿದೆ.