ಮೋರ್ನೆ ಮೊರ್ಕೆಲ್ ಎಂಟ್ರಿಯೊಂದಿಗೆ ಟೀಮ್ ಇಂಡಿಯಾದ ಕೋಚಿಂಗ್ ಸಿಬ್ಬಂದಿಗಳ ನೇಮಕ ಪೂರ್ಣಗೊಂಡಂತಾಗಿದೆ. ಇಲ್ಲಿ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಂಡರೆ, ಸಹಾಯಕ ಕೋಚ್ ಆಗಿ ಅಭಿಷೇಕ್ ನಾಯರ್ ಹಾಗೂ ರಿಯಾನ್ ಟೆನ್ ದೋಸ್ಚೇಟ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಫೀಲ್ಡಿಂಗ್ ಕೋಚ್ ಆಗಿ ಟಿ ದಿಲೀಪ್ ಮುಂದುವರೆದಿದ್ದಾರೆ.