ODI World Cup 2023: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಗೆ 3 ಗುಡ್​ ನ್ಯೂಸ್

Edited By:

Updated on: Jul 16, 2023 | 8:30 PM

ODI World Cup 2023: ಐಪಿಎಲ್‌ಗೂ ಮುನ್ನ ಶ್ರೇಯಸ್ ಅಯ್ಯರ್ ಕೂಡ ಗಾಯಗೊಂಡಿದ್ದರು. ಹೀಗಾಗಿಯೇ ಅವರು ಐಪಿಎಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ.

1 / 5
ODI World Cup 2023: ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ 3 ತಿಂಗಳು ಮಾತ್ರ. ಇದರ ನಡುವೆ ಟೀಮ್ ಇಂಡಿಯಾ ಹಲವು ಸರಣಿಗಳನ್ನು ಆಡಬೇಕಿದೆ. ಈ ಮೂಲಕ ಏಕದಿನ ವಿಶ್ವಕಪ್​ಗಾಗಿ ಭರ್ಜರಿ ತಯಾರಿಗಳನ್ನು ನಡೆಸಬೇಕಿದೆ. ಅದಕ್ಕೂ ಮುನ್ನವೇ ಇದೀಗ ಟೀಮ್ ಇಂಡಿಯಾಗೆ 3 ಗುಡ್​ ನ್ಯೂಸ್ ಲಭಿಸಿದೆ. ಈ ಶುಭ ಸುದ್ದಿಯ ಮಾಹಿತಿ ಈ ಕೆಳಗಿನಂತಿದೆ...

ODI World Cup 2023: ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ 3 ತಿಂಗಳು ಮಾತ್ರ. ಇದರ ನಡುವೆ ಟೀಮ್ ಇಂಡಿಯಾ ಹಲವು ಸರಣಿಗಳನ್ನು ಆಡಬೇಕಿದೆ. ಈ ಮೂಲಕ ಏಕದಿನ ವಿಶ್ವಕಪ್​ಗಾಗಿ ಭರ್ಜರಿ ತಯಾರಿಗಳನ್ನು ನಡೆಸಬೇಕಿದೆ. ಅದಕ್ಕೂ ಮುನ್ನವೇ ಇದೀಗ ಟೀಮ್ ಇಂಡಿಯಾಗೆ 3 ಗುಡ್​ ನ್ಯೂಸ್ ಲಭಿಸಿದೆ. ಈ ಶುಭ ಸುದ್ದಿಯ ಮಾಹಿತಿ ಈ ಕೆಳಗಿನಂತಿದೆ...

2 / 5

ಸುಮಾರು ಒಂದೂವರೆ ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ವೇಗದ ಬೌಲರ್ ಜಸ್​ಪ್ರೀತ್​ ಬುಮ್ರಾ ಇದೀಗ ಶೀಘ್ರದಲ್ಲೇ ಕಂಬ್ಯಾಕ್ ಮಾಡಲಿದ್ದಾರೆ. ಈಗಾಗಲೇ ನೆಟ್ಸ್​ನಲ್ಲಿ ಅಭ್ಯಾಸವನ್ನು ಆರಂಭಿಸಿರುವ ಬುಮ್ರಾ, ಪ್ರತಿದಿನ ಸುಮಾರು 8 ರಿಂದ 10 ಓವರ್‌ಗಳವರೆಗೆ ಬೌಲಿಂಗ್ ಮಾಡುತ್ತಿದ್ದಾರೆ. ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ಅವರು ಶೀಘ್ರದಲ್ಲೇ ಸಂಪೂರ್ಣ ಫಿಟ್​ನೆಸ್​ನೊಂದಿಗೆ ತಂಡಕ್ಕೆ ಮರಳಲಿದ್ದಾರೆ.

3 / 5

ಕಳೆದ ವರ್ಷ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್​ನಲ್ಲಿ ಜಸ್​ಪ್ರೀತ್ ಬುಮ್ರಾ ಅವರ ಅಲಭ್ಯತೆಯು ಟೀಮ್ ಇಂಡಿಯಾಗೆ ಹಿನ್ನಡೆಯನ್ನುಂಟು ಮಾಡಿತ್ತು. ಹಾಗೆಯೇ ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲೂ ಬುಮ್ರಾ ಅನುಪಸ್ಥಿತಿಯು ಟೀಮ್ ಇಂಡಿಯಾದ ಫಲಿತಾಂಶದ ಪರಿಣಾಮ ಬೀರಿತ್ತು. ಇದೀಗ ಏಕದಿನ ವಿಶ್ವಕಪ್​ಗೂ ಮುನ್ನವೇ ಬುಮ್ರಾ ಅವರ ಕಂಬ್ಯಾಕ್ ಸುದ್ದಿಯು ಭಾರತ ತಂಡದ ಪಾಲಿಗೆ ಶುಭ ಸುದ್ದಿ ಎನ್ನಬಹುದು.

4 / 5

ಮತ್ತೊಂದೆಡೆ ಐಪಿಎಲ್‌ಗೂ ಮುನ್ನ ಶ್ರೇಯಸ್ ಅಯ್ಯರ್ ಕೂಡ ಗಾಯಗೊಂಡಿದ್ದರು. ಹೀಗಾಗಿಯೇ ಅವರು ಐಪಿಎಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್​ಗೂ ಮುನ್ನ ಅಯ್ಯರ್ ಕೂಡ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

5 / 5

ಕಳೆದ ಕೆಲವು ತಿಂಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಇದೀಗ ಚೇತರಿಸಿಕೊಂಡಿದ್ದಾರೆ. ಅಲ್ಲದೆ ನೆಟ್ಸ್​್ನಲ್ಲಿ ನಿರಂತರ ಬೌಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್​ಗೂ ನಡೆಯಲಿರುವ ಕೆಲ ಸರಣಿಗಳಲ್ಲಿ ಪ್ರಸಿದ್ಧ್ ಕೃಷ್ಣ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಅವರು ಮಿಂಚಿದರೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ.

Loading...
Unable to load recommendations.
Follow Us