ಐಪಿಎಲ್ ಇತಿಹಾಸದಲ್ಲಿ ಅಧಿಕ ಬಾರಿ ರಿಟೈನ್ ಆದ ಆಟಗಾರ ಯಾರು ಗೊತ್ತಾ?
Most Retained IPL Players: ಐಪಿಎಲ್ 2025 ರ ಹರಾಜು ಮುನ್ನ, ಅನೇಕ ಫ್ರಾಂಚೈಸಿಗಳು ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿವೆ. ಅದರಲ್ಲಿ ಅಧಿಕ ಬಾರಿ ರಿಟೈನ್ ಆದ ಆಟಗಾರರ ಪೈಕಿ ವಿರಾಟ್ ಕೊಹ್ಲಿ 17 ಬಾರಿ, ಎಂ.ಎಸ್. ಧೋನಿ 15 ಬಾರಿ, ರೋಹಿತ್ ಶರ್ಮಾ 14 ಬಾರಿ ಮತ್ತು ಸುನಿಲ್ ನರೈನ್ 13 ಬಾರಿ ರಿಟೈನ್ ಆಗಿದ್ದಾರೆ.
1 / 8
ಇತ್ತೀಚೆಗೆ, ಎಲ್ಲಾ ಫ್ರಾಂಚೈಸಿಗಳು ಐಪಿಎಲ್ 2025 ರ ಸಂಬಂಧಿತ ಧಾರಣ ಪಟ್ಟಿಯನ್ನು ಪ್ರಕಟಿಸಿದ್ದವು. ಅದರಲ್ಲಿ ಅನೇಕ ಸ್ಟಾರ್ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿವೆ. ಆದಾಗ್ಯೂ ಕೆಲವು ಹಿರಿಯ ಆಟಗಾರರು ತಂಡದಲ್ಲೇ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಅಧಿಕ ಬಾರಿ ರಿಟೈನ್ ಆದ ಆಟಗಾರರ ಪಟ್ಟಿ ಇಲ್ಲಿದೆ.
2 / 8
ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದಾಗಿನಿಂದಲೂ ಒಂದೇ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ ಕೊಹ್ಲಿ ಇದುವರೆಗೆ ಒಮ್ಮೆಯೂ ಹರಾಜಿಗೆ ಬಂದಿಲ್ಲ. ಅಂದರೆ ವಿರಾಟ್ ಕೊಹ್ಲಿಯನ್ನು ಇದುವರೆಗೆ ಬರೋಬ್ಬರಿ 17 ಬಾರಿ ಆರ್ಸಿಬಿ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿದೆ. ಮುಂಬರುವ ಐಪಿಎಲ್ನಲ್ಲೂ ಕೊಹ್ಲಿ ಆರ್ಸಿಬಿ ಪರ ಆಡಲಿದ್ದು, ಇದಕ್ಕಾಗಿ ಕೊಹ್ಲುಗೆ 21 ಕೋಟಿ ರೂ. ನೀಡಲಾಗಿದೆ.
3 / 8
ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಧೋನಿ ತಮ್ಮ ಐಪಿಎಲ್ ವೃತ್ತಿಜೀವನದ ಆರಂಭದಿಂದಲೂ ಚೆನ್ನೈ ತಂಡದಲ್ಲಿದ್ದಾರೆ. ಎರಡು ವರ್ಷ ಮಾತ್ರ ಸಿಎಸ್ಕೆ ತಂಡವನ್ನು ಬ್ಯಾನ್ ಮಾಡಿದ್ದ ಕಾರಣ ಅವರು ಪುಣೆ ವಾರಿಯರ್ಸ್ ತಂಡದ ಪರ ಆಡಿದ್ದನ್ನು ಬಿಟ್ಟರೆ, ಧೋನಿ ಕೂಡ 15 ಬಾರಿ ಸಿಎಸ್ಕೆ ತಂಡಕ್ಕೆ ರಿಟೈನ್ ಆಗಿದ್ದಾರೆ.
4 / 8
ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು 14 ಬಾರಿ ರಿಟೈನ್ ಮಾಡಿಕೊಳ್ಳಲಾಗಿದೆ. ಇದೀಗ ಐಪಿಎಲ್ 2025ರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು 16.3 ಕೋಟಿ ರೂ.ಗೆ ಉಳಿಸಿಕೊಂಡಿದೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
5 / 8
ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಸುನಿಲ್ ನರೈನ್ ಅವರನ್ನು 12 ಕೋಟಿ ರೂ.ಗೆ ಉಳಿಸಿಕೊಂಡಿದೆ. ಅಲ್ಲದೆ ನರೈನ್ ಭಾಗಶಃ ತಮ್ಮ ಐಪಿಎಲ್ ವೃತ್ತಿಜೀವನವನ್ನು ಕೆಕೆಆರ್ ತಂಡದಲ್ಲೇ ಕಳೆದಿದ್ದಾರೆ. ನರೈನ್ ಇದುವರೆಗೆ 13 ಬಾರಿ ಕೆಕೆಆರ್ ತಂಡಕ್ಕೆ ರಿಟೈನ್ ಆಗಿದ್ದಾರೆ.
6 / 8
ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ಸಹ ಮುಂಬೈ ಇಂಡಿಯನ್ಸ್ ಸತತ 12 ಸೀಸನ್ಗಳಲ್ಲಿ ರಿಟೈನ್ ಮಾಡಿಕೊಂಡಿತ್ತು. ಪೊಲಾರ್ಡ್ ತಮ್ಮ ಆಲ್‌ರೌಂಡ್ ಪ್ರದರ್ಶನದಿಂದಾಗಿ ಮುಂಬೈ ಫ್ರಾಂಚೈಸಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
7 / 8
ಐಪಿಎಲ್ 2025ರ ಹರಾಜಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಅವರನ್ನು ಮುಂಬೈ ಇಂಡಿಯನ್ಸ್ 18 ಕೋಟಿ ರೂ.ಗೆ ಉಳಿಸಿಕೊಂಡಿದೆ. ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿರುವ ಬುಮ್ರಾ ಕೂಡ ಮುಂಬೈ ತಂಡದ ಪರ ಸಾಕಷ್ಟು ವರ್ಷದಿಂದ ಆಡಿಕೊಂಡು ಬರುತ್ತಿದ್ದಾರೆ. ಬುಮ್ರಾ 12 ವರ್ಷಗಳಿಂದ ಮುಂಬೈ ತಂಡದಲ್ಲಿ ಆಡುತ್ತಿದ್ದು, ಫ್ರಾಂಚೈಸಿ ಅವರನ್ನು 12 ಬಾರಿ ರಿಟೈನ್ ಮಾಡಿದೆ.
8 / 8
ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 11 ಬಾರಿ ರಿಟೈನ್ ಮಾಡಿಕೊಂಡಿತ್ತು. ಆದರೂ ಅವರು ವೈಯಕ್ತಿಕ ಕಾರಣಗಳಿಂದ 2020 ರಲ್ಲಿ ರೈನಾ ಐಪಿಎಲ್ ಆಡಲಿಲ್ಲ. ಸುರೇಶ್ ರೈನಾ ಚೆನ್ನೈ (2010, 2011, 2018, ಮತ್ತು 2021) ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದಾರೆ .