Nitish Rana: ನಿತೀಶ್ ರಾಣ ಕೆಕೆಆರ್ ತಂಡದ ನಾಯಕನಾಗಲು ಕಾರಣವೇನು ಗೊತ್ತೇ?: ಇಲ್ಲಿದೆ ಅಸಲಿ ಮಾಹಿತಿ

|

Updated on: Mar 28, 2023 | 10:29 AM

KKR New Captain: ಕೆಕೆಆರ್ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ ಬಳಲುತ್ತಿರುವ ಕಾರಣ ನಿತೀಶ್ ರಾಣಾ ಅವರಿಗೆ ಕೆಕೆಆರ್ ತಂಡದ ನಾಯಕನ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ನಿರ್ಧಾರವನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ಪ್ರಕಟಿಸಿದೆ.

1 / 8
ಇಂಡಿಯನ್ ಪ್ರೀಮಿಯರ್ ಲೀಗ್ 2023 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 31 ರಂದು ಈ ಚುಟುಕು ಸಮರಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿದ್ದು ಆಟಗಾರರು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇದರ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸೋಮವಾರ ನಿತೀಶ್ ರಾಣ ಅವರನ್ನು ನಾಯಕನನ್ನಾಗಿ ಘೋಷಿಸಿ ಶಾಕಿಂಗ್ ಸುದ್ದಿ ನೀಡಿತು.

2 / 8
ಕೆಕೆಆರ್ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ ಬಳಲುತ್ತಿರುವ ಕಾರಣ ರಾಣಾ ಅವರಿಗೆ ಕೆಕೆಆರ್ ತಂಡದ ನಾಯಕನ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ನಿರ್ಧಾರವನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ಪ್ರಕಟಿಸಿದೆ.

3 / 8
ಕೆಕೆಆರ್ ತಂಡದ ನಾಯಕತ್ವದ ರೇಸ್​ನಲ್ಲಿ ಆಂಡ್ರೆ ರಸೆಲ್, ಶಾರ್ದೂಲ್ ಥಾಕೂರ್, ಸುನಿಲ್ ನರೈನ್ ಮತ್ತು ಪ್ರಸ್ತುತ ನ್ಯೂಜಿಲೆಂಡ್ ಟೆಸ್ಟ್ ನಾಯಕ ಟಿಮ್ ಸೌಥಿ ಅವರ ಹೆಸರೂ ಕೇಳಿಬಂದಿತ್ತು. ಆದರೆ, ಅಚ್ಚರಿ ಎಂಬಂತೆ ನಿತೀಶ್ ರಾಣಾಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ. ಹಾಗಾದರೆ ನಿತೀಶ್ ರಾಣ ಕೆಕೆಆರ್ ತಂಡದ ನಾಯಕನಾಗಲು ಕಾರಣವೇನು?.

4 / 8
ನಾಯಕತ್ವದ ಅನುಭವವಿದೆ: ನಿತೀಶ್ ರಾಣಾಗೆ ಒಂದು ತಂಡವನ್ನು ಮುನ್ನಡೆಸಿದ ಅನುಭವವಿದೆ. ದೇಶೀಯ ಟೂರ್ನಿಯಲ್ಲಿ ಇವರು ಡೆಲ್ಲಿ ತಂಡದ ನಾಯಕನಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿಯನ್ನು ಮುನ್ನಡೆಸಿದ್ದಾರೆ. ಅದರಲ್ಲಿ ಎಂಟು ಪಂದ್ಯಗಳನ್ನು ಗೆದ್ದ ಸಾಧನೆ ಕೂಡ ಮಾಡಿದ್ದಾರೆ.

5 / 8
ದೇಶೀಯ ನಾಯಕನೇ ಉತ್ತಮ ಆಯ್ಕೆ: ಕೆಕೆಆರ್ ತಂಡದಲ್ಲಿ ನರೈನ್, ರಸೆಲ್, ಶಕಿಬ್, ಟಿಮ್ ಸೌಥಿ ಅಂತಹ ನಾಯಕತ್ವದ ಗುಣವಿರುವವರಿದ್ದಾರೆ. ಆದರೆ, ಅಭಿಮಾನಿಗಳಿಗೆ ಭಾರತದ ನಾಯಕನಾದರೆ ಹೆಚ್ಚಿನ ಒಲವು ಇರುತ್ತದೆ. ದೇಶೀಯ ಆಟಗಾರ ನಾಯಕನಾದರೆ ಇಲ್ಲಿನ ಪಿಚ್ ಬಗ್ಗೆ ಅಥವಾ ಹೆಚ್ಚಿನ ಜವಾಬ್ದಾರಿಯಿಂದ ಆಟವಾಡುತ್ತಾರೆ.

6 / 8
ಕೆಕೆಆರ್ ತಂಡಕ್ಕೆ ರಾಣ ಕೊಡುಗೆ: ಕೋಲ್ಕತ್ತಾ ತಂಡಕ್ಕೆ ರಾಣ ಕೊಡುಗೆ ಅಪಾರವಿದೆ. 2018 ರಿಂದಲೂ ಕೆಕೆಆರ್‌ನೊಂದಿಗೆ ನಿತೀಶ್​ ರಾಣ ಅವರ ಆಟದ ಅನುಭವದಿಂದ ಉತ್ತಮವಾಗಿ ನಿಭಾಯಿಸುವ ಭರವಸೆ ಮ್ಯಾನೇಜ್ಮೆಂಟ್​ಗೆ ಇದೆ. ಎಲ್ಲಾ ಐದು ಸೀಸನ್‌ ಗಳಲ್ಲಿಯೂ 300ಕ್ಕೂ ಹೆಚ್ಚು ರನ್​ಗಳನ್ನು ಗಳಿಸಿದ್ದಾರೆ.

7 / 8
2018ರಿಂದ ರಾಣಾ ಕೆಕೆಆರ್‌ನಲ್ಲಿ ಆಡುತ್ತಿದ್ದು, ಅವರು ಈ ವರೆಗೆ 74 ಪಂದ್ಯಗಳಲ್ಲಿ 26.02 ಸರಾಸರಿ ಮೂಲಕ ಒಟ್ಟು 1,744 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲಿ 87 ಅವರ ಗರಿಷ್ಠ ಮೊತ್ತವಾಗಿದೆ. 11 ಅರ್ಧ ಶತಕಗಳನ್ನು ಗಳಿಸಿದ್ದಾರೆ. 2021ರ ಜುಲೈ ನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಎರಡು ಟಿ20 ಮತ್ತು ಏಕದಿನ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

8 / 8
"ದೇಶಿ ಕ್ರಿಕೆಟ್‌ನಲ್ಲಿ ರಾಜ್ಯದ ವೈಟ್‌ ಬಾಲ್‌ ತಂಡವನ್ನು ಮುನ್ನಡೆಸಿದ ಅನುಭವ ಇರುವ ನಿತೀಶ್‌ ರಾಣಾ ತಂಡದಲ್ಲಿ ಇರುವುದು ನಮ್ಮ ಅದೃಷ್ಟ. ಜೊತೆಗೆ ಕೆಕೆಆರ್‌ ತಂಡದಲ್ಲಿ 2018ರಿಂದ ಆಡಿದ ಅನುಭವವೂ ಅವರಲ್ಲಿದೆ. ಹೀಗಾಗಿ ಕ್ಯಾಪ್ಟನ್‌ ಆಗಿ ಅವರು ಅತ್ಯುತ್ತಮ ಫಲಿತಾಂಶ ತರಲಿದ್ದಾರೆ ಎಂಬ ವಿಶ್ವಾಸವಿದೆ," ಎಂದು ಕೆಕೆಆರ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Published On - 10:29 am, Tue, 28 March 23