ಪೂರನ್ ಪವರ್​ಗೆ ಹಳೆಯ ದಾಖಲೆ ಉಡೀಸ್​: ಟೀಮ್ ಇಂಡಿಯಾ ವಿರುದ್ದ ಹೊಸ ರೆಕಾರ್ಡ್

| Updated By: ಝಾಹಿರ್ ಯೂಸುಫ್

Updated on: Aug 07, 2023 | 9:05 PM

India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ನಾಳೆ (ಆಗಸ್ಟ್ 8) ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

1 / 7
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ರೂವಾರಿ ಎಡಗೈ ದಾಂಡಿಗ ನಿಕೋಲಸ್ ಪೂರನ್.

2 / 7
ಟೀಮ್ ಇಂಡಿಯಾ ನೀಡಿದ 153 ರನ್​ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 40 ಎಸೆತಗಳನ್ನು ಎದುರಿಸಿದ ನಿಕ್ಕಿ-ಪಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 67 ರನ್​ ಚಚ್ಚಿದರು. ಇದರೊಂದಿಗೆ ಟೀಮ್ ಇಂಡಿಯಾ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಅತೀ 50+ ಸ್ಕೋರ್​ಗಳಿಸಿ ಬ್ಯಾಟರ್ ಎಂಬ ದಾಖಲೆ ಪೂರನ್ ಪಾಲಾಯಿತು.

3 / 7
ಇದಕ್ಕೂ ಮುನ್ನ ಈ ದಾಖಲೆ ಜೋಸ್ ಬಟ್ಲರ್, ಕ್ವಿಂಟನ್ ಡಿಕಾಕ್ ಹಾಗೂ ಕಾಲಿನ್ ಮನ್ರೊ ಹೆಸರಿನಲ್ಲಿತ್ತು. ಇಂಗ್ಲೆಂಡ್ ತಂಡದ ಹೊಡಿಬಡಿ ದಾಂಡಿಗ ಬಟ್ಲರ್ ಭಾರತದ ವಿರುದ್ಧ ಒಟ್ಟು 4 ಬಾರಿ ಅರ್ಧಶತಕಕ್ಕಿಂತ ಹೆಚ್ಚಿನ ರನ್ ಬಾರಿಸಿ ಅಬ್ಬರಿಸಿದ್ದರು.

4 / 7
ಇನ್ನು ಸೌತ್ ಆಫ್ರಿಕಾ ಡಿಕಾಕ್ ಕೂಡ ಭಾರತದ ವಿರುದ್ಧ 4 ಬಾರಿ 50+ ಸ್ಕೋರ್​ಗಳಿಸಿದ್ದಾರೆ.

5 / 7
ಹಾಗೆಯೇ ನ್ಯೂಝಿಲೆಂಡ್ ತಂಡದ ಎಡಗೈ ದಾಂಡಿಗ ಕಾಲಿನ್ ಮನ್ರೊ ಕೂಡ ನಾಲ್ಕು ಬಾರಿ ಟೀಮ್ ಇಂಡಿಯಾ ವಿರುದ್ಧ ಅರ್ಧಶತಕ್ಕಿಂತ ಹೆಚ್ಚಿನ ರನ್​ಗಳಿಸಿದ್ದಾರೆ.

6 / 7
ಇದೀಗ ನಿಕೋಲಸ್ ಪೂರನ್ ಟೀಮ್ ಇಂಡಿಯಾ ವಿರುದ್ಧ ಒಟ್ಟು 5 ಬಾರಿ 50+ ರನ್​ ಬಾರಿಸಿದ್ದಾರೆ. ಮೂಲಕ ಭಾರತದ ವಿರುದ್ಧ ಅತ್ಯಧಿಕ ಬಾರಿ ಅರ್ಧಶತಕಕ್ಕಿಂತ ಹೆಚ್ಚಿನ ರನ್​ಗಳಿಸಿ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

7 / 7
ಇನ್ನು ಭಾರತದ ವಿರುದ್ಧದ ಈ ಪಂದ್ಯದಲ್ಲಿ ಪೂರನ್ ಅವರ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು 18.5 ಓವರ್​ಗಳಲ್ಲಿ ಗುರಿ ಮುಟ್ಟಿತು. ಈ ಮೂಲಕ 2 ವಿಕೆಟ್​ಗಳ ಗೆಲುವು ದಾಖಲಿಸಿದೆ.