34085 ಎಸೆತಗಳಲ್ಲಿ ಹೊಸ ಮೈಲುಗಲ್ಲು ದಾಟಿದ ನಾಥನ್ ಲಿಯಾನ್

Updated on: Feb 09, 2025 | 9:04 AM

Nathan Lyon Record: ಟೆಸ್ಟ್​ ಕ್ರಿಕೆಟ್​ನಲ್ಲಿ ಈವರೆಗೆ 253 ಇನಿಂಗ್ಸ್ ಆಡಿರುವ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ 34085* ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 24 ಬಾರಿ 5 ವಿಕೆಟ್ ಪಡೆದರೆ, 25 ಬಾರಿ 4 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಒಟ್ಟು 552* ವಿಕೆಟ್ ಉರುಳಿಸಿ ಟೆಸ್ಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಏಳನೇ ಬೌಲರ್ ಎನಿಸಿಕೊಂಡಿದ್ದಾರೆ.

1 / 5
ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ 6* ವಿಕೆಟ್ ಕಬಳಿಸಿದ್ದಾರೆ. ಗಾಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಜರುಗುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್ ಪಡೆದಿದ್ದ ಲಿಯಾನ್ ಇದೀಗ ದ್ವಿತೀಯ ಇನಿಂಗ್ಸ್​ನಲ್ಲೂ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

2 / 5
ಈ ಆರು ವಿಕೆಟ್​ಗಳೊಂದಿಗೆ ಲಿಯಾನ್ ಟೆಸ್ಟ್​ ಕ್ರಿಕೆಟ್​ನಲ್ಲಿ 550 ವಿಕೆಟ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಹಾಗೂ ವಿಶ್ವದ 7ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಪರ ಇದಕ್ಕೂ ಮುನ್ನ ಶೇನ್ ವಾರ್ನ್ ಹಾಗೂ ಗ್ಲೆನ್ ಮೆಕ್​ಗ್ರಾಥ್ ಮಾತ್ರ ಈ ಸಾಧನೆ ಮಾಡಿದ್ದರು.

3 / 5
ವಿಶೇಷ ಎಂದರೆ ನಾಥನ್ ಲಿಯಾನ್ ತಮ್ಮ ಟೆಸ್ಟ್ ಕೆರಿಯರ್​ನ ಮೊದಲ ವಿಕೆಟ್​ ಅನ್ನು ಶ್ರೀಲಂಕಾದ ಗಾಲೆ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲೇ ಪಡೆದಿದ್ದರು. ಇದೀಗ ಇದೇ ಮೈದಾನದಲ್ಲಿ 550ನೇ ವಿಕೆಟ್​ ಕಬಳಿಸಿ ವಿಶೇಷ ಮೈಲುಗಲ್ಲನ್ನು ದಾಟಿದ್ದಾರೆ. ಈ ಮೂಲಕ ಟೆಸ್ಟ್​ನಲ್ಲಿ 550+ ವಿಕೆಟ್ ಪಡೆದ ವಿಶ್ವದ 4ನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

4 / 5
ಈವರೆಗೆ 136* ಟೆಸ್ಟ್ ಪಂದ್ಯಗಳನ್ನಾಡಿರುವ ನಾಥನ್ ಲಿಯಾನ್ 253 ಇನಿಂಗ್ಸ್​ಗಳಲ್ಲಿ 5680.5 ಓವರ್​ಗಳನ್ನು ಎಸೆದಿದ್ದಾರೆ. ಈ ವೇಳೆ ಒಟ್ಟು 552* ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ವಿಕೆಟ್ ಸರದಾರರ ಪಟ್ಟಿಯಲ್ಲಿ ಸದ್ಯ 7ನೇ ಸ್ಥಾನಕ್ಕೇರಿದ್ದಾರೆ.

5 / 5
ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 133 ಟೆಸ್ಟ್ ಪಂದ್ಯಗಳ 230 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಮುರಳೀಧರನ್ 7339.5 ಓವರ್​ಗಳಲ್ಲಿ ಒಟ್ಟು 800 ವಿಕೆಟ್ ಕಬಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.