Virat Kohli: ತನ್ನನ್ನು ಅರ್ಥ ಮಾಡಿಕೊಂಡ ಏಕೈಕ ಕ್ರಿಕೆಟಿಗನನ್ನು ಹೆಸರಿಸಿದ ವಿರಾಟ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Feb 25, 2023 | 10:09 PM

MS Dhoni - Virat Kohli: ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿರುವ ಕೊಹ್ಲಿ, ಹಲವು ಪಂದ್ಯಗಳಲ್ಲಿ ನಾನು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. 2017 ರಲ್ಲಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡಿದೆ. 2019 ರ ವಿಶ್ವಕಪ್​ ಸೆಮಿಫೈನಲ್ ತಲುಪಿದೆ.

1 / 7
ಆರ್​ಸಿಬಿ ತಂಡದ ಪಾಡ್​ಕಾಸ್ಟ್​ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದರಲ್ಲೂ ತನ್ನನ್ನು ವಿಫಲ ನಾಯಕ ಎಂದು ಪರಿಗಣಿಸುತ್ತಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಬೇಸರದ ಮಾತುಗಳ ನಡುವೆ ಸದಾ ತನ್ನ ಬೆಂಬಲಕ್ಕೆ ನಿಂತವರನ್ನು ಕೂಡ ಕೊಹ್ಲಿ ಸ್ಮರಿಸಿದ್ದಾರೆ.

2 / 7
ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿರುವ ಕೊಹ್ಲಿ, ಹಲವು ಪಂದ್ಯಗಳಲ್ಲಿ ನಾನು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. 2017 ರಲ್ಲಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡಿದೆ. 2019 ರ ವಿಶ್ವಕಪ್​ ಸೆಮಿಫೈನಲ್ ತಲುಪಿದೆ. 2021ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲೂ ಫೈನಲ್ ಆಡಿದೆ. ಇದಾಗ್ಯೂ ನನ್ನನ್ನು ವಿಫಲ ನಾಯಕ ಎಂದು ಬಿಂಬಿಸಲಾಗುತ್ತಿದೆ ಎಂದು ಕೊಹ್ಲಿ ಬೇಸರಿಸಿಕೊಂಡರು.

3 / 7
ಇದೇ ವೇಳೆ ತನ್ನ ಬೆಂಬಲ ನಿಂತವರನ್ನು ಸ್ಮರಿಸಿದ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಹಾಗೂ ಬಾಲ್ಯದ ಕೋಚ್ ಹೊರತುಪಡಿಸಿದರೆ, ನನ್ನ ಬೆಂಬಲಕ್ಕೆ ಸದಾ ಇದ್ದವರು ಮಹೇಂದ್ರ ಸಿಂಗ್ ಧೋನಿ ಎಂದರು.

4 / 7
2008 ರಿಂದ 2019 ರ ನಡುವೆ 11 ವರ್ಷಗಳ ಕಾಲ ಧೋನಿಯೊಂದಿಗೆ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಧೋನಿಯನ್ನು  ಎಂದೆಂದಿಗೂ ನನ್ನ ನೆಚ್ಚಿನ ನಾಯಕ ಎಂದು ಕೊಹ್ಲಿ ಪರಿಗಣಿಸುತ್ತಾರೆ.

5 / 7
ಇದೀಗ ನೆಚ್ಚಿನ ನಾಯಕನ ಜೊತೆಗಿನ ಮತ್ತೊಂದು ಆಸಕ್ತಿದಾಯಕ ವಿಷಯವನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ. ಸಾಮಾನ್ಯವಾಗಿ ಧೋನಿ ಯಾರ ಸಂಪರ್ಕಕ್ಕೂ ಸಿಗುವುದಿಲ್ಲ. ಅವರಿಗೆ 100 ಬಾರಿ ಕರೆ ಮಾಡಿದರೆ ಅದರಲ್ಲಿ 99 ಬಾರಿ ಕಾಲ್ ಪಿಕ್ ಮಾಡುವುದಿಲ್ಲ. ಏಕೆಂದರೆ  ಅವರು ಮೊಬೈಲ್ ಬಗ್ಗೆ ಗಮನಹರಿಸುವುದು ತುಂಬಾ ಕಡಿಮೆ.

6 / 7
ಅಂತಹದರಲ್ಲಿ ನನ್ನ ಕಷ್ಟಕಾಲದಲ್ಲಿ ಅವರೇ ನನಗೆ ಕರೆ ಮಾಡಿ ಎರಡು ಮೂರು ಬಾರಿ ಮಾತನಾಡಿದ್ದಾರೆ. ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ. ಅವರು ಮಾತುಗಳು ನನ್ನಲ್ಲಿ ಆತ್ಮವಿಶ್ವಾಸ, ಮಾಸಿಕ ಸದೃಢತೆಯನ್ನು ಉಂಟು ಮಾಡಿದೆ. ಇದೇ ಕಾರಣದಿಂದ ಧೋನಿ ನನಗೆ ಮಾರ್ಗದರ್ಶಕರಂತೆ ಕಾಣುತ್ತಾರೆ ಎಂದು ವಿರಾಟ್ ಕೊಹ್ಲಿ ತಿಳಿಸಿದರು.

7 / 7
ಈ ಪಾಡ್​ಕಾಸ್ಟ್​ ಕಾರ್ಯಕ್ರಮದ ಮೂಲಕ ತನ್ನ ನೆಚ್ಚಿನ ನಾಯಕ ಕಷ್ಟದ ಸಮಯದಲ್ಲೂ ಜೊತೆಗಿದ್ದರು ಎಂದು ಮಹೇಂದ್ರ ಸಿಂಗ್ ಧೋನಿಯನ್ನು ವಿರಾಟ್ ಕೊಹ್ಲಿ ಸ್ಮರಿಸಿರುವುದು ವಿಶೇಷ.