ODI World Cup 2023: ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿದರೆ ಐಸಿಸಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ

|

Updated on: Jun 29, 2023 | 7:28 AM

ODI World Cup 2023: ಒಂದು ವೇಳೆ ಪಾಕ್ ತಂಡ ವಿಶ್ವಕಪ್​ನಿಂದ ಹಿಂದೆ ಸರಿದರೆ, ಐಸಿಸಿ ಮುಂದಿರುವ ಸವಾಲುಗಳೇನು? ಅದಕ್ಕೆ ಐಸಿಸಿ ಯಾವ ರೀತಿಯ ಪರಿಹಾರ ಕಂಡುಕೊಂಡಿದೆ ಎಂಬುದರ ವಿವರ ಇಲ್ಲಿದೆ.

1 / 10
ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟವಾದ ಬಳಿಕ ಇದೀಗ ವಿಶ್ವ ಕ್ರಿಕೆಟ್​ನ ಗಮನ ಪಾಕಿಸ್ತಾನದತ್ತ ಹರಿದಿದೆ. ಏಕೆಂದರೆ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಪಾಕ್ ಸರ್ಕಾರ ಪಾಕಿಸ್ತಾನ ತಂಡವನ್ನು ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣ ಮಾಡಲು ಅನುಮತಿ ನೀಡುತ್ತಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

2 / 10
ಈ ಹಿಂದೆ ಭಾರತದಲ್ಲಿ ನಡೆಯಲ್ಲಿರುವ ವಿಶ್ವಕಪ್‌ ಆಡಲು ಪಾಕಿಸ್ತಾನ ಭಾರತಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಐಸಿಸಿ ಹೇಳಿಕೆ ನೀಡಿತ್ತು. ಆದರೆ ಆ ನಂತರ ಹೇಳಿಕೆ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ನಮ್ಮ ತಂಡ  ಭಾರತಕ್ಕೆ ಪ್ರಯಾಣಿಸಬೇಕೋ ಅಥವಾ ಬೇಡವೋ ಎಂಬುದನ್ನು ಪಾಕಿಸ್ತಾನ ಸರ್ಕಾರ ನಿರ್ಧರಿಸುತ್ತದೆ ಎಂದಿದೆ.

3 / 10
ಹೀಗಾಗಿ ಪಾಕ್ ತಂಡ ವಿಶ್ವಕಪ್ ಆಡುವ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಒಂದು ವೇಳೆ ಪಾಕ್ ತಂಡ ವಿಶ್ವಕಪ್​ನಿಂದ ಹಿಂದೆ ಸರಿದರೆ, ಐಸಿಸಿ ಮುಂದಿರುವ ಸವಾಲುಗಳೇನು? ಅದಕ್ಕೆ ಐಸಿಸಿ ಯಾವ ರೀತಿಯ ಪರಿಹಾರ ಕಂಡುಕೊಂಡಿದೆ ಎಂಬುದರ ವಿವರ ಇಲ್ಲಿದೆ.

4 / 10
ಪಾಕಿಸ್ತಾನ ಸರ್ಕಾರ ತನ್ನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ಒಪ್ಪದಿದ್ದರೆ, ಆಗ ಪಾಕಿಸ್ತಾನ ತಂಡ ವಿಶ್ವಕಪ್​ನಿಂದ ಹಿಂದೆ ಸರಿಯಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಐಸಿಸಿ ಪಾಕ್ ಮಂಡಳಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ.

5 / 10
ಅಲ್ಲದೆ ವಿಶ್ವಕಪ್​ನಿಂದ ಪಾಕ್ ತಂಡ ಹಿಂದೆ ಸರಿಯುವುದರಿಂದ ಖಾಲಿಯಾಗುವ ಆ ಜಾಗಕ್ಕೆ ಮತ್ತೊಂದು ತಂಡವನ್ನು ಐಸಿಸಿ ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕೆ ಈಗಾಗಲೇ ತಯಾರಿ ನಡೆಸಿರುವ ಐಸಿಸಿ, ಸದ್ಯ ನಡೆಯುತ್ತಿರುವ ವಿಶ್ವಕಪ್ ಕ್ವಾಲಿಫೈಯರ್ ಸುತ್ತಿನಲ್ಲಿ 3ನೇ ಸ್ಥಾನ ಪಡೆಯುವ ತಂಡವನ್ನು ವಿಶ್ವಕಪ್​ಗೆ ಆಯ್ಕೆ ಮಾಡಬಹುದಾಗಿದೆ.

6 / 10
ಐಸಿಸಿ ನಿಯಮದ ಪ್ರಕಾರ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ವಿಶ್ವಕಪ್​ಗೆ ಅರ್ಹತೆ ಪಡೆಯಲ್ಲಿವೆ. ಇದೀಗ ಪಾಕ್ ತಂಡ ವಿಶ್ವಕಪ್​ನಿಂದ ಹೊರಬಿದ್ದರೆ, ಆ ಸ್ಥಾನಕ್ಕೆ ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನ ಪಡೆಯುವ ತಂಡ ಎಂಟ್ರಿಕೊಡಲಿದೆ.

7 / 10
ಒಂದರ್ಥದಲ್ಲಿ ಪಾಕ್ ತಂಡ ವಿಶ್ವಕಪ್​ನಿಂದ ಹೊರಬೀಳುವುದು ಅರ್ಹತಾ ಸುತ್ತಿನಲ್ಲಿ ಆಡುತ್ತಿರುವ ತಂಡಗಳಿಗೆ ಲಾಭ ತಂದುಕೊಡಲಿದೆ. ಅರ್ಹತಾ ಸುತ್ತಿನಲ್ಲಿ ಈಗಾಗಲೇ ಸೂಪರ್ ಸಿಕ್ಸ್ ಹಂತ ಆರಂಭವಾಗಿದೆ. ಇಲ್ಲಿಯವರೆಗಿನ ಪ್ರದರ್ಶನವನ್ನು ನೋಡಿದರೆ, ವಿಶ್ವಕಪ್​ಗೆ ಅರ್ಹತೆ ಪಡೆಯಲು ಶ್ರೀಲಂಕಾ, ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ಪ್ರಮುಖ ಸ್ಪರ್ಧಿಗಳಾಗಿವೆ.

8 / 10
ಇದರಲ್ಲಿ ಶ್ರೀಲಂಕಾ ಹಾಗೂ ಜಿಂಬಾಬ್ವೆ ವಿಶ್ವಕಪ್​ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಪಾಕ್ ತಂಡ ವಿಶ್ವಕಪ್​ನಿಂದ ಹೊರನಡೆದರೆ, ಸಂಕಷ್ಟದಲ್ಲಿರುವ ವೆಸ್ಟ್ ಇಂಡೀಸ್ ಹಾಗೂ ನೆದರ್​ಲೆಂಡ್ಸ್ ತಂಡಗಳಿಗೆ ಇದು ವರವಾಗಲಿದೆ.

9 / 10
ಒಂದು ವೇಳೆ ಪಾಕಿಸ್ತಾನದ ಸ್ಥಾನದಲ್ಲಿ ಬೇರೆ ಯಾವ ತಂಡವನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಐಸಿಸಿ ನಿರ್ಧರಿಸಿದರೆ, ಪಂದ್ಯಾವಳಿಯಲ್ಲಿ ಒಂಬತ್ತು ತಂಡಗಳು ಮಾತ್ರ ಆಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡಲಿರುವ ತಂಡಗಳಿಗೆ ತಲಾ ಎರಡು ಅಂಕಗಳನ್ನು ನೀಡಲಾಗುತ್ತದೆ.

10 / 10
ಈ ವರ್ಷ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಭಾಗವಹಿಸದಿದ್ದರೆ, ಪಾಕಿಸ್ತಾನವಿಲ್ಲದೆ ವಿಶ್ವಕಪ್ ಆಡುವುದು ಇದೇ ಮೊದಲು. ಈ ತಂಡವು 1992 ರಲ್ಲಿ ವಿಶ್ವ ಚಾಂಪಿಯನ್ ಆಗಿತ್ತು. ಆದರೆ ಅಂದಿನಿಂದ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಪಾಕ್ ತಂಡಕ್ಕೆ ಸಾಧ್ಯವಾಗಿಲ್ಲ.

Published On - 7:26 am, Thu, 29 June 23