IND vs NZ: ಕಿವೀಸ್ಗೆ ಪುಣೆ ಟೆಸ್ಟ್ ಸುಂದರ ಸ್ವಪ್ನವಾದರೆ ಟೀ ಇಂಡಿಯಾಕ್ಕೆ ದುಃಸ್ವಪ್ನ
IND vs NZ: ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತದಲ್ಲಿ 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. 12 ವರ್ಷಗಳ ನಂತರ ಭಾರತ ತನ್ನ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಿದೆ. ಮಿಚೆಲ್ ಸ್ಯಾಂಟ್ನರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ನ್ಯೂಜಿಲೆಂಡ್ ಗೆಲುವಿಗೆ ಪ್ರಮುಖ ಕಾರಣ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಹಲವು ದಾಖಲೆಗಳನ್ನು ಸೃಷ್ಟಿಸಿದೆ.
1 / 10
ಕಳೆದ 12 ವರ್ಷಗಳಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಬಲಿಷ್ಠ ತಂಡಗಳೂ ಮಾಡಲಾಗದ ಸಾಧನೆಯನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡ ಮಾಡಿದೆ. ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿದ್ದ ಕಿವೀಸ್ ತಂಡ ತವರಿನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿದ ನ್ಯೂಜಿಲೆಂಡ್, ಪುಣೆ ಟೆಸ್ಟ್‌ನಲ್ಲಿ ಭಾರತ ತಂಡವನ್ನು 113 ರನ್‌ಗಳ ಅಂತರದಿಂದ ಸೋಲಿಸಿತು.
2 / 10
ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಅಲ್ಲದೆ, 12 ವರ್ಷಗಳ ನಂತರ ಟೀಂ ಇಂಡಿಯಾ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿದೆ. ಈ ಫಲಿತಾಂಶದೊಂದಿಗೆ ನ್ಯೂಜಿಲೆಂಡ್ ಕೆಲವು ವಿಶೇಷ ದಾಖಲೆಗಳನ್ನು ಮಾಡಿದ್ದರೆ, ಟೀಂ ಇಂಡಿಯಾ ತನ್ನ ಖಾತೆಗೆ ಅನಗತ್ಯ ದಾಖಲೆಗಳನ್ನು ಹಾಕಿಕೊಂಡಿದೆ.
3 / 10
21 ನೇ ಶತಮಾನದಲ್ಲಿ, ನ್ಯೂಜಿಲೆಂಡ್ ಭಾರತಕ್ಕೆ ಬಂದು ಟೆಸ್ಟ್ ಸರಣಿಯನ್ನು ಗೆದ್ದ ನಾಲ್ಕನೇ ತಂಡವಾಗಿದೆ. ಈ 24 ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ (2000), ಆಸ್ಟ್ರೇಲಿಯಾ (2004) ಮತ್ತು ಇಂಗ್ಲೆಂಡ್ (2012) ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿದ್ದವು. ಈ ತಂಡಗಳನ್ನು ಹೊರತುಪಡಿಸಿ ಉಳಿದ ಯಾವ ತಂಡಕ್ಕೂ ಟೀಂ ಇಂಡಿಯಾವನ್ನು ಸೋಲಿಸಲು ಆಗಿರಲಿಲ್ಲ.
4 / 10
ನ್ಯೂಜಿಲೆಂಡ್ ತನ್ನ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದು ಟೆಸ್ಟ್ ಸರಣಿಯನ್ನು ಗೆದ್ದಿದೆ. ಸುಮಾರು 70 ವರ್ಷಗಳ ಇತಿಹಾಸದಲ್ಲಿ ಈ ಮೊದಲು ಭಾರತದಲ್ಲಿ ಕೇವಲ 2 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ಕಿವೀಸ್ ತಂಡ ಇದೀಗ 2 ಪಂದ್ಯ ಹಾಗೂ ಸರಣಿಯನ್ನು ಏಕಕಾಲದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದೆ.
5 / 10
ನ್ಯೂಜಿಲೆಂಡ್ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡಿರುವ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಈ ಪಂದ್ಯದಲ್ಲಿ ಒಟ್ಟು 13 ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 7 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಕ್ಕೂ ಮೊದಲು ಸ್ಯಾಂಟ್ನರ್ ತಮ್ಮ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ ಒಮ್ಮೆಯೂ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಿರಲಿಲ್ಲ.
6 / 10
ಅಲ್ಲದೆ, ಮಿಚೆಲ್ ಸ್ಯಾಂಟ್ನರ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಲ್ಲದೆ, ಪುಣೆಯಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸಹ ಮಾಡಿದರು. ಇದಕ್ಕೂ ಮುನ್ನ ಈ ದಾಖಲೆ 2017ರಲ್ಲಿ 12 ವಿಕೆಟ್ ಕಬಳಿಸಿದ್ದ ಆಸ್ಟ್ರೇಲಿಯಾದ ಸ್ಟೀವ್ ಓಕೀಫ್ ಅವರ ಹೆಸರಿನಲ್ಲಿತ್ತು.
7 / 10
ಇಷ್ಟೇ ಅಲ್ಲ, ಸ್ಯಾಂಟ್ನರ್ ಒಂದೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನ್ಯೂಜಿಲೆಂಡ್ನ ಎರಡನೇ ಅತ್ಯುತ್ತಮ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. 2021 ರಲ್ಲಿ ಮುಂಬೈ ಟೆಸ್ಟ್‌ನಲ್ಲಿ 14 ವಿಕೆಟ್‌ಗಳನ್ನು ಪಡೆದ ಅಜಾಜ್ ಪಟೇಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
8 / 10
ಈ ಸೋಲಿಗೂ ಮೊದಲು, ಟೀಂ ಇಂಡಿಯಾ ತವರಿನಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿತ್ತು, ಇದು ಕ್ರಿಕೆಟ್ ಇತಿಹಾಸದಲ್ಲಿ ಸುದೀರ್ಘ ಗೆಲುವಿನ ಸರಣಿಯಾಗಿತ್ತು. ಇದೀಗ ಈ ಗೆಲುವಿನ ಪ್ರಯಾಣ ಈಗ ಅಂತ್ಯಗೊಂಡಿದೆ.
9 / 10
ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಒಟ್ಟು 8 ರನ್ ಗಳಿಸಿದ್ದು, ಇದು ಕಳೆದ 16 ವರ್ಷಗಳಲ್ಲಿ ಭಾರತದಲ್ಲಿ ಯಾವುದೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕನೊಬ್ಬ ಕಲೆಹಾಕಿದ ಅತಿ ಕಡಿಮೆ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅನಿಲ್ ಕುಂಬ್ಳೆ 5 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
10 / 10
ಈ ವರ್ಷ ತವರಿನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದೆ. ಈ ಮೂಲಕ 41 ವರ್ಷಗಳ ಬಳಿಕ ಭಾರತ ತವರಿನಲ್ಲಿ 3 ಟೆಸ್ಟ್‌ಗಳಲ್ಲಿ ಸೋಲು ಕಂಡಿದೆ. ಈ ಹಿಂದೆ 1983ರಲ್ಲಿಯೂ ಟೀಂ ಇಂಡಿಯಾ 3 ಟೆಸ್ಟ್‌ಗಳಲ್ಲಿ ಸೋತಿತ್ತು.