ಟೀಮ್ ಇಂಡಿಯಾಗೆ ಹೊಸ ಬೌಲಿಂಗ್ ಕೋಚ್ ನೇಮಕ

|

Updated on: Aug 15, 2024 | 8:55 AM

Gautam Gambhir: ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಸಿಬ್ಬಂದಿ ವರ್ಗಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಾರ್ಯ ನಿರ್ವಹಿಸಿದ್ದವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್ ತಂಡದ ಸಹಾಯಕ ಕೋಚ್​ಗಳಾದ ಅಭಿಷೇಕ್ ನಾಯರ್ ಹಾಗೂ ರಿಯಾನ್ ಟೆನ್ ದೋಸ್ಚೇಟ್ ಅವರನ್ನು ಆಯ್ಕೆ ಮಾಡಿಕೊಂಡಿದ್ದ ಗಂಭೀರ್, ಇದೀಗ ಮಾಜಿ ಕೆಕೆಆರ್ ಆಟಗಾರ ಮೋರ್ನೆ ಮೊರ್ಕೆಲ್ ಅವರನ್ನು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡಿದ್ದಾರೆ.

1 / 5
ಭಾರತ ತಂಡದ ನೂತನ ಬೌಲಿಂಗ್ ಕೋಚ್ ಆಗಿ ಸೌತ್ ಆಫ್ರಿಕಾದ ಮಾಜಿ ವೇಗಿ ಮೋರ್ನೆ ಮೊರ್ಕೆಲ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಐಪಿಎಲ್ ಮತ್ತು ಎಸ್‌ಎ20 ಮತ್ತು ಪಾಕಿಸ್ತಾನ್​ ತಂಡದ ಬೌಲಿಂಗ್ ಕೋಚ್ ಆಗಿ ಮೊರ್ಕೆಲ್ ಕಾರ್ಯ ನಿರ್ವಹಿಸಿದ್ದರು. ಇದೀಗ ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

2 / 5
ಅದರಂತೆ ಮುಂಬರುವ ಬಾಂಗ್ಲಾದೇಶ್ ವಿರುದ್ಧದ ಸರಣಿಯೊಂದಿಗೆ ಮೋರ್ನೆ ಮೊರ್ಕೆಲ್ ಟೀಮ್ ಇಂಡಿಯಾ ಪರ ಕಾರ್ಯ ನಿರ್ವಹಿಸಲಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಾಹಿರಾಜ್ ಬಹುತುಲೆ ಟೀಮ್ ಇಂಡಿಯಾದ ಹಂಗಾಮಿ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

3 / 5
ವಿಶೇಷ ಎಂದರೆ ಮೋರ್ನೆ ಮೊರ್ಕೆಲ್ ಈ ಹಿಂದೆ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಹಾಗೆಯೇ ಗಂಭೀರ್ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಗಂಭೀರ್ ನೇತೃತ್ವದ ಟೀಮ್ ಇಂಡಿಯಾಗೆ ಮೊರ್ಕೆಲ್ ಎಂಟ್ರಿ ಕೊಟ್ಟಿದ್ದಾರೆ.

4 / 5
ಮೋರ್ನೆ ಮೊರ್ಕೆಲ್ ಎಂಟ್ರಿಯೊಂದಿಗೆ ಟೀಮ್ ಇಂಡಿಯಾದ ಕೋಚಿಂಗ್ ಸಿಬ್ಬಂದಿಗಳ ನೇಮಕ ಪೂರ್ಣಗೊಂಡಂತಾಗಿದೆ. ಇಲ್ಲಿ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಂಡರೆ, ಸಹಾಯಕ ಕೋಚ್ ಆಗಿ ಅಭಿಷೇಕ್ ನಾಯರ್ ಹಾಗೂ ರಿಯಾನ್ ಟೆನ್ ದೋಸ್ಚೇಟ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಫೀಲ್ಡಿಂಗ್ ಕೋಚ್ ಆಗಿ ಟಿ ದಿಲೀಪ್ ಮುಂದುವರೆದಿದ್ದಾರೆ.

5 / 5
ಸೌತ್ ಆಫ್ರಿಕಾ ಪರ 86 ಟೆಸ್ಟ್ ಪಂದ್ಯಗಳನ್ನಾಡಿರುವ ಮೋರ್ನೆ ಮೊರ್ಕೆಲ್ ಒಟ್ಟು 309	ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ 117 ಏಕದಿನ ಪಂದ್ಯಗಳಿಂದ 188 ವಿಕೆಟ್ ಪಡೆದಿದ್ದಾರೆ. ಇನ್ನು 44 ಟಿ20 ಪಂದ್ಯಗಳನ್ನಾಡಿರುವ ಮೊರ್ಕೆಲ್ 47 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಮೂರು ಸ್ವರೂಪಗಳಲ್ಲೂ ಮಿಂಚಿರುವ ಸೌತ್ ಆಫ್ರಿಕಾ ವೇಗಿ ಇದೀಗ ಟೀಮ್ ಇಂಡಿಯಾ ಪರ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.