IPL 2025: ಐಪಿಎಲ್ ಮೆಗಾ ಹರಾಜಿಗೆ ಕೆಎಲ್ ರಾಹುಲ್

IPL 2025 KL Rahul: ಐಪಿಎಲ್ 2022ರ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಕೆಎಲ್ ರಾಹುಲ್ ಅವರನ್ನು ಬರೋಬ್ಬರಿ 17 ಕೋಟಿ ರೂ.ಗೆ ಖರೀದಿಸಿತ್ತು. ಕಳೆದ ಮೂರು ಸೀಸನ್​ಗಳಲ್ಲಿ ಎಲ್​ಎಸ್​ಜಿ ಪರ ಕಣಕ್ಕಿಳಿದಿದ್ದ ರಾಹುಲ್ ಈ ಬಾರಿ ಮತ್ತೆ ಹರಾಜಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.

|

Updated on: Oct 27, 2024 | 7:53 AM

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಎಲ್​ಎಸ್​ಜಿ ಫ್ರಾಂಚೈಸಿ ನೀಡಿದ ಆಫರ್ ಅನ್ನು ರಾಹುಲ್ ತಿರಸ್ಕರಿಸಿದ್ದು, ಹೀಗಾಗಿ ಅವರು ಮೆಗಾ ಆಕ್ಷನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

1 / 6
ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಕೆಎಲ್ ರಾಹುಲ್ ಅವರನ್ನು ಕೇವಲ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳಲು ಬಯಸಿತ್ತು ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ರಾಹುಲ್ ಅವರಿಂದ ಸಕರಾತ್ಮಕ ಸ್ಪಂದನೆ ದೊರೆತಿಲ್ಲ. ಹೀಗಾಗಿ ಕನ್ನಡಿಗನನ್ನು ಕೈ ಬಿಡಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ನಿರ್ಧರಿಸಿದೆ.

2 / 6
ಕಳೆದ ಮೂರು ಸೀಸನ್​ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಅವರ ನಾಯಕತ್ವದಲ್ಲಿ ತಂಡವು ಸತತ ವೈಫಲ್ಯ ಅನುಭವಿಸಿತ್ತು. ಇದೇ ಕಾರಣದಿಂದಾಗಿ ಕಳೆದ ಸೀಸನ್​ನಲ್ಲಿ ಎಸ್​ಆರ್​ಹೆಚ್ ವಿರುದ್ಧದ ಪಂದ್ಯದ ಬಳಿಕ ರಾಹುಲ್ ಅವರನ್ನು ಎಲ್​ಎಸ್​ಜಿ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದರು.

3 / 6
ಇದಾದ ಬಳಿಕ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಬಳಿಕ ಸಂಜೀವ್ ಗೊಯೆಂಕಾ ಜೊತೆ ಕಾಣಿಸಿಕೊಳ್ಳುವ ಮೂಲಕ ಕೆಎಲ್ ರಾಹುಲ್ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಗೊಯೆಂಕಾ ಕೂಡ ಕೆಎಲ್ ರಾಹುಲ್ ನಮ್ಮ ಕುಟುಂಬದ ಅಂಗ ಎಂದಿದ್ದರು.

4 / 6
ಆದರೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಒಡಂಬಡಿಕೆಗೆ ಕೆಎಲ್ ರಾಹುಲ್ ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿಯೇ ಐಪಿಎಲ್ ಮೆಗಾ ಹರಾಜಿಗೂ ಮುನ್ನ ನಾಯಕನನ್ನು ತಂಡದಿಂದ ಕೈ ಬಿಡಲು ಎಲ್​ಎಸ್​ಜಿ ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.

5 / 6
ಅದರಂತೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಈ ಹರಾಜಿನ ಮೂಲಕ ಕನ್ನಡಿಗ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

6 / 6
Follow us
ವಾರ ಭವಿಷ್ಯ: ಅಕ್ಟೋಬರ್ 28 ರಿಂದ ನವೆಂಬರ್​ 03ರವರೆಗೆ ವಾರ ಭವಿಷ್ಯ ಹೀಗಿದೆ

Nithya Bhavishya: ಈ ರಾಶಿಯವರು ಇಂದು ಆರ್ಥಿಕವಾಗಿ ಸಬಲರಾಗುತ್ತಾರೆ

ಕರುವನ್ನು ಇಡಿಯಾಗಿ ನುಂಗಿದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್

ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?

ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ

ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ

ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್

ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ

ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ

ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್