- Kannada News Photo gallery Cricket photos Ricky Ponting named three young talents who can make it big for India in Test cricket
ಭಾರತ ಟೆಸ್ಟ್ ಕ್ರಿಕೆಟ್ನ ಭವಿಷ್ಯದ ಸೂಪರ್ಸ್ಟಾರ್ಗಳನ್ನು ಹೆಸರಿಸಿದ ರಿಕಿ ಪಾಂಟಿಂಗ್
Team India: ಅತಿ ಹೆಚ್ಚು ವಿಶ್ವಕಪ್ಗಳನ್ನು ಗೆದ್ದ ನಾಯಕ ಎಂಬ ವಿಶ್ವ ದಾಖಲೆ ಬರೆದಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಮುಂದೆ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಬಹುದಾದ ಮೂವರು ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದಾರೆ.
Updated on: Jul 17, 2023 | 8:40 AM

ಅತಿ ಹೆಚ್ಚು ವಿಶ್ವಕಪ್ಗಳನ್ನು ಗೆದ್ದ ನಾಯಕ ಎಂಬ ವಿಶ್ವ ದಾಖಲೆ ಬರೆದಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್, ಮುಂದೆ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಬಹುದಾದ ಮೂರು ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದಾರೆ.

ಟೀಂ ಇಂಡಿಯಾದ ಮೂವರು ಯುವ ಬ್ಯಾಟರ್ಗಳ ಮೇಲೆ ಹೆಚ್ಚು ವಿಶ್ವಾಸ ವ್ಯಕ್ತಪಡಿಸಿರುವ ಪಾಂಟಿಂಗ್, ತಮ್ಮ ಮೊದಲನೇಯ ಆಯ್ಕೆಯಾಗಿ ಯಶಸ್ವಿ ಜೈಸ್ವಾಲ್ರನ್ನು ಆರಿಸಿದ್ದಾರೆ. ಈ ಬಗ್ಗೆ ಹೇಳಿಕೆಯನ್ನು ನೋಡಿರುವ ಪಾಂಟಿಂಗ್, ಜೈಸ್ವಾಲ್ ಅವರ ಐಪಿಎಲ್ ಪ್ರದರ್ಶನದಿಂದ ಅವರ ಪ್ರತಿಭೆ ಸ್ಪಷ್ಟವಾಗಿದೆ. ಭವಿಷ್ಯದಲ್ಲಿ ಜೈಸ್ವಾಲ್ ರಾಷ್ಟ್ರೀಯ ತಂಡದಲ್ಲಿ ದೊಡ್ಡ ಸಾಧನೆ ಮಾಡಲಿದ್ದಾರೆ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಪಾಂಟಿಂಗ್, ನನ್ನ ಪ್ರಕಾರ ಈ ಬಾರಿಯ ಐಪಿಎಲ್ ಜೈಸ್ವಾಲ್ ಅವರಿಗೆ ವಿಶೇಷವಾಗಿತ್ತು. ಅವರು ಬಹುತೇಕ ಸ್ವಿಚ್ ಅನ್ನು ಫ್ಲಿಕ್ ಮಾಡಿ ರಾತ್ರೋರಾತ್ರಿ ಸೂಪರ್ಸ್ಟಾರ್ ಆಗಿ ಮಾರ್ಪಟ್ಟರು. ಅವರು ಪ್ರತಿಭಾವಂತ ಯುವಕ ಎಂದು ಎಲ್ಲರಿಗೂ ತಿಳಿದಿತ್ತು, ಆದರೆ ಈ ವರ್ಷದ ಐಪಿಎಲ್ನಲ್ಲಿ ಅವರು ಎಲ್ಲಾ ರೀತಿಯ ಪ್ರತಿಭೆಯನ್ನು ಹೊಂದಿದ್ದಾರೆ ಎಂಬುದನ್ನು ನಾನು ಗಮನಿಸಿದೆ ಎಂದು ಹೇಳಿದ್ದಾರೆ.

ಹಾಗೆಯೇ ತಮ್ಮ ಎರಡನೇಯ ಆಯ್ಕೆಯಾಗಿ ರುತುರಾಜ್ ಗಾಯಕ್ವಾಡ್ರನ್ನು ಆರಿಸಿರುವ ಪಾಂಟಿಂಗ್, ರುತುರಾಜ್ ಕೂಡ ಜೈಸ್ವಾಲ್ ಅವರಂತೆಯೇ ಪ್ರತಿಭಾವಂತ ಕ್ರಿಕೆಟಿಗ. ಈ ಇಬ್ಬರು ಮುಂದಿನ ಎರಡು ವರ್ಷಗಳಲ್ಲಿ ಆಲ್-ಫಾರ್ಮ್ಯಾಟ್ ಆಟಗಾರನಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮೂರನೇ ಆಟಗಾರನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ಸರ್ಫರಾಜ್ ಖಾನ್ ಪರ ಬ್ಯಾಟ್ ಬೀಸಿರುವ ಪಾಂಟಿಂಗ್, ಸರ್ಫರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಖಾಯಂ ಆಟಗಾರನಾಗಬಹುದಾದ ಪ್ರತಿಭೆಯನ್ನು ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಫರಾಜ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲ್ಲಿದ್ದಾರೆ ಎಂದಿದ್ದಾರೆ.




