Highest Earners in IPL: ಧೋನಿಯಿಂದ ರೋಹಿತ್ವರೆಗೆ; ಐಪಿಎಲ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರರಿವರು
Highest Earners in IPL: ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಗಳಿಸಿದ ಆಟಗಾರರಾಗಿದ್ದಾರೆ. ಇವರೊಂದಿಗೆ ಇನ್ನು ಕೆಲವು ಭಾರತೀಯ ಆಟಗಾರರು ಸೇರಿದ್ದಾರೆ.
1 / 5
ಭಾರತ ಮತ್ತು ಚೆನ್ನೈ ತಂಡದ ಮಾಜಿ ನಾಯಕ ಎಂಎಸ್ ಧೋನಿ 2008 ರಲ್ಲಿ ಲೀಗ್ ಆರಂಭವಾದಾಗಿನಿಂದ ಅದೃಷ್ಟವನ್ನು ಗಳಿಸಿದ್ದಾರೆ. ಧೋನಿ ಮೊದಲಿನಿಂದಲೂ ಈ ಲೀಗ್‌ನಲ್ಲಿ ಆಡುತ್ತಿದ್ದು ಆರಂಭದಿಂದಲೂ CSK ಪರ ಆಡುತ್ತಿದ್ದಾರೆ. ಕಳ್ಳಾಟದ ಆರೋಪದಡಿ ಚೆನ್ನೈ ತಂಡವನ್ನು ಎರಡು ವರ್ಷಗಳ ಕಾಲ ನಿಷೇಧಿಸಿದ ನಂತರ, ಧೋನಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಆಡಿದ್ದರು. ಆದಾಗ್ಯೂ, ಈ ಬದಲಾವಣೆಯು ಧೋನಿಯ ಆದಾಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. 2008ರಿಂದ ಐಪಿಎಲ್‌ನಲ್ಲಿ 164 ಕೋಟಿ ಗಳಿಸಿದ್ದಾರೆ.
2 / 5
ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನವನ್ನು ಡೆಕ್ಕನ್ ಚಾರ್ಜರ್ಸ್‌ನಲ್ಲಿ ರೂ. 9 ಕೋಟಿಯಿಂದ ಆರಂಭಿಸಿದರು. ನಂತರ ಮುಂಬೈ ಇಂಡಿಯನ್ಸ್ ಗೆ 9.2 ಕೋಟಿ ರೂ.ಗೆ ಬಿಕರಿಯಾದರು. ಪ್ರಸ್ತುತ ಅವರು ತಮ್ಮ ಸೇವೆಗಾಗಿ ಮುಂಬೈನಿಂದ 16 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ರೋಹಿತ್ ಐಪಿಎಲ್ನಿಂದ ಸುಮಾರು ರೂ. 162.6 ಕೋಟಿ ಗಳಿಸಿದ್ದಾರೆ.
3 / 5
ಕೊಹ್ಲಿ 2008 ರಲ್ಲಿ RCB ಗೆ ಸೇರಿದರು. ಅದೇ ವರ್ಷ U19 ವಿಶ್ವಕಪ್ನಲ್ಲಿ ಭಾರತ ಅವರ ನಾಯಕತ್ವದಲ್ಲಿ ವಿಜಯಶಾಲಿಯಾಯಿತು. 12 ಲಕ್ಷದೊಂದಿಗೆ ಬೆಂಗಳೂರು ತಂಡ ಸೇರಿಕೊಂಡ ಕೊಹ್ಲಿ 2019ರ ನಂತರ ರೂ. 8.2 ಕೋಟಿ ಪಡೆದಿದ್ದಾರೆ. ಇದು ಸ್ಥಿರವಾಗಿ ಬೆಳೆಯುತ್ತಲೇ ಇದೆ. ಸದ್ಯ ಕೊಹ್ಲಿ ರೂ. 15 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇದುವರೆಗಿನ ಕೊಹ್ಲಿ ಒಟ್ಟು ಗಳಿಕೆ 158.2 ಕೋಟಿ ರೂ.
4 / 5
2013 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾದ ನಂತರ ಅವರ ಗಳಿಕೆಯು ಗಗನಕ್ಕೇರಿದೆ. ಅವರು ಪ್ರಸ್ತುತ ಹೊಸ ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಮುನ್ನಡೆಸುತ್ತಿದ್ದಾರೆ. 2013ರಲ್ಲಿ ರೂ. 10 ಲಕ್ಷ ಪಡೆದ ಕೆ.ಎಲ್. 2022 ರಲ್ಲಿ LSG ಪರ ಆಡಲು ರೂ. 17 ಕೋಟಿ. ಸಂಬಳ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ರಾಹುಲ್ ಅವರು ಐಪಿಎಲ್‌ನಲ್ಲಿ ಒಟ್ಟು 65.1 ಕೋಟಿ ರೂ.ಆದಾಯ ಗಳಿಸಿದ್ದಾರೆ.
5 / 5
ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಸೂಪರ್ ಸ್ಟಾರ್ ಹಾರ್ದಿಕ್ ಪಾಂಡ್ಯ ಈ ವರ್ಷವಷ್ಟೇ ಹೊಸ ಐಪಿಎಲ್ ತಂಡವನ್ನು ಸೇರಿಕೊಂಡಿದ್ದಾರೆ. ಹಾರ್ದಿಕ್ ಆರಂಭದಲ್ಲಿ ರೂ. 10 ಲಕ್ಷ ಸಂಭಾವನೆ ಪಡೆಯುತ್ತಿದ್ದರು. ನಂತರ ಮುಂದಿನ ನಾಲ್ಕು ಸೀಸನ್‌ಗಳಿಗೆ ಅವರಿಗೆ ರೂ. 11 ಕೋಟಿ ಸಂಬಳ ನೀಡಲಾಯಿತು. ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ಗೆ ರೂ. 15 ಕೋಟಿ ಸಂಭಾವನೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಪಾಂಡ್ಯ ಸುಮಾರು 59.3 ಕೋಟಿ ರೂ. ಗಳಿಸಿದ್ದಾರೆ.
Published On - 4:46 pm, Thu, 21 April 22