IND vs ENG: ಮೊದಲ ಇನ್ನಿಂಗ್ಸ್​ನ ಅತ್ಯಂತ ದುಬಾರಿ ಬೌಲರ್ ಮೊಹಮ್ಮದ್ ಸಿರಾಜ್

Updated on: Jun 22, 2025 | 10:51 PM

Mohammed Siraj's Expensive Spells: ಮೊಹಮ್ಮದ್ ಸಿರಾಜ್ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ 27 ಓವರ್‌ಗಳಲ್ಲಿ 122 ರನ್‌ಗಳನ್ನು ಬಿಟ್ಟುಕೊಟ್ಟರು. ಅವರು ಎರಡು ವಿಕೆಟ್‌ಗಳನ್ನು ಪಡೆದರೂ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಉತ್ತಮ ರನ್ ದರವನ್ನು ಕಾಯ್ದುಕೊಂಡರು. ಸಿರಾಜ್‌ರ ಕಳಪೆ ಪ್ರದರ್ಶನದಿಂದ ಬುಮ್ರಾ ಒತ್ತಡಕ್ಕೆ ಒಳಗಾದರು. ಪ್ರಸಿದ್ಧ್ ಕೃಷ್ಣ ಕೂಡ 20 ಓವರ್‌ಗಳಲ್ಲಿ 128 ರನ್‌ಗಳನ್ನು ಬಿಟ್ಟುಕೊಟ್ಟರು. ಸಿರಾಜ್‌ರ ಈ ಪ್ರದರ್ಶನ ಆಸ್ಟ್ರೇಲಿಯಾ ಪ್ರವಾಸದಲ್ಲೂ ಇದ್ದಂತೆಯೇ ಇತ್ತು.

1 / 5
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಅಂತ್ಯಗೊಂಡಿದ್ದು, ಭಾರತ 6 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದರೆ, ಇತ್ತ ಇಂಗ್ಲೆಂಡ್‌ನ ಇನ್ನಿಂಗ್ಸ್ 465 ರನ್‌ಗಳಿಗೆ ಕೊನೆಗೊಂಡಿದೆ.

2 / 5
ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಒಟ್ಟಿಗೆ 8 ವಿಕೆಟ್ ಪಡೆದರೆ, ಉಳಿದ ಎರಡು ವಿಕೆಟ್ ಸಿರಾಜ್ ಪಾಲಾದವು. ಇದರಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರೇ ಐದು ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಉರುಳಿಸಿದರು. ಮತ್ತೊಂದೆಡೆ, ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರು.

3 / 5
ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರಾದರೂ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ರನ್​ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್​ನಲ್ಲಿ 27 ಓವರ್‌ಗಳನ್ನು ಬೌಲ್ ಮಾಡಿ ಬರೋಬ್ಬರಿ 122 ರನ್‌ಗಳನ್ನು ಬಿಟ್ಟುಕೊಟ್ಟರು.

4 / 5
ವಿಶೇಷವೆಂದರೆ ಮೊಹಮ್ಮದ್ ಸಿರಾಜ್ 27 ಓವರ್‌ಗಳಲ್ಲಿ ಒಂದೇ ಒಂದು ನೋ-ರನ್ ಓವರ್ ಬೌಲ್ ಮಾಡಲಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವೂ ವಿಶೇಷವಾಗಿರಲಿಲ್ಲ. ಮೊಹಮ್ಮದ್ ಸಿರಾಜ್ ಇದುವರೆಗೆ 37 ಟೆಸ್ಟ್‌ಗಳಲ್ಲಿ 102 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

5 / 5
ಮೊಹಮ್ಮದ್ ಸಿರಾಜ್ ಅವರ ಕಳಪೆ ಬೌಲಿಂಗ್​ನಿಂದಾಗಿ ಬುಮ್ರಾ ಒತ್ತಡಕ್ಕೆ ಒಳಗಾಗಿದ್ದರು. ಮತ್ತೊಂದೆಡೆ, ಪ್ರಸಿದ್ಧ್ ಕೃಷ್ಣ ಕೂಡ ವಿಕೆಟ್ ಪಡೆದರೂ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ 20 ಓವರ್‌ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ 3 ವಿಕೆಟ್ ಪಡೆದರಾದರೂ 128 ರನ್‌ಗಳನ್ನು ಬಿಟ್ಟುಕೊಟ್ಟರು.