IPL 2023: ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ್ದು ಯಾರು ಗೊತ್ತಾ?

Edited By:

Updated on: May 01, 2023 | 6:22 PM

IPL 2023 Kannada: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಂಪೈರ್​ನ ಕೆಟ್ಟ ತೀರ್ಪಿಗೆ ಬಲಿಯಾಗಿದ್ದರು. ಅಂದರೆ ಸಂದೀಪ್ ಶರ್ಮಾ ಎಸೆತದಲ್ಲಿ ಹಿಟ್​ಮ್ಯಾನ್ ಬೌಲ್ಡ್ ಆಗಿ ಹೊರನಡೆದಿದ್ದರು.

1 / 6
IPL Records: ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಐಪಿಎಲ್​ನಲ್ಲೂ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್​ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ರನ್​ ಮಳೆ ಹರಿಯುತ್ತಿದೆ. ಮತ್ತೊಂದೆಡೆ ಹಿಟ್​ಮ್ಯಾನ್ ಕೂಡ ಕೆಲ ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ.

2 / 6
ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕೆಟ್ಟ ತೀರ್ಪಿಗೆ ಬಲಿಯಾಗಿದ್ದರು. ಅಂದರೆ ಸಂದೀಪ್ ಶರ್ಮಾ ಎಸೆತದಲ್ಲಿ ಹಿಟ್​ಮ್ಯಾನ್ ಬೌಲ್ಡ್ ಆಗಿ ಹೊರನಡೆದಿದ್ದರು. ಆದರೆ ಆ ಬಳಿಕ ಪರಿಶೀಲಿಸಿದಾಗ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಗ್ಲೌಸ್ ತಾಗಿ ವಿಕೆಟ್ ಬೇಲ್ಸ್ ಬಿದ್ದಿರುವುದು ಸ್ಪಷ್ಟವಾಗಿತ್ತು.

3 / 6
ಇದಾಗ್ಯೂ ಈ ವಿಕೆಟ್ ಲೆಕ್ಕವು ಸಂದೀಪ್ ಶರ್ಮಾ ಪಾಲಿಗೆ ಸೇರಿದೆ. ಇದರೊಂದಿಗೆ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಎಂಬ ದಾಖಲೆ ಸಂದೀಪ್ ಶರ್ಮಾ ಪಾಲಾಗಿದೆ.

4 / 6
ಸಂದೀಪ್ ಶರ್ಮಾ ವಿರಾಟ್ ಕೊಹ್ಲಿಯನ್ನು ಐಪಿಎಲ್​ನಲ್ಲಿ 8 ಬಾರಿ ಔಟ್ ಮಾಡಿದ್ದಾರೆ. ಹಾಗೆಯೇ 4 ಬಾರಿ ರೋಹಿತ್ ಶರ್ಮಾರ ವಿಕೆಟ್ ಪಡೆದಿದ್ದಾರೆ. ಈ ಮೂಲಕ ಇಬ್ಬರು ದಿಗ್ಗಜರನ್ನು ಅತೀ ಹೆಚ್ಚು ಬಾರಿ  ಔಟ್ ಮಾಡಿದ ಕೀರ್ತಿ ಸಂದೀಪ್ ಶರ್ಮಾ ಪಾಲಾಗಿದೆ.

5 / 6
ಇದಕ್ಕೂ ಮುನ್ನ ಸುನಿಲ್ ನರೈನ್ ರೋಹಿತ್ ಶರ್ಮಾರನ್ನು 7 ಬಾರಿ ಔಟ್ ಮಾಡಿದ್ದರು. ಹಾಗೆಯೇ ವಿರಾಟ್ ಕೊಹ್ಲಿಯ ವಿಕೆಟ್​ ಅನ್ನು 4 ಬಾರಿ ಪಡೆದಿದ್ದರು. ಇದೀಗ ಸುನಿಲ್ ನರೈನ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

6 / 6
ಇನ್ನು ಮೂರನೇ ಸ್ಥಾನದಲ್ಲಿರುವುದು ಅಮಿತ್ ಮಿಶ್ರಾ. ರೋಹಿತ್ ಶರ್ಮಾರನ್ನು 7 ಬಾರಿ ಹಾಗೂ ವಿರಾಟ್ ಕೊಹ್ಲಿಯನ್ನು 3 ಬಾರಿ ಔಟ್ ಮಾಡುವ ಮೂಲಕ ಅಮಿತ್ ಮಿಶ್ರಾ ಇಬ್ಬರು ದಿಗ್ಗಜರ ವಿಕೆಟ್ ಪಡೆದ ಪಟ್ಟಿಯಲ್ಲಿ ತೃತೀಯ ಸ್ಥಾನ ಅಲಂಕರಿಸಿದ್ದಾರೆ.