IPL 2023: RCB ತಂಡದಿಂದ ಡೇವಿಡ್ ವಿಲ್ಲಿ ಹೊರ ನಡೆದಿದ್ದೇಕೆ? ಇಲ್ಲಿದೆ ಮಾಹಿತಿ
IPL 2023 Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್.
Updated on: May 02, 2023 | 9:22 PM

IPL 2023: ಐಪಿಎಲ್ನ ಮೊದಲಾರ್ಧದಲ್ಲಿ ಆರ್ಸಿಬಿ ತಂಡದ ರಜತ್ ಪಾಟಿದಾರ್, ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ ಗಾಯದ ಕಾರಣ ಹೊರಗುಳಿದಿದ್ದರು. ಮತ್ತೊಂದೆಡೆ ಗಾಯದ ಹಿನ್ನೆಲೆ ಜೋಶ್ ಹ್ಯಾಝಲ್ವುಡ್ ಮೊದಲ ಸುತ್ತಿನಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ದ್ವಿತಿಯಾರ್ಧದ ಆರಂಭದ ಬೆನ್ನಲ್ಲೇ ಡೇವಿಡ್ ವಿಲ್ಲಿ ಕೂಡ ಐಪಿಎಲ್ನಿಂದ ಹೊರ ನಡೆದಿದ್ದಾರೆ.

ಆರ್ಸಿಬಿ ತಂಡದ ಪ್ರಮುಖ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದ ವಿಲ್ ಜಾಕ್ಸ್ ಈ ಬಾರಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆಡಿದ 4 ಪಂದ್ಯಗಳಲ್ಲಿ ಒಟ್ಟು 15 ಓವರ್ ಬೌಲ್ ಮಾಡಿದ್ದ ವಿಲ್ಲಿ ನೀಡಿದ್ದು ಕೇವಲ 105 ರನ್ ಮಾತ್ರ. ಅಲ್ಲದೆ ಈ ವೇಳೆ 3 ವಿಕೆಟ್ ಕೂಡ ಕಬಳಿಸಿದ್ದರು. ಆದರೆ ಬ್ಯಾಟಿಂಗ್ನಲ್ಲಿ 3 ಇನಿಂಗ್ಸ್ನಲ್ಲಿ ಒಟ್ಟು 35 ರನ್ಗಳಿಸಿ ನಿರಾಸೆ ಮೂಡಿಸಿದ್ದರು.

ಇದಾಗ್ಯೂ ಡೇವಿಡ್ ವಿಲ್ಲಿ ಅವರ ಉಪಸ್ಥಿತಿಯು ಆರ್ಸಿಬಿ ಬೌಲಿಂಗ್ ಲೈನಪ್ಗೆ ಅಗತ್ಯವಾಗಿತ್ತು. ಆದರೀಗ ಗಾಯದ ಕಾರಣ ಇಂಗ್ಲೆಂಡ್ ಆಟಗಾರ ತವರಿಗೆ ಮರಳಲಿದ್ದಾರೆ ಎಂಬುದನ್ನು ಆರ್ಸಿಬಿ ಫ್ರಾಂಚೈಸ್ ಖಚಿತಪಡಿಸಿದೆ.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರ ಎಸೆದ ಬೌನ್ಸರ್ ಎಸೆತವನ್ನು ಆಡುವಾಗ ಡೇವಿಡ್ ವಿಲ್ಲಿ ಅವರ ಬೆರಳಿಗೆ ಗಾಯವಾಗಿತ್ತು. ಈ ಗಾಯವು ಗಂಭೀರವಾಗಿರುವ ಕಾರಣ ಡೇವಿಡ್ ವಿಲ್ಲಿ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ ಆರ್ಸಿಬಿ ತಂಡದ ಮುಂದಿನ ಪಂದ್ಯಗಳಿಗೆ ಡೇವಿಡ್ ವಿಲ್ಲಿ ಅಲಭ್ಯರಾಗಲಿದ್ದಾರೆ. ಇತ್ತ ವಿಲ್ಲಿಯ ಅನುಪಸ್ಥಿತಿಯಲ್ಲಿ ಆರ್ಸಿಬಿ ಬೌಲಿಂಗ್ ವಿಭಾಗವನ್ನು ಜೋಶ್ ಹ್ಯಾಝಲ್ವುಡ್ ಮುನ್ನಡೆಸಲ್ಲಿದ್ದಾರೆ.

ಹಾಗೆಯೇ ಇದೀಗ ಡೇವಿಡ್ ವಿಲ್ಲಿಯ ಬದಲಿಗೆ ಆರ್ಸಿಬಿ ಫ್ರಾಂಚೈಸಿಯು 38 ವರ್ಷದ ಕೇದಾರ್ ಜಾಧವ್ ಅವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್, ಕೇದಾರ್ ಜಾಧವ್.



















