IPL 2023: ಕೇವಲ 8 ಬೌಂಡರಿಗಳು: RCB ತಂಡದ ಕಳಪೆ ಬ್ಯಾಟಿಂಗ್

IPL 2023 Kannada: ಪವರ್​ಪ್ಲೇ ಬಳಿಕ ಕೂಡ ನಿಧಾನಗತಿಯಲ್ಲೇ ರನ್​ ಕಲೆಹಾಕಿದರು. ಅಲ್ಲದೆ 50 ರನ್​ಗಳಿಸಲು ಬರೋಬ್ಬರಿ 44 ಎಸೆತಗಳನ್ನು ತೆಗೆದುಕೊಂಡಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on: May 01, 2023 | 9:42 PM

IPL 2023: ಐಪಿಎಲ್​ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ ಆರ್​ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು.

1 / 11
ಅದರಂತೆ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 6 ಓವರ್​ಗಳಲ್ಲಿ ಆರ್​ಸಿಬಿ ಕಲೆಹಾಕಿದ್ದು ಕೇವಲ 42 ರನ್​ಗಳು ಮಾತ್ರ.

2 / 11
ಅದರಲ್ಲೂ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಬೇಕಿದ್ದ ಪವರ್​ಪ್ಲೇನಲ್ಲಿ ಆರ್​ಸಿಬಿ ಆರಂಭಿಕರಿಂದ ಮೂಡಿಬಂದಿದ್ದು 3 ಫೋರ್ ಹಾಗೂ 1 ಸಿಕ್ಸ್ ಮಾತ್ರ. ಇಲ್ಲಿ ವಿರಾಟ್ ಕೊಹ್ಲಿ 2 ಫೋರ್ ಬಾರಿಸಿದರೆ, ಡುಪ್ಲೆಸಿಸ್ 1 ಸಿಕ್ಸ್ ಹಾಗೂ 1 ಫೋರ್ ಮಾತ್ರ ಬಾರಿಸಿದ್ದರು.

3 / 11
ಪವರ್​ಪ್ಲೇ ಬಳಿಕ ಕೂಡ ನಿಧಾನಗತಿಯಲ್ಲೇ ರನ್​ ಕಲೆಹಾಕಿದರು. ಅಲ್ಲದೆ 50 ರನ್​ಗಳಿಸಲು ಬರೋಬ್ಬರಿ 44 ಎಸೆತಗಳನ್ನು ತೆಗೆದುಕೊಂಡಿದ್ದರು. ಇನ್ನು 9ನೇ ಓವರ್​ನ 6ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ರವಿ ಬಿಷ್ಣೋಯ್ ಎಸೆತದಲ್ಲಿ ಸ್ಟಂಪ್ ಔಟಾದರು.

4 / 11
ಆದರೆ ಅದಾಗಲೇ 30 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕಲೆಹಾಕಿದ್ದು ಮಾತ್ರ 31 ರನ್​ಗಳು. ಇನ್ನು ಮೊದಲ 10 ಓವರ್​ಗಳಲ್ಲಿ ಆರ್​ಸಿಬಿ ಬ್ಯಾಟರ್​ಗಳು ಗಳಿಸಿದ್ದು ಕೇವಲ 65 ರನ್​ಗಳು ಮಾತ್ರ. ಅಂದರೆ ಪ್ರತಿ ಓವರ್​​ಗೆ 6.5 ರ ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದರು.

5 / 11
ವಿರಾಟ್ ಕೊಹ್ಲಿಯ ನಿರ್ಗಮನದ ಬಳಿಕ ಕ್ರೀಸ್​ಗೆ ಆಗಮಿಸಿದ ಅನೂಜ್ ರಾವತ್ 11 ಎಸೆತಗಳಲ್ಲಿ 9 ರನ್​ಗಳಿಸಿ ಕೃಷ್ಣಪ್ಪ ಗೌತಮ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇಲ್ಲಿ ಮತ್ತೊಂದು ಅಚ್ಚರಿ ಎಂದರೆ 8ನೇ ಓವರ್​ ಬಳಿಕ ಆರ್​ಸಿಬಿ 15ನೇ ಓವರ್​ವರೆಗೆ ಒಂದೇ ಒಂದು ಬೌಂಡರಿ ಬಾರಿಸಿಲ್ಲ ಎಂಬುದು.

6 / 11
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ (4) ರವಿ ಬಿಷ್ಣೋಯ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಹಾಗೆಯೇ ಸುಯಶ್ ಪ್ರಭುದೇಸಾಯಿ 7 ಎಸೆತಗಳಲ್ಲಿ 6 ರನ್​ಗಳಿಸಿ ಕ್ಯಾಚ್ ನೀಡಿ ಬಂದ ವೇಗದಲ್ಲೇ ಹಿಂತಿರುಗಿದರು. 15 ಓವರ್​ ಮುಕ್ತಾಯದ ವೇಳೆಗೆ ಆರ್​ಸಿಬಿ ಕಲೆಹಾಕಿದ್ದು  4 ವಿಕೆಟ್ ನಷ್ಟಕ್ಕೆ ಕೇವಲ 92 ರನ್​ಗಳು. ಅಂದರೆ 90 ಎಸೆತಗಳಲ್ಲಿ 92 ರನ್​ ಅಷ್ಟೇ.

7 / 11
ಅಲ್ಲದೆ 17ನೇ ಓವರ್​ನಲ್ಲಿ ಆರ್​ಸಿಬಿ ನೂರು ರನ್ ಪೂರೈಸಿತು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಫಾಫ್ ಡುಪ್ಲೆಸಿಸ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಆದರೆ ಫಾಫ್ 44 ರನ್​ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.

8 / 11
ಇದರ ಬೆನ್ನಲ್ಲೇ 4 ಎಸೆತಗಳಲ್ಲಿ 3 ರನ್​ಗಳಿಸಿ ಮಹಿಪಾಲ್ ಲೋಮ್ರರ್ ನವೀನ್ ಉಲ್ ಹಕ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇನ್ನು 19ನೇ ಓವರ್​ನ 4ನೇ ಎಸೆತದಲ್ಲಿ ಬೌಲರ್ ಯಶ್ ಠಾಕೂರ್​ ದಿನೇಶ್ ಕಾರ್ತಿಕ್ (16) ಅವರನ್ನು ರನೌಟ್ ಮಾಡಿದರು. ಹಾಗೆಯೇ 20ನೇ ಓವರ್​ನ 2ನೇ ಎಸೆತದಲ್ಲಿ ಕರ್ಣ್ ಶರ್ಮಾ (2) ಹಾಗೂ ಇದರ ಬೆನ್ನಲ್ಲೇ ಸಿರಾಜ್ (0) ನವೀನ್ ಉಲ್ ಹಕ್​ಗೆ ವಿಕೆಟ್​ ಒಪ್ಪಿಸಿದರು.

9 / 11
ಅಂತಿಮವಾಗಿ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್​ಗಳಿಸಲಷ್ಟೇ ಶಕ್ತರಾದರು.

10 / 11
ಅಂದಹಾಗೆ ಈ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಬಾರಿಸಿದ್ದು ಕೇವಲ 8 ಬೌಂಡರಿಗಳು ಮಾತ್ರ. ಇದರಲ್ಲಿ 6 ಫೋರ್​ಗಳು ಹಾಗೂ ಫಾಫ್ ಮತ್ತು ಡಿಕೆ ಬ್ಯಾಟ್​ನಿಂದ ಮೂಡಿಬಂದ 2 ಸಿಕ್ಸ್​ಗಳು ಸೇರಿವೆ.

11 / 11
Follow us
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​

ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ

ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ

ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ

ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು

ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್

ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್

ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ

ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ