ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ತಂಡಕ್ಕೆ ಬೆನ್ ಸ್ಟೋಕ್ಸ್ ಎಂಟ್ರಿ

Ben Stokes: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಐಪಿಎಲ್​ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ ಒಟ್ಟು 45 ಪಂದ್ಯಗಳನ್ನಾಡಿರುವ ಸ್ಟೋಕ್ಸ್ 2 ಭರ್ಜರಿ ಶತಕ ಹಾಗೂ 2 ಅರ್ಧಶತಕಗಳೊಂದಿಗೆ 935 ರನ್ ಕಲೆಹಾಕಿದ್ದಾರೆ. ಹಾಗೆಯೇ 28 ವಿಕೆಟ್​ಗಳನ್ನು ಕಬಳಿಸಿದ್ದಾರೆ.

|

Updated on: Aug 15, 2024 | 11:03 AM

ಇಂಗ್ಲೆಂಡ್​ ತಂಡದ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಕೇಪ್ ಟೌನ್ ಪರ ಕಣಕ್ಕಿಳಿಯಲಿದ್ದಾರೆ. SA20 ಮೂರನೇ ಸೀಸನ್​ಗಾಗಿ ಎಂಐ ಕೇಪ್​ ಟೌನ್ ತನ್ನ ಬಳಗವನ್ನು ಘೋಷಿಸಿದ್ದು, ಈ ತಂಡದಲ್ಲಿ ಬೆನ್ ಸ್ಟೋಕ್ಸ್ ಕೂಡ ಕಾಣಿಸಿಕೊಂಡಿದ್ದಾರೆ.

1 / 5
ಐಪಿಎಲ್ 2024ರಿಂದ ಹೊರಗುಳಿದಿದ್ದ ಬೆನ್ ಸ್ಟೋಕ್ಸ್ ಇತ್ತೀಚೆಗಷ್ಟೇ ದಿ ಹಂಡ್ರೆಡ್ ಲೀಗ್ ಮೂಲಕ ಚುಟುಕು ಕ್ರಿಕೆಟ್​ಗೆ ಮರಳಿದ್ದರು. ಇದೀಗ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲೂ ಕಣಕ್ಕಿಳಿಯಲು ಇಚ್ಛಿಸಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್​ ಮೆಗಾ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಹೆಸರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

2 / 5
ಬೆನ್ ಸ್ಟೋಕ್ಸ್ ಐಪಿಎಲ್​ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದಾರೆ. 2023 ರಲ್ಲಿ ಸಿಎಸ್​ಕೆ ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ಟೋಕ್ಸ್ ಗಾಯದ ಕಾರಣ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಇನ್ನು ಐಪಿಎಲ್ 2024 ರಿಂದ ಹಿಂದೆ ಸರಿದಿದ್ದರು.

3 / 5
ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡದೊಂದಿಗೆ SA20 ಲೀಗ್​ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಬೆನ್ ಸ್ಟೋಕ್ಸ್ ಮುಂದಾಗಿದ್ದಾರೆ. ಹೀಗಾಗಿ ಐಪಿಎಲ್ ಸೀಸನ್-18 ಮೆಗಾ ಹರಾಜಿನಲ್ಲಿ ಸ್ಟೋಕ್ಸ್ ಹೆಸರನ್ನು ಎದುರು ನೋಡಬಹುದು. ಅಲ್ಲದೆ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಮಿಂಚಿದರೆ ಇಂಗ್ಲೆಂಡ್ ಆಲ್​ರೌಂಡರ್​ನ ಖರೀದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹೆಚ್ಚಿನ ಆಸಕ್ತಿ ತೋರುವುದರಲ್ಲಿ ಡೌಟೇ ಬೇಡ.

4 / 5
ಎಂಐ ಕೇಪ್​ ಟೌನ್ ತಂಡ: ಬೆನ್ ಸ್ಟೋಕ್ಸ್, ರಶೀದ್ ಖಾನ್, ಟ್ರೆಂಟ್ ಬೌಲ್ಟ್, ಅಝ್ಮತುಲ್ಲಾ ಒಮರ್​ಝೈ, ನುವಾನ್ ತುಷಾರ, ಕ್ರಿಸ್ ಬೆಂಜಮಿನ್, ಕಗಿಸೊ ರಬಾಡ, ಡೆವಾಲ್ಡ್ ಬ್ರೆವಿಸ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ರಿಯಾನ್ ರಿಕೆಲ್ಟನ್, ಜಾರ್ಜ್ ಲಿಂಡೆ, ಡೆಲಾನೊ ಪೊಟ್ಗೀಟರ್, ಥಾಮಸ್ ಕಬರ್ ಮತ್ತು ಕಾನರ್ ಎಸ್ಟರ್‌ಹುಯಿಜೆನ್.

5 / 5
Follow us