PBKS vs MI: ಐಪಿಎಲ್ನಲ್ಲಿ ಇತಿಹಾಸ ರಚಿಸಿದ ಮುಂಬೈ ಇಂಡಿಯನ್ಸ್: ಈವರೆಗೆ ಯಾವ ತಂಡ ಕೂಡ ಮಾಡಿಲ್ಲ ಈ ಸಾಧನೆ
Mumbai Indians, IPL 2023: ಐಪಿಎಲ್ 2023 ರಲ್ಲಿ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಉಭಯ ತಂಡಗಳ ಮೊತ್ತ 200 ರ ಗಡಿ ದಾಟಿದ್ದವು. ಇದರಲ್ಲಿ ರೋಹಿತ್ ಶರ್ಮಾ ಪಡೆ ಟಾರ್ಗೆಟ್ ಬೆನ್ನಟ್ಟಿ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
1 / 8
ಐಪಿಎಲ್ನಲ್ಲಿ 200+ ರನ್ಗಳ ಟಾರ್ಗೆಟ್ ನೀಡಿದರೂ ಅದು ಸೇಫ್ ಅಲ್ಲ ಎಂಬುದಕ್ಕೆ ಈ ಬಾರಿಯ ಟೂರ್ನಿ ಉತ್ತಮ ಉದಾಹರಣೆ ಆಗಿದೆ. ಅನೇಕ ತಂಡಗಳು 200 ಕ್ಕೂ ಅಧಿಕ ರನ್ಗಳ ಗುರಿ ನೀಡಿದ್ದರೂ ಟಾರ್ಗೆಟ್ ಬೆನ್ನಟ್ಟುವ ತಂಡ ಸುಲಭವಾಗಿ ಜಯ ಸಾಧಿಸುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಪಂಜಾಬ್ ಹಾಗೂ ಮುಂಬೈ ಪಂದ್ಯ.
2 / 8
ಐಪಿಎಲ್ 2023 ರಲ್ಲಿ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಉಭಯ ತಂಡಗಳ ಮೊತ್ತ 200 ರ ಗಡಿ ದಾಟಿದ್ದವು. ಇದರಲ್ಲಿ ರೋಹಿತ್ ಶರ್ಮಾ ಪಡೆ ಟಾರ್ಗೆಟ್ ಬೆನ್ನಟ್ಟಿ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
3 / 8
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 42 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 82 ರನ್ ಚಚ್ಚಿದರು.
4 / 8
ಜಿತೇಶ್ ಶರ್ಮಾ 27ಎಸೆತಗಳಲ್ಲಿ ಅಜೇಯ 49, ಶಿಖರ್ ಧವನ್ 30 ಹಾಗೂ ಮ್ಯಾಥ್ಯೂ ಶಾರ್ಟ್ 27 ರನ್ ಗಳಿಸಿದರು. ಪಂಜಾಬ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಮುಂಬೈ ಪರ ಪಿಯುಷ್ ಚಾವ್ಲಾ 2 ವಿಕೆಟ್ ಪಡೆದರು.
5 / 8
ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರೆ ಕ್ಯಾಮ್ರೋನ್ ಗ್ರೀನ್ 23 ರನ್ಗೆ ಔಟಾದರು. ಆದರೆ, ನಂತರ ಜೊತೆಯಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆದರು.
6 / 8
ಕಿಶನ್ 41 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ನೊಂದಿಗೆ 75 ರನ್ ಹಾಗೂ ಯಾದವ್ 31 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ ಸಿಡಿಸಿ 66 ರನ್ ಚಚ್ಚಿ ಗೆಲುವಿನ ಆಸೆ ಚಿಗುರಿಸಿದರು.
7 / 8
ಅಂತಿಮ ಹಂತದಲ್ಲಿ ತಿಲಕ್ ವರ್ಮಾ 10 ಎಸೆತಗಳಲ್ಲಿ 26 ರನ್ ಸಿಡಿಸಿ ಹಾಗೂ ಟಿಮ್ ಡೇವಿಡ್ 10 ಎಸೆತಗಳಲ್ಲಿ 19 ರನ್ ಬಾರಿಸಿ 18.5 ಓವರ್ಗಳಲ್ಲೇ 216 ರನ್ ಗಳಿಸಿ ಗೆಲುವು ಸಾಧಿಸುವಂತೆ ಮಾಡಿದರು.
8 / 8
ಈ ಮೂಲಕ ಮುಂಬೈ ವಿಶೇಷ ಸಾಧನೆ ಗೈದಿದೆ. ಮೊಹಾಲಿ ಕ್ರೀಡಾಂಗಣದಲ್ಲಿ 200+ ರನ್ ಟಾರ್ಗೆಟ್ ಬೆನ್ನಟ್ಟಿ ಗೆದ್ದ ಮೊದಲ ತಂಡ ಮುಂಬೈ ಇಂಡಿಯನ್ಸ್ ಆಗಿದೆ. ಅಲ್ಲದೆ ಐಪಿಎಲ್ನಲ್ಲಿ ಸತತವಾಗಿ ಎರಡು ಬಾರಿ 200+ ಗುರಿ ಬೆನ್ನಟ್ಟಿ ಗೆದ್ದ ತಂಡ ಮುಂಬೈ ಆಗಿದೆ.